ಕೊಪ್ಪಳದ ಶ್ರೀ ಲಕ್ಷ್ಮಿ ಚಿತ್ರಮಂದಿರಕ್ಕೆ ‘ಗ್ರಾಮಾಯಣ’ ಚಿತ್ರತಂಡ ಭೇಟಿ – ಅಭಿಮಾನಿಗಳ ಸಂಭ್ರಮಕ್ಕೆ ನಾಯಕ ನಟ ವಿನಯ್ ರಾಜ್‌ಕುಮಾರ್ ಫುಲ್ ಖುಷ್

Get real time updates directly on you device, subscribe now.

 

 

 

ಜುಲೈ 9: ರಾಜ್ಯಾದಾದ್ಯಂತ ಬಿಡುಗಡೆಯಾಗಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿರುವ ‘ಗ್ರಾಮಾಯಣ’ ಚಿತ್ರದ ಪ್ರಚಾರದ ಅಂಗವಾಗಿ ನಾಯಕ ನಟ ವಿನಯ್ ರಾಜ್‌ಕುಮಾರ್ ಹಾಗೂ ಚಿತ್ರದ ನಿರ್ದೇಶಕ, ಚಿತ್ರತಂಡ ಇಂದು ಕೊಪ್ಪಳದ ಶ್ರೀ ಲಕ್ಷ್ಮಿ ಚಿತ್ರಮಂದಿರಕ್ಕೆ ಭೇಟಿ ನೀಡಿದರು.
ಚಿತ್ರಮಂದಿರಕ್ಕೆ ಆಗಮಿಸಿದ ವಿನಯ್ ರಾಜ್‌ಕುಮಾರ್ ಅವರನ್ನು ಅಭಿಮಾನಿಗಳು ಪಟಾಕಿ ಸಿಡಿಸಿ, ಹೂಮಾಲೆ ಹಾಗೂ ಘೋಷಣೆಗಳೊಂದಿಗೆ ಆತ್ಮೀಯವಾಗಿ ಸ್ವಾಗತಿಸಿದರು ಹಾಗೂ ಸನ್ಮಾನಿಸಲಾಯಿತು ಚಿತ್ರ ವೀಕ್ಷಿಸಲು ಆಗಮಿಸಿದ್ದ ಪ್ರೇಕ್ಷಕರ ಉದ್ದೇಶಿಸಿ ಮಾತನಾಡಿ ಚಿತ್ರದ ಬಗ್ಗೆ ವ್ಯಕ್ತವಾಗುತ್ತಿರುವ ಮೆಚ್ಚುಗೆಗೆ ಕೃತಜ್ಞತೆ ಸಲ್ಲಿಸಿದರು. ಉತ್ತಮ ಕಥೆ ಹಾಗೂ ಗ್ರಾಮೀಣ ಬದುಕಿನ ಸೊಗಡನ್ನು ಒಳಗೊಂಡಿರುವ ‘ಗ್ರಾಮಾಯಣ’ ಚಿತ್ರವನ್ನು ಕುಟುಂಬ ಸಮೇತರಾಗಿ ವೀಕ್ಷಿಸಿ
ಕನ್ನಡ ಚಿತ್ರಗಳನ್ನು ಹೆಚ್ಚು ಹೆಚ್ಚು ವೀಕ್ಷಿಸಿ ಪ್ರೋತ್ಸಾಹಿಸುವಂತೆ ಹೇಳಿದರು. ನಂತರ ಶ್ರೀ ಗವಿಮಠಕ್ಕೆ ತೆರಳಿ ಶ್ರೀ ಗವಿಸಿದ್ದೇಶ್ವರ ಗದ್ದಿಗೆ ದರ್ಶನ ಪಡೆದರು.
ಈ ಸಂದರ್ಭದಲ್ಲಿ ಚಿತ್ರಮಂದಿರದ ಮಾಲೀಕರಾದ ವೀರೇಶ್ ಮಹಾಂತಯ್ಯನಮಠ, ವಿಶ್ವನಾಥ್ ಮಹಾಂತಯ್ಯನಮಠ, ಹಿರಿಯ ಸಾಹಿತಿ ಹಾಗು ಚಲನಚಿತ್ರ ನಿರ್ಮಾಪಕ ಡಾ. ಮಹಾಂತೇಶ್ ಮಲ್ಲನಗೌಡರ, ಶಿವಮೂರ್ತಯ್ಯ ಮಹಾಂತಯ್ಯನ ಮಠ, ಡಾ: ರಾಜಕುಮಾರ್ ಕುಟುಂಬದ ಅಭಿಮಾನಿಗಳಾದ ವೆಂಕಟೇಶ್ ಗಂಗಾವತಿ ಅಜಯ್ ಬಸವರಾಜ್ ವಿಶ್ವನಾಥ್ ಸ್ವಾಮಿ ಮಂಜುನಾಥ ವ್ಯವಸ್ಥಾಪಕ ಶಿವಾನಂದಯ್ಯ ಉತ್ತಂಗಿ ಮಠ,
ಚಿತ್ರತಂಡದ ಸದಸ್ಯರು, ಹಾಗೂ ವಿನಯರಾಜಕುಮಾರ್ ಅಭಿಮಾನಿಗಳು ಉಪಸ್ಥಿತರಿದ್ದರು.

ಶ್ರೀ ಲಕ್ಷ್ಮಿ ಚಿತ್ರಮಂದಿರದಲ್ಲಿ ನೆರೆದಿದ್ದ ಅಭಿಮಾನಿಗಳು ವಿನಯ್ ರಾಜ್‌ಕುಮಾರ್ ಅವರೊಂದಿಗೆ ಸೆಲ್ಫಿ ತೆಗೆದುಕೊಂಡು, ಆಟೋಗ್ರಾಫ್ ಪಡೆದು ಸಂಭ್ರಮಿಸಿದರು. ಚಿತ್ರತಂಡದ ಭೇಟಿ ಚಿತ್ರಮಂದಿರದ ವಾತಾವರಣವನ್ನು ಇನ್ನಷ್ಟು ಉತ್ಸಾಹಭರಿತಗೊಳಿಸಿತು.
ಒಟ್ಟಾರೆಯಾಗಿ, ‘ಗ್ರಾಮಾಯಣ’ ಚಿತ್ರದ ಯಶಸ್ಸಿನ ಸಂಭ್ರಮದ ನಡುವೆ ಕೊಪ್ಪಳದ ಶ್ರೀ ಲಕ್ಷ್ಮಿ ಚಿತ್ರಮಂದಿರಕ್ಕೆ ಚಿತ್ರತಂಡ ನೀಡಿದ ಭೇಟಿ ಅಭಿಮಾನಿಗಳಿಗೆ ಸ್ಮರಣೀಯ ಕ್ಷಣವಾಗಿ ಪರಿಣಮಿಸಿತು.

Get real time updates directly on you device, subscribe now.

Comments are closed.

error: Content is protected !!