ಕೊಪ್ಪಳ ಇತಿಹಾಸ ಕುರಿತು ಉಪನ್ಯಾಸ
ಕೊಪ್ಪಳ : ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐ ಕ್ಯೂ ಎ ಸಿ ಘಟಕ ಹಾಗೂ ಇತಿಹಾಸ ವಿಭಾಗದಿಂದ ಉಪನ್ಯಾಸ ಹಾಗೂ ಪ್ರಾಚೀನ ಕಾಲದ ರಾಜಮನೆತನಗಳ ನಾಣ್ಯ ಗಳ ಪ್ರದರ್ಶನ ಇತ್ತೀಚಿಗೆ ಏರ್ಪಡಿಸಲಾಗಿತ್ತು. ಉಪನ್ಯಾಸಕರಾಗಿ ತಳಬಾಳ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶು ಪಾಲರು ಮತ್ತು ಇತಿಹಾಸ ವಿಭಾಗದ ಡಾ ಶುಭಾ ಇವರು ಕೊಪ್ಪಳದ ಗತ ಇತಿಹಾಸ ಮತ್ತು ರಾಜ ಮನೆತನಗಳ ಆಳ್ವಿಕೆಗಳ ಕುರಿತು ವಿದ್ಯಾರ್ಥಿಗಳನ್ನು ಉದ್ದೇಶೀಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಡಾ. ಶಾಂತಕುಮಾರ ಬಿ ಗೋಟೂರು ಇವರು ಪ್ರಾಚೀನ ಕಾಲದ ರಾಜಮನೆತನಗಳ ನಾಣ್ಯಗಳ ಪ್ರದರ್ಶನ ಏರ್ಪಡಿಸಿದ್ದರು . ವೇದಿಕೆ ಮೇಲೆ ಐ ಕ್ಯೂ ಎ ಸಿ ಘಟಕ ಸಂಚಾಲಕರಾದ ಪ್ರಕಾಶ ಗೌಡ ಎಸ್ ಯು, ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ. ಚೂಡಾಮಣಿ , ಇತಿಹಾಸ ಪ್ರಾಧ್ಯಾಪಕಿಯರಾದ ವಿಜಯಲಕ್ಶ್ಮೀ ಇದ್ದರು. ಅಧ್ಯಕ್ಷತೆಯನ್ನು ಹಿರಿಯ ಪ್ರಾಧ್ಯಾಪಕರಾದ ಮೃತ್ಯುಂಜಯ ಹಿರೇಮಠ ವಹಿಸಿದ್ದರು. ಸಮಾರಂಭದಲ್ಲಿ ಇತಿಹಾಸ ಉಪನ್ಯಾಸಕರಾದ , ಮಲ್ಲೇಶಪ್ಪ, ಶರಣಮ್ಮ ಶಂಕರ ಬಡಿಗೇರ ಹಾಗೂ ವಿದ್ಯಾರ್ಥಿಗಳಿದ್ದರು. . ಪ್ರಾರ್ಥನೆ ಇತಿಹಾಸ ವಿಭಾಗದ ಉಪನ್ಯಾಸಕರಾದ ಮಂಜುಳಾ ಗೌಡ್ರ , ಸ್ವಾಗತ ಬನ್ನೆಮ್ಮ , ಅತಿಥಿ ಪರಿಚಯ ಪಾಂಡೇಶ, ವಂದನಾರ್ಪಣೆ ಡಾ. ಭೀಮಾಶಂಕರ ಹಾಗೂ ನಿರೂಪಣೆಯನ್ನು ಜ್ಞಾನೇಶ್ ಪತ್ತಾರ ನೆರವೇರಿಸಿದರು.