ಕೊಪ್ಪಳ ಜಿಲ್ಲಾ ಆರ್ಯವೈಶ್ಯ ಸಮಾವೇಶ 

Koppal District Arya Vaishya Samavesha

0

Get real time updates directly on you device, subscribe now.

ಕೊಪ್ಪಳ 18:

ಇಂದು ಕೊಪ್ಪಳದ ವಾಸವಿ ಮಂಗಳ ಭವನದಲ್ಲಿ ಕೊಪ್ಪಳ ಜಿಲ್ಲಾ ಆರ್ಯವೈಶ್ಯ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು.  ಕರ್ನಾಟಕ ಆರ್ಯವೈಶ್ಯ ಮಹಾಸಬೆಯ ಅಧ್ಯಕ್ಷರಾದ ಆರ್‌ಪಿ ರವಿಶಂಕರ್ ಅವರ ನೇತೃತ್ವದಲ್ಲಿ ಕೊಪ್ಪಳ ಜಿಲ್ಲಾ ಸಮಾವೇಶ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಈ ವೇದಿಕೆಯಲ್ಲಿ ವಾಸವಿ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸಲು ಮತ್ತು ಆರ್ಯವೈಶ್ಯ ಜಾತಿಯನ್ನು ಒಬಿಸಿಗೆ ಸೇರಿಸಲು ಸರ್ಕಾರಕ್ಕೆ ಒತ್ತಾಯ ತರುವ ನಿಟ್ಟಿನಲ್ಲಿ ರಾಜ್ಯಾಧ್ಯಕ್ಷರಿಗೆ ಮನವಿಯನ್ನು ಕೊಪ್ಪಳ ಜಿಲ್ಲಾ ಸಮಿತಿಯ ಅಧ್ಯಕ್ಷರಾದ  ಶ್ರೀನಿವಾಸ್ ಗುಪ್ತಾವರು ಹಾಗೂ ಕೊಪ್ಪಳ ಅವೋಪಾ ಘಟಕದ ಅಧ್ಯಕ್ಷರಾದ  ರಾಘವೇಂದ್ರ ಪಾನಘಂಟಿ ಅವರು ಮನವಿಯನ್ನು ಸಲ್ಲಿಸಿದರು ಸಮಾವೇಶದಲ್ಲಿ ನೆರೆದಿದ್ದ ಜಿಲ್ಲೆಯಾದ್ಯಂತ ಆಗಮಿಸಿದ ಆರ್ಯವೈಶ್ಯರನ್ನುದ್ದೇಶಿಸಿ ಮಾತನಾಡಿದ ರಾಜ್ಯಾಧ್ಯಕ್ಷರು ಆರ್ಯವೈಶ್ಯ ಸಮಾಜದವರ ಮೂಲ ಉದ್ಯೋಗವಾದ ವ್ಯಾಪಾರಕ್ಕೆ ಯುವಜನತೆಯು ಮರಳಿ ಬರಬೇಕು ಎನ್ನುವ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಅಂತರಾಷ್ಟ್ರೀಯ ಮಟ್ಟದ ಆರ್ಯವೈಶ್ಯ ಸಮ್ಮೇಳನವನ್ನು ಬೆಂಗಳೂರಿನಲ್ಲಿ ಹಮ್ಮಿಕೊಳ್ಳುವ ವಿಚಾರವನ್ನು ತಿಳಿಸಿದರು ಹಾಗೂ ಮಹಾಸಭೆಯ ಯೋಜನೆಗಳನ್ನು ಕುರಿತು ನಿರ್ದೇಶಕರಾದ ನಾರಾಯಣ ಕುರುಗೋಡು, ಸಂತೋಷ್ ಕೆಲೋಜಿ, ರಾಘವೇಂದ್ರ ಬೆಲ್ಲಂಕೊಂಡಿಯವರು ಮಾತನಾಡಿದರು ಅಂತರರಾಷ್ಟ್ರೀಯ ಆರ್ಯವೈಶ್ಯ ಸಮ್ಮೇಳನದ ಸಂಚಾಲಕರಾದ ಅನಿಲ್ ತಲ್ಲಮ್ಮ ಅವರು ಬೆಂಗಳೂರಿನಲ್ಲಿ ನಡೆಯುವ  ಸಮಾವೇಶವ ಬಗ್ಗೆ ವಿವರಣೆಯನ್ನು ನೀಡಿದರು ಈ ಸಮಯದಲ್ಲಿ  ಹೆಚ್ ಜೆ ಹನುಮಂತಯ್ಯನವರು ಪ್ರಾಸ್ತಾವಿಕ ನುಡಿಯನ್ನಾಡಿದರು , ನಾಮ ನಾಗರಾಜ,  ರಾಘವೇಂದ್ರ ಚಿತ್ರಾಲಿ, ರಾಕೇಶ್ ಪಾನಘಂಟಿ ಮತ್ತು ಶೋಭಾ ಮಾದಿನೂರು ವೇದಿಕೆಯ ಮೇಲೆ ಉಪಸ್ಥಿತರಿದ್ದರು ಕೊಪ್ಪಳ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಡಿ ಗುರುರಾಜ ಅವರು ವಂದನಾರ್ಪಣೆಯನ್ನು ಸಲ್ಲಿಸಿದರು.

Koppal District Arya Vaishya Samavesha

Koppal 18:

The Koppal District Arya Vaishya Samavesha was organized at Vasavi Mangala Bhavan in Koppal today. The Koppal District Conference was organized under the leadership of RP Ravishankar, President of Karnataka Arya Vaishya Mahasabha. At this forum, Srinivas Gupta, President of Koppal District Committee, and Raghavendra Panaghanti, President of Koppal AVOPA Unit, submitted a petition to the State President to celebrate Vasavi Jayanti as a government program and to urge the government to include the Arya Vaishya caste in the OBC category. Addressing the Arya Vaishyas who had come from all over the district who had gathered at the conference, the State President spoke about the idea of ​​organizing an international level Arya Vaishya Conference in Bangalore in the coming days in order to encourage the youth to return to business, which is the original occupation of the Arya Vaishya community. Directors Narayana Kurugodu, Santosh Keloji, and Raghavendra Bellamkondi spoke about the plans of the conference. Anil Tallamma, Convener of the International Arya Vaishya Conference He gave an explanation about the conference to be held in Bangalore. During this time, H. J. Hanumanthaiyya delivered the introductory speech. Nama Nagaraj, Raghavendra Chitrali, Rakesh Panaghanti and Shobha Madinur were present on the stage. D. Gururaja, General Secretary of the Koppal District Committee, presented the vote of thanks.

Get real time updates directly on you device, subscribe now.

Leave A Reply

Your email address will not be published.

error: Content is protected !!