ಸಮಾಜ ಸೇವಕಿ ಶಿಲ್ಪಾ ಪ್ರಕಾಶ ಮಂಗಳೂರ ಅವರಿಗೆ ‘ಅಕ್ಕ’ ರಾಷ್ಟ್ರ ಪ್ರಶಸ್ತಿ

Get real time updates directly on you device, subscribe now.

ಕೊಪ್ಪಳ:ವಚನಸಾಹಿತ್ಯದ  ವಚನಕೋಗಿಲೆ, ಪ್ರಪಥಮ  ಮಹಿಳಾ ಕವಿತ್ರಿಯಾದ ಜಗನ್ಮಾತೆ ಅಕ್ಕಮಹಾದೇವಿ ತಾಯಿಯವರ ಹೆಸರಲ್ಲಿ ನೀಡಲಾಗುವ  ಅಕ್ಕ ರಾಷ್ಟ್ರ ಪ್ರಶಸ್ತಿಯನ್ನು ಸಾಮಾಜಿಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಶಿಲ್ಪಾ ಪ್ರಕಾಶ ಮಂಗಳೂರ ಅವರಿಗೆ ನೀಡಿಡಲಾಗಿದೆ.

            ಬಸವಶ್ರೀ ಸೇವಾ ಟ್ರಸ್ಟ್ ಕೊಪ್ಪಳದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಬಸವಶ್ರೀ ಬಿ.ಸೋಮನಾಳ ಅವರ ನೇತೃತ್ವದಲ್ಲಿ  ಬಸವಶ್ರೀ ಸೇವಾ ಟ್ರಸ್ಟ ಮತ್ತು ಅಕ್ಕನಾಗಮ್ಮ ವೇದಿಕೆಯಿಂದ ಜರುಗಿದ ಮಹಿಳಾಗಣ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ 12ನೇ ಶತಮಾನದ 33ಜನ ಮಹಿಳಾ ವಚನಕಾರ್ತಿಯರ ಸವಿನೆನಪಿನಲ್ಲಿ ನಾಡಿನಾದ್ಯಂತ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆಯನ್ನು ಗುರುತಿಸಿ ನೀಡುವ ಅಕ್ಕ ರಾಷ್ಟ್ರ ಪ್ರಶಸ್ತಿಯನ್ನು  ಶಿಲ್ಪಾ ಪ್ರಕಾಶ ಮಂಗಳೂರ ಇವರಿಗೆ ಅಕ್ಕಮಹಾದೇವಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.  

            ಹೆಚ್ಐವಿ  ಸೊಂಕು  ತಗುಲಿದವರೊಂದಿಗೆ ಮಾತನಾಡಲು ಅಂಜುತ್ತಿರುವ ಸಮಯದಲ್ಲಿ ಶಿಲ್ಪಾ ಪ್ರಕಾಶ ಮಂಗಳೂರ ಇವರು ಸುಮಾರು 10 ವರ್ಷಗಳ ಕಾಲ ಹೆಚ್ಐವಿ ಸೋಂಕಿತರು ಹಾಗೂ ಏಡ್ಸ ಜಾಗೃತಿ ಕಾರ್ಯಕ್ರಮದಡಿಯಲ್ಲಿ ಕಾರ್ಯ ನಿರ್ವಹಿಸಿದ್ದು, ಸೋಂಕಿತರೊಂದಿಗೆ

ಇದ್ದು ಅವರಿಗೆ ಆಪ್ತಸಮಾಲೋಚನೆ ಮಾಡುವುದಲ್ಲದೇ ಸಮಾಜದಲ್ಲಿಯೂ ಕೂಡ ಅದರ ಅರಿವನ್ನು ಮೂಡಿಸುವ ಮೂಲಕ ಅವರನ್ನು ಸಹ ಸಮಾಜದ ಮುಖ್ಯವಾಹಿನಿಗೆ ಬರಲು ಶ್ರಮಿಸಿದ್ದಾರೆ, ಅದಕ್ಕಾಗಿ ಇವರ ಸಾಮಾಜಿಕ ಕಳಕಳಿ ಮತ್ತು ಸೇವೆಯನ್ನು ಗುರುತಿಸಿದೆ,  ಸಾಮಾಜಿಕ ಕ್ಷೇತ್ರದಲ್ಲಿ ಇವರ ಸೇವೆ ತುಂಬಾ ಶ್ಲಾಘನೀಯವಾಗಿದೆ ಎಂದು ಬಸವಶ್ರೀ ಸೇವಾ ಟ್ರಸ್ಟ್ ಕೊಪ್ಪಳದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಬಸವಶ್ರೀ ಬಿ ಸೋಮನಾಳ ಅವರು ಹೇಳಿದ್ದಾರೆ.

==ಸರ್ಕಾರೇತರ ಸಂಸ್ಥೆಗಳ ಮೂಲಕ ವಿವಿಧ ಕ್ಷೇತ್ರದಲ್ಲಿ ಸೇವಾಕಾರ್ಯ ಮತ್ತು ನಿಸ್ವಾರ್ಥ ಸೇವಾಮನೋಭಾವದಿಂದ ಜನರ ಶ್ರೇಯಾಭಿವೃದ್ಧಿಗಾಗಿ ಕೆಲಸ ಮಾಡಿರುವ ನನಗೆ  ಬಸವಶ್ರೀ ಸೇವಾ ಟ್ರಸ್ಟ ಮತ್ತು ಅಕ್ಕನಾಗಮ್ಮ ವೇದಿಕೆಯವರು ಮಹಿಳಾಗಣ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ 12ನೇ ಶತಮಾನದ 33ಜನ ಮಹಿಳಾ ವಚನಕಾರ್ತಿಯರ ಸವಿನೆನಪಿನಲ್ಲಿ ಅಕ್ಕ ರಾಷ್ಟ್ರ ಪ್ರಶಸ್ತಿಯನ್ನು  ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ,  ಈ ಪ್ರಶಸ್ತಿಯು ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದ್ದು,  ಮತ್ತಷ್ಟು ಸಮಾಜಿಕ ಕಳಕಳಿಯ ಸೇವೆ ಮಾಡಲು ಪ್ರೋತ್ಸಾಹಿಸಿದೆ: ಶಿಲ್ಪಾ ಪ್ರಕಾಶ ಮಂಗಳೂರ, ಸಮಾಜ ಸೇವಕಿ ಹಾಗೂ ಅಕ್ಕ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು, ಕೊಪ್ಪಳ==

Get real time updates directly on you device, subscribe now.

Comments are closed.

error: Content is protected !!