ಗ್ರಂಥಾಲಯದಲ್ಲಿ ಸಂವಿಧಾನ ಪೀಠಿಕೆ ಓದು

Get real time updates directly on you device, subscribe now.

 ಕೊಪ್ಪಳ ನಗರದ ಸಾಹಿತ್ಯ ಭವನ ಹಿಂಭಾಗದ ಗ್ರಂಥಾಲಯ ಹಾಗೂ ಗಣೇಶ ನಗರದ ಗ್ರಂಥಾಲಯಗಳಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಭಾರತದ ಸಂವಿಧಾನ ಪೀಠಿಕೆಯನ್ನು ಓದುವ ಕಾರ್ಯಕ್ರಮ ಸೆ. 15ರಂದು ನಡೆಯಿತು.
ಜಿಲ್ಲಾ ಕೇಂದ್ರ ಗ್ರಂಥಾಲಯದ ಎಲ್ಲ ಶಾಖಾ ಗ್ರಂಥಾಲಯದಲ್ಲಿ ಸಾರ್ವಜನಿಕರೊಂದಿಗೆ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಭಾರತ ಸಂವಿಧಾನ ಪೀಠಿಕೆಯ ವಾಚನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಗ್ರಂಥಾಲಯಾಧಿಕಾರಿ ಯಮನೂರಪ್ಪ, ಗ್ರಂಥಾಲಯ ಸಹಾಯಕರಾದ ನಾಗರಾಜನಾಯಕ ಡೊಳ್ಳಿನ, ವಿಜಯಲಕ್ಷ್ಮೀ ವಡ್ಡಟ್ಟಿ, ಸಿಬ್ಬಂದಿ ಹಾಗೂ ಓದುಗರಾದ ದೇವೆಂದ್ರ, ಬಸವರಾಜ, ಅಣ್ಣಪ್ಪ, ಕನಕಪ್ಪ, ದುರಗಪ್ಪ, ಶರಣಪ್ಪ, ವಾಸೀಂ, ಲಕ್ಷ್ಮೀ, ರಂಜಿತಾ ಮತ್ತಿತರರಿದ್ದರು.

Get real time updates directly on you device, subscribe now.

Comments are closed.

error: Content is protected !!