ಹ್ಯಾಟಿ ಮುಂಡರಗಿಯ ದುರ್ಗಮ್ಮಳನ್ನು ಭೇಟಿ ಮಾಡಿದ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ

Get real time updates directly on you device, subscribe now.

ಕೊಪ್ಪಳ: ತಾಲ್ಲೂಕಿನ ಹ್ಯಾಟಿ ಮುಂಡರಗಿ ಗ್ರಾಮದ ಅನಾಥ ದಲಿತ ಮಹಿಳೆಯನ್ನು ಭೇಟಿ ಮಾಡಿ, ಯಾವುದೇ ಆಧಾರವಿಲ್ಲದನ್ನು ಗಮನಿಸಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಎಂ. ಗೊಂಡಬಾಳ ಅವರು ದುರ್ಗಮ್ಮಳ ಗ್ರಾಮಕ್ಕೆ ಭೇಟಿ ನೀಡಿ, ಅವರಿಗೆ ಸರಕಾರಿ ಸೌಲಭ್ಯ ಸಿಗುವಂತೆ ಪ್ರಯತ್ನ ಮಾಡಲು ತಹಶೀಲ್ದಾರ ಅವರಿಗೆ ಕರೆ ಮಾಡಿ ಮಾತನಾಡಿದರು.
ಈ ವೇಳೆ ಮುಂಡರಗಿ ಗ್ರಾಮದ ಕೇರಿಯ ದುರ್ಗಾದೇವಿ ಗುಡಿಯ ಹತ್ತಿರ ಅನೇಕ ಮಹಿಳೆಯರನ್ನು ಸಹ ಭೇಟಿ ಮಾಡಿ ಮಾತನಾಡಿಸಿದರು. ವಯೋವೃದ್ಧ ದುರ್ಗಮ್ಮಳಿಗೆ ಕನಿಷ್ಠ ದಾಖಲೆಗಳು ಇಲ್ಲದಿರುವುದು ತುಂಬಾ ಬೇಸರದ ಸಂಗತಿ, ಅವರ ಹೆಸರನ್ನು ಮೊದಲು ಮತದಾರ ಪಟ್ಟಿಯಲ್ಲಿ ಸೇರಿಸಿ ನಂತರ ಆಧಾರ್ ಕಾರ್ಡ್ ಮಾಡಿಸಲು ಕಳಿಸಲಾಗಿದೆ ಎಂದು ತಹಶಿಲ್ದಾರ ಬಸವರಾಜ ಅವರು ದೂರವಾಣಿ ಕರೆಯಲ್ಲಿ ತಿಳಿಸಿದ್ದನ್ನು ದುರ್ಗಮ್ಮಳಿಗೆ ತಿಳಿಸಲಾಯಿತು. ನಂತರ ಅವರ ಆಧಾರ್ ಬಂದ ನಂತರ ಗೃಹಲಕ್ಷ್ಮೀ ಸೇರಿ ವಿವಿಧ ಸೌಲಭ್ಯಗಳನ್ನು ಒದಗಿಸುವ ಭರವಸೆ ನೀಡಿದರು. ಕೇರಿಯ ಅನೇಕ ಮಹಿಳೆಯರ ವಿಧವಾ ಮಾಶಾಸನ, ವೃಧ್ಯಾಪ್ಯ ಮಾಸಾಶನ, ಅಂಗವಿಕಲ ಮಾಸಾಶನ ಸಿಗಬೇಕಿದ್ದು, ಶೀಘ್ರವೇ ಅದಕ್ಕಾಗಿ ಸಂಬಂದಪಟ್ಟ ಅಧಿಕಾರಿ ವರ್ಗದವರ ಮೂಲಕ ಕ್ಯಾಂಪ್ ಮಾಡಿ, ಮೂಲ ಸೌಕರ್ಯ ಒದಗಿಸಲಾಗುತ್ತದೆ ಎಂದರು. ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ ಅವರ ಮಾರ್ಗದರ್ಶನದಲ್ಲಿ ಪ್ರತಿ ಹಳ್ಳಿಯಲ್ಲಿ ಇಂತಹ ಕ್ಯಾಂಪ್ ಮಾಡುವ ಮೂಲಕ ಸಾಮಾನ್ಯ ಜನರ ಸಮಸ್ಯೆಗಳನ್ನು ಪರಿಹರಿಸಲು ಮಹಿಳಾ ಕಾಂಗ್ರೆಸ್ ಸದಾ ಸನ್ನದ್ಧವಾಗಿದೆ ಎಂದು ಗೊಂಡಬಾಳ ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!