ಹನುಮಂತಪ್ಪ ಭೀಮಪ್ಪ ಕುಂಟೋಜಿ ನಿಧನ

ಕೊಪ್ಪಳ ಜೂನ್ 09:
ಜಿಲ್ಲೆಯ ಕಾರಟಗಿ ತಾಲ್ಲೂಕಿನ ಯರಡೋಣಿ ಗ್ರಾಮದ ಹನುಮಂತಪ್ಪ ಭೀಮಪ್ಪ ಕುಂಟೋಜಿ(82) ಇಂದು ಬೆಳಿಗ್ಗೆ ಕೊನೆಯುಸಿರೆಳೆದರು.
ಪತ್ನಿ, ,ಹೊಸಪೇಟೆಯ ಪಿಯು ಕಾಲೇಜಿನ ಉಪನ್ಯಾಸಕ ಮಲ್ಲಿಕಾರ್ಜುನ,ನೀರಾವರಿ ಇಲಾಖೆಯ ಪರಶುರಾಮ, ಗುಡಗೇರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ.ಭೀಮೇಶ್ , ಕಂಪ್ಲಿ ಪಿಡಿಓ ಬೀರಲಿಂಗ,ಯಲಬುರ್ಗಾದ ಮುಖ್ಯ ಪೊಲೀಸ್ ಪೇದೆ ವಿರೂಪಾಕ್ಷ ಸೇರಿದಂತೆ ಐವರು ಪುತ್ರರು,
ಶಿಕ್ಷಕಿ ದುರ್ಗಮ್ಮ ಟಿ ಗೊರವರ್ ಸೇರಿ ಮೂವರು ಪುತ್ರಿಯರು , ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಉತ್ತಮ ಕೃಷಿಕರು,ಶ್ರಮಜೀವಿಗಳಾಗಿ ತುಂಬು ಜೀವನ ನಡೆಸಿದ ಇವರು ಕಳೆದ ಕೆಲವು ದಿನಗಳಿಂದ ಪಾರ್ಶ್ವವಾಯುಗೆ ಒಳಗಾಗಿ,ಚಿಕಿತ್ಸೆ ಪಡೆಯುತ್ತಿದ್ದರು.
ಮೃತರ ಪಾರ್ಥಿವ ಶರೀರದ ಅಂತ್ಯಕ್ರಿಯೆಯ ಇಂದು ಸಂಜೆ ಸ್ವಗ್ರಾಮ ಯರಡೋಣದಲ್ಲಿ ಜರುಗಲಿದೆ.
Comments are closed.