ಬಿನ್ನಾಳ ಗ್ರಾಮದಲ್ಲಿ ಓಪನ್ ಕ್ರಿಕೆಟ್ ಟೂರ್ನಮೆಂಟ್ ಸಮಾರೋಪ : ವಿಜೇತ ತಂಡಗಳಿಗೆ ಬಹುಮಾನ ವಿತರಣೆ

0

Get real time updates directly on you device, subscribe now.

ಕುಕನೂರ: ಬಿನ್ನಾಳ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಓಪನ್ ಕ್ರಿಕೆಟ್ ಟೂರ್ನಮೆಂಟ್‌ನ ಫೈನಲ್ ಪಂದ್ಯ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮವು ಶುಕ್ರವಾರ ಸಂಜೆ ಸಂಭ್ರಮದಿಂದ ನಡೆಯಿತು.

ಕಾರ್ಯಕ್ರಮದಲ್ಲಿ ಪತ್ರಕರ್ತ ಜಗದೀಶ ಚಟ್ಟಿ ಮಾತನಾಡಿ, ಯಾವುದೇ ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ, ಭಾಗವಹಿಸುವಿಕೆ ಮುಖ್ಯವಾಗಿದೆ ಎಂದು ಹೇಳಿದರು. ಕ್ರೀಡೆ ಪ್ರತಿಯೊಬ್ಬರ ಆರೋಗ್ಯ ವೃದ್ಧಿಗೆ ಉತ್ತಮ ವೇದಿಕೆಯಾಗಿದ್ದು, ಯುವಕರು ದುಶ್ಚಟಗಳಿಗೆ ಬಲಿಯಾಗದೆ ಆರೋಗ್ಯಕರ ಜೀವನ ನಡೆಸಬೇಕಾದರೆ ಕ್ರೀಡೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು. ಕ್ರೀಡಾಕೂಟ ಯಶಸ್ವಿಗೆ ಆಯೋಜಕರ ನಿರಂತರ ಶ್ರಮ ಕಾರಣವಾಗಿದ್ದು ಆಟಗಾರರ ಪರವಾಗಿ ಅವರಿಗೆ ಆಬಿನಂದನೆಗಳನ್ನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಯುವ ಮುಖಂಡ ಕಲ್ಲಪ್ಪ ಕರೆಣ್ಣವರ, ಕಾಂಗ್ರೆಸ್ ಗ್ಯಾರಂಟಿ ಸಮಿತಿ ಸದಸ್ಯ ಸಂತೋಷ ಮೆಣಸಿನಕಾಯಿ, ಕ್ರೀಡಾ ಪ್ರೇಮಿಗಳಾದ ಕಳಕಪ್ಪ ಕಲ್ಲೂರ, ಮಂಜುನಾಥ ಪಂತರ, ಮುತ್ತಪ್ಪ ಗುರಿಕಾರ, ಬಸವರಾಜ ಕೊಪ್ಪದ, ರಮೇಶ ಮ್ಯಾಗೇರಿ, ಪ್ರಗತಿಪರ ರೈತ ಕೋಟೇಶ ಮೆಣಸಿನಕಾಯಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಟೂರ್ನಮೆಂಟ್‌ನಲ್ಲಿ ಬಿನ್ನಾಳ ಗ್ರಾಮದ ಬಿಸಿಸಿ ತಂಡ ಪ್ರಥಮ ಸ್ಥಾನ ಪಡೆದು ₹21 ಸಾವಿರ ನಗದು ಹಾಗೂ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಈ ಬಹುಮಾನವನ್ನು ಗ್ರಾಮದ ಕ್ರೀಡಾ ಪ್ರೇಮಿ ಹಾಗೂ ತಾ.ಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ ಅವರು ಪ್ರಾಯೋಜಿಸಿದ್ದರು.
ಅಳವಂಡಿ ಗ್ರಾಮದ ಕ್ರಿಕೆಟ್ ತಂಡ ದ್ವಿತೀಯ ಸ್ಥಾನ ಪಡೆದು ₹11 ಸಾವಿರ ನಗದು ಹಾಗೂ ಟ್ರೋಫಿ ಪಡೆದಿತು.
ತೃತೀಯ ಸ್ಥಾನವನ್ನು ಬಿನ್ನಾಳ ಗ್ರಾಮದ ಆರ್ಸಿಬಿ ತಂಡ ಪಡೆದು ₹7,100 ನಗದು ಹಾಗೂ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.
ಬಹುಮಾನವನ್ನು ಗ್ರಾಮದ ಕ್ರೀಡಾ ಪ್ರೇಮಿ ಹಾಗೂ ಬಿಜೆಪಿ ಯುವ ಮುಖಂಡ ಕಲ್ಲಪ್ಪ ಕರೆಣ್ಣವರ ಅವರು ಪ್ರಾಯೋಜಿಸಿದ್ದರು.
ಕ್ರಿಕೆಟ್ ಟೂರ್ನಮೆಂಟ್ ಯಶಸ್ವಿಯಾಗಿ ಜರುಗಲು ಆಟಗಾರರಿಗೆ ಜರ್ಸಿ, ಬ್ಯಾಟ್, ಬಾಲ್ ಉಡುಗೊರೆ ನೀಡಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕಾರ ನೀಡಿದವರಿಗೆ ಅಭಿ‌ನಂದಿಸಲಾಯಿತು.
———–

Get real time updates directly on you device, subscribe now.

Leave A Reply

Your email address will not be published.

error: Content is protected !!