ದೋಟಿಹಾಳದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

ಕುಷ್ಟಗಿ:
ತಾಲೂಕಿನ ದೋಟಿಹಾಳ ಗ್ರಾಮದ ಶ್ರೀ ಶುಕಮುನಿ ಸ್ವಾಮಿ ದೇವಸ್ಥಾನದ ಸಭಾಂಗಣದಲ್ಲಿ ವಿಪಿಕೆ ಫೌಂಡೇಶನ್, ಶ್ರೀ ದಯಾನಂದಪುರಿ ಸಂಘ, ಗಾಯತ್ರಿ ಮಹಿಳಾ ಸಂಘ, ಗ್ರಾಮ ಪಂಚಾಯತ ದೋಟಿಹಾಳ, ಆರೋಗ್ಯ ಕೇಂದ್ರ ದೋಟಿಹಾಳ ಸಹಯೋಗದಲ್ಲಿ
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಸೀಮಂತ ಕಾರ್ಯಕ್ರಮ, ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಕಿತ್ತೂರುರಾಣಿ ಚನ್ನಮ್ಮ ಹಾಗೂ ಅಭಿನವ ಗವಿಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು.
ಅಂಗನವಾಡಿ ಮೇಲ್ವಿಚಾರಕಿ ಅನ್ನಪೂರ್ಣ ಪಾಟೀಲ ಮಾತನಾಡಿ ಮಹಿಳೆಯರು ಸಮಾಜದ ಅಭಿವೃದ್ಧಿಗೆ ಪ್ರಮುಖ ಶಕ್ತಿಯಾಗಿದ್ದು, ಶಿಕ್ಷಣ, ಸ್ವಾವಲಂಬನೆ ಮತ್ತು ಆತ್ಮವಿಶ್ವಾಸದ ಮೂಲಕ ಜೀವನದಲ್ಲಿ ಯಶಸ್ಸು ಸಾಧಿಸಬೇಕು ಎಂದು ತಿಳಿಸಿದರು. ಮಹಿಳಾ ಸಬಲೀಕರಣವೇ ಸಮಾನ ಸಮಾಜ ನಿರ್ಮಾಣದ ಅಡಿಪಾಯವಾಗಿದ್ದು, ಪ್ರತಿಯೊಬ್ಬ ಮಹಿಳೆಯೂ ತನ್ನ ಹಕ್ಕುಗಳ ಬಗ್ಗೆ ಅರಿವು ಹೊಂದಬೇಕು ಎಂದು ಹೇಳಿದರು.
ಕಸಾಪ ತಾಲೂಕು ಅಧ್ಯಕ್ಷ ಲೆಂಕಪ್ಪ ವಾಲಿಕಾರ ಮಾತನಾಡಿ, ಮಹಿಳೆಯರ ಸಾಧನೆಗಳು ಇಂದು ಎಲ್ಲಾ ಕ್ಷೇತ್ರಗಳಲ್ಲೂ ಗುರುತಿಸಿಕೊಂಡಿವೆ. ಸಾಹಿತ್ಯ, ಶಿಕ್ಷಣ, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ಮುನ್ನಡೆ ಸಾಧಿಸುತ್ತಿರುವುದು ಸಮಾಜದ ಅಭಿವೃದ್ಧಿಗೆ ಉತ್ತಮ ಸೂಚನೆ ಎಂದು ಅಭಿಪ್ರಾಯಪಟ್ಟರು.
ಉಪ ಪ್ರಾಂಶುಪಾಲರು ಡಿ ಸುರೇಶ್ ಮಾತನಾಡಿ, ಮಹಿಳೆಯರ ಹಕ್ಕುಗಳ ರಕ್ಷಣೆ ಹಾಗೂ ಸಮಾನ ಅವಕಾಶಗಳ ಕಲ್ಪನೆ ಅಗತ್ಯವಾಗಿದ್ದು, ಮಹಿಳಾ ಸಬಲೀಕರಣದ ಮೂಲಕ ಸಮಾಜದಲ್ಲಿ ಸಮಾನತೆ ಸಾಧ್ಯವೆಂದು ಹೇಳಿದರು.
ಈ ಸಂದರ್ಭದಲ್ಲಿ 11 ಜನ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮವನ್ನು ಮಾಡಲಾಯಿತು
27 ಜನ ಸಾಧನೆಗೈದ ಸಾಧಕರಿಗೆ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಅಭಿನವ ಗವಿ ಶ್ರೀ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಕಸಾಪ ಹೋಬಳಿ ಘಟಕದ ಅಧ್ಯಕ್ಷ ನಿಂಗಪ್ಪ ಸಜ್ಜನ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕಾಧ್ಯಕ್ಷ ಪವಾಡೆಪ್ಪ ಚೌಡ್ಕಿ, ರಾಜ್ಯಮಟ್ಟದ ಕಿತ್ತೂರ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತೆ ಲಲೀತಮ್ಮ ಹಿರೇಮಠ, ರಾಜ್ಯಯುವ ಪ್ರಶಸ್ತಿ ಪುರಸ್ಕೃತ ಶ್ರೀನಿವಾಸ ಕಂಟ್ಲಿ, ಚುಸಾಪ ತಾಲೂಕಾಧ್ಯಕ್ಷ ಮಹೇಶ ಹಡಪದ, ಶಾರದಾ ಶೆಟ್ಟರ, ಗೌರಮ್ಮ ಕುಡತಿನಿ, ಅನಿತಾ ಗೋಗಿ, ಅಡಿವೆಮ್ಮ ಹಿರೇಮಠ, ಉಮಾಪತಿ ಮಾಳಗಿ, ನಾಗರಾಜ ಕಾಳಗಿ, ಪರಶಿವಮೂರ್ತಿ ಮಾಟಲದಿನ್ನಿ, ಸಂಗಮೇಶ ಲೂತಿಮಠ, ಚನ್ನಬಸವ ಚೌರಿ ಸೇರಿದಂತೆ ಅನೇಕರು ಇದ್ದರು.

ಪ್ರಶಸ್ತಿ ಪುರಸ್ಕೃತರು:
ವಂದನಾ ಗೋಗಿ, ರೇಣುಕಾ ಚಳ್ಳಾರಿ, ನಿಂಗಮ್ಮ ವಾಲಿಕಾರ, ಅಕ್ಕಮಹಾದೇವಿ ಗೋತಗಿ, ಶಾರದಾ ಚಟ್ಟೇರ, ಭಾರತಿ ಭಟ್,ಮೀನಾಕ್ಷಿ ಪತ್ತಾರ ಸೇರಿದಂತೆ ಇತರರಿಗೆ ಕಿತ್ತೂರರಾಣಿ ಚೆನ್ನಮ್ಮ ಪ್ರಶಸ್ತಿಯನ್ನು ವಿತರಿಸಲಾಯಿತು.
ಡಿ ಸುರೇಶ, ಚನ್ನಬಸವ ಕೊಟಗಿ, ಶೇಖರ್ ಹೊಗರಿ, ನಾಗರಾಜ ರೆಡ್ಡಿ, ಪ್ರಭು ಜಹಗೀರದಾರ, ವಿಜಯ ಮಹಾಂತೇಶ, ಜಗನ್ನಾಥ ಕೆಂಧೂಳಿ, ರೇಷ್ಮಾ ಕಂದಕೂರ ಸೇರಿದಂತೆ ಇತರರಿಗೆ ಅಭಿನವ ಗವಿಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

Comments are closed.