72 ಕೋಟಿ ವೆಚ್ಚದಲ್ಲಿ ಹುಲಿಗೆಮ್ಮ ದೇವಸ್ಥಾನದ ಅಭಿವೃದ್ಧಿ ಕಾಮಗಾರಿಗಳಿಗೆ ಶೀಘ್ರದಲ್ಲಿ ಟೆಂಡರ್ – ಹಿಟ್ನಾಳ್
ಹಿಟ್ನಾಳ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ 12.38 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅಡಿಗಲ್ಲು.
ಕೊಪ್ಪಳ : ನಮ್ಮ ಭಾಗದ ಆದಿಶಕ್ತಿ ಆಗಿರುವ ಶ್ರೀ ಹುಲಿಗೆಮ್ಮ ದೇವಿಯ ದೇವಸ್ಥಾನವನ್ನು ಅಭಿವೃದ್ಧಿಪಡಿಸಲು ಹಲವು ಯೋಜನೆ ಗಳನ್ನು ರೂಪಿಸಿದ್ದೇವೆ. ಈಗಾಗಲೇ ಹಲವು ಕಾಮಗಾರಿಗಳನ್ನು ಕೈಗೊಂಡಿದ್ದು ಈಗಾಗಲೇ ಹಲವು ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ ನಿನ್ನೆ ಬೆಂಗಳೂರಿನಲ್ಲಿ ಸಾರಿಗೆ ಮತ್ತು ಮುಜರಾಯಿ ಇಲಾಖೆಯ ಸಚಿವರಾದ ರಾಮಲಿಂಗ ರೆಡ್ಡಿ ಅವರನ್ನು ಭೇಟಿಯಾಗಿ ಶ್ರೀ ಹುಲಿಗೆಮ್ಮ ದೇವಿಯ ಜಾತ್ರೆಗೆ ಅಹ್ವಾನಿಸಿದ ವೇಳೆಯಲ್ಲಿ ಇನ್ನೂ 72 ಕೋಟಿ ವೆಚ್ಚದ ವೆಚ್ಚದ ಕಾಮಗಾರಿಗಳಿಗೆ ಶೀಘ್ರದಲ್ಲಿ ಟೆಂಡರ್ ಕರೆಯಲು ಅಧಿಕಾರಿಗಳಿಗೆ ಸೂಚನೆ ನೀಡಬೇಕೆಂದು ಸಚಿವರ ಗಮನಕ್ಕೆ ತಂದಿದ್ದೇನೆ ಎಂದು
ಕೊಪ್ಪಳದ ಶಾಸಕರಾದ ಕೆ ರಾಘವೇಂದ್ರ ಹಿಟ್ನಾಳ್ ಹೇಳಿದರು. ಅವರು ಹಿಟ್ನಾಳ ಜಿ. ಪಂ ವ್ಯಾಪ್ತಿಯ ಹಿಟ್ನಾಳ, ಕಂಪಸಾಗರ,ಹುಲಿಗಿ, ಮುನಿರಾಬಾದ್ ಆರ್ ಎಸ್, ಹಳೆಲಿಂಗಪುರ, ಹೊಸಲಿಂಗಪುರ,ಮಟ್ಟಿ ಮುದ್ಲಾಪುರ,ಹೊಳೆ ಮುದ್ಲಾಪುರ ಮುನಿರಾಬಾದ್ ಡ್ಯಾಮ್ ಹಾಗೂ ಹೊಸಳ್ಳಿ ಗ್ರಾಮದಲ್ಲಿ 12.38 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅಡಿಗಲ್ಲು ನೆರವೇರಿಸಿದರು.

ನಂತರ ಹುಲಿಗಿಯಲ್ಲಿ ಮಾತನಾಡಿದ ಶಾಸಕ ಕೆ ರಾಘವೇಂದ್ರ ಹಿಟ್ನಾಳ್
ಶ್ರೀ ಹುಲಿಗೆಮ್ಮ ದೇವಸ್ಥಾನಕ್ಕೆ ಹಿಟ್ನಾಳ ಕ್ರಾಸ್ ಮುಖಾಂತರ ಹೆಚ್ಚಿನ ಭಕ್ತರು ಸಂಚಾರ ಮಾಡುತ್ತಿರುವುದರಿಂದ ಈಗಾಗಲೇ ಆ ರಸ್ತೆಗೂ ಕೂಡ 4.20 ಕೋಟಿ ಅನುಧಾನ ನೀಡಿದ್ದು ಈಗಾಗಲೇ ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಹೇಳಿದರು.
ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಅಡಿಗಲ್ಲು : ಕೊಪ್ಪಳ ತಾಲೂಕಿನ ಹಿಟ್ನಾಳ ಗ್ರಾಮದಲ್ಲಿ 4 ಕೋಟಿ ವೆಚ್ಚದಲ್ಲಿ ಹಾಗೂ ಹೊಸಹಳ್ಳಿ ಗ್ರಾಮದಲ್ಲಿ 4 ಕೋಟಿ ವೆಚ್ಚದಲ್ಲಿ ಸರಕಾರಿ ಪ್ರಾಥಮಿಕ /ಪ್ರೌಢ ಶಾಲೆಯನ್ನು ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಪರಿವರ್ತಿಸಿ ಮೂಲಭೂತ ಸೌಕರ್ಯ ಒದಗಿಸುವ ಕಾಮಗಾರಿಗೆ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅಡಿಗಲ್ಲು ನೆರವೇರಿಸಿದರು.
ಸಮುದಾಯ ಭವನ ಕಾಮಗಾರಿಗಳಿಗೆ ಅಡಿಗಲ್ಲು : ಕೊಪ್ಪಳ ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ ಅವರು ಹಿಟ್ನಾಳ ಗ್ರಾಮದಲ್ಲಿ 25 ಲಕ್ಷ ವೆಚ್ಚದಲ್ಲಿ ಬಾವಸರ ಕ್ಷತ್ರಿಯ ಹಾಗೂ 25 ಲಕ್ಷ ವೆಚ್ಚದ ಆರ್ಯ ವೈಷ್ಯ ಸಮಾಜದ ಸಮುದಾಯ ಭವನ, ಹುಲಿಗಿಯಲ್ಲಿ 25 ಲಕ್ಷ ವೆಚ್ಚದಲ್ಲಿ ಭೋವಿ ಸಮಾಜದ, 25 ಲಕ್ಷ ವೆಚ್ಚದಲ್ಲಿ ಸವಿತ ಸಮಾಜದ ಹಾಗೂ 20 ಲಕ್ಷ ವೆಚ್ಚದಲ್ಲಿ ವಾಲ್ಮೀಕಿ ಸಮಾಜದ ಸಮುದಾಯ ಭವನ ನಿರ್ಮಾಣದ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿದರು.
ಈ ಸಂಧರ್ಭದಲ್ಲಿ ಮಾಜಿ ನಾಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀನಿವಾಸ್ ಗುಪ್ತಾ, ವಿ. ಆರ್ ಪಾಟೀಲ್,ಮಾಜಿ ಜಿ. ಪಂ ಸದಸ್ಯ ಗವಿಸಿದ್ದಪ್ಪ ಕರಡಿ, ಗ್ಯಾರಂಟಿ ಸಮಿತಿ ಅಧ್ಯಕ್ಷ ಬಾಲಚಂದ್ರನ್ ಮುನಿರಬಾದ್, ಕೆ ಎಂ ಸೈಯದ್,ವಿಶ್ವನಾಥ್ ರಾಜೂರು, ಪಾಲಾಕ್ಷಪ್ಪ ಗುಂಗಾಡಿ, ಯಂಕಪ್ಪ ಹೊಸಳ್ಳಿ, ಚಿನ್ನಿ ಆರ್ ಎಸ್ ಈರಣ್ಣ ಹುಲಿಗಿ,ಧರ್ಮಣ್ಣ ಕಂಪಸಾಗರ, ಪ್ರಶಾಂತ್ ಗೌಡ್ರು, ನಾರಾಯಣ ಬಿಲಂಕರ್, ವೆಂಕಟೇಶ್ ಹಿಟ್ನಾಳ,ಸೋಮಶೇಖರ್ ಹಿಟ್ನಾಳ,ಹನಮಂತಪ್ಪ ಹ್ಯಾಟಿ, ಶರಣಪ್ಪ ಉಪ್ಪಾರ್, ಮಾರುತಿ ಬಗನಾಳ, ರಾಮೂರ್ತಿ ಮುನಿರಬಾದ್, ಬಸಣ್ಣ ಬೇವುರು,ಅಶೋಕ್ ಹಿಟ್ನಾಳ, ಹನಮಂತ ಗಿಡ್ಡಾಲಿ, ತಹಶೀಲ್ದಾರ್ ಬಸವರಾಜ,ಅಕ್ಬರ್ ಪಲ್ಟಾನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.