ಎಸ್ ಎಸ್ ಎಲ್ ಸಿ ಫಲಿತಾಂಶ:ಎಸ್ ವಿ ಸಿ ಶಾಲೆಗೆ ಉನ್ನತ ಶ್ರೇಣಿ

ಕೊಪ್ಪಳ: ಕುಷ್ಟಗಿ ಪಟ್ಟಣದ
ಎಸ್ ವಿ ಸಿ ಪ್ರಾಥಮಿಕ ಮತ್ತು ಪ್ರೌಢಶಾಲೆ 10ನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ 96% ಫಲಿತಾಂಶ ದಾಖಲಿಸಿದೆ ಎಂದು ಎಸ್ ವಿ ಸಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸಿ ವಿ ಚಂದ್ರಶೇಖರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಒಟ್ಟು ಇಬ್ಬರು ವಿದ್ಯಾರ್ಥಿಗಳು
‘ಏ ಪ್ಲಸ್ ಗ್ರೇಡ್’, 7 ವಿದ್ಯಾರ್ಥಿಗಳು ‘ಎ ಗ್ರೇಡ್’, 9 ವಿದ್ಯಾರ್ಥಿಗಳು ಪ್ರಥಮ ದರ್ಜೆ ಹಾಗೂ ಎಂಟು ವಿದ್ಯಾರ್ಥಿಗಳು ದ್ವಿತೀಯ ದರ್ಜೆ ಪಡೆದಿದ್ದಾರೆ.
ಪವನ್ ಕುಲಕರ್ಣಿ (92.48%), ವೈಷ್ಣವಿ ಕಾತರಕಿ (91.2%) ಹಾಗೂ ರಶ್ಮಿ ಕಳಸಿ (87.36%) ಕ್ರಮವಾಗಿ ಪ್ರಥಮ ಮೂರು ಸ್ಥಾನಗಳನ್ನು ಗಳಿಸಿದ್ದಾರೆ.
ಹಿಂದಿ ಭಾಷೆಯಲ್ಲಿ ರಶ್ಮಿಕಳಸಿ ಹಾಗೂ ಗೌತಮಿ ಹಿರೇಮಠ 100,
ಕನ್ನಡ ಭಾಷೆಯಲ್ಲಿ ಜಾನಕಿ ಗಂಗನಾಳ 124, ಇಂಗ್ಲೀಷ್ ಭಾಷೆಯಲ್ಲಿ ವೈಷ್ಣವಿ ಕಾತರಕಿ ಮತ್ತು ರಶ್ಮಿ ಕಳಸಿ 99 ಹಾಗೂ ಸಮಾಜ ವಿಜ್ಞಾನದಲ್ಲಿ ಪವನ್ ಕುಲಕರ್ಣಿ 98 ಅಂಕಗಳನ್ನು ಗಳಿಸಿ ವಿಶಿಷ್ಟ ಸಾಧನೆ ಮಾಡಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಸಿವಿ ಚಂದ್ರಶೇಖರ್ ಸಿ ಇ ಓ
ಡಾ. ಜಗದೀಶ್ ಅಂಗಡಿ, ಮುಖ್ಯೋಪಾಧ್ಯಾಯ ಸುರೇಶ್ ಹೊಸಮನಿ ಹಾಗೂ ಶಿಕ್ಷಕ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.
Comments are closed.