ಮಾ. 25 ಮತ್ತು 26ರಂದು ಎನ್.ಡಿ.ಆರ್.ಎಫ್ ತಂಡದಿಂದ ಅಣುಕು ಪ್ರದರ್ಶನ

Mock show by NDRF team on 25th and 26th March

Get real time updates directly on you device, subscribe now.

 

—-
ಕೊಪ್ಪಳ  : ಕೊಪ್ಪಳ ಜಿಲ್ಲೆಯ ಸಂಭವನೀಯ ಅತೀವೃಷ್ಟಿ ಅಥವಾ ಪ್ರವಾಹದಿಂದ ಹಾನಿಗೊಳಗಾಗುವ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಮಾ. 25 ಮತ್ತು 26ರಂದು ಎನ್.ಡಿ.ಆರ್.ಎಫ್ ತಂಡದವರಿಂದ ಅಣುಕು ಪ್ರದರ್ಶನ ನಡೆಯಲಿದೆ ಎಂದು ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಅವರು ತಿಳಿಸಿದ್ದಾರೆ.
2025-26ನೇ ಸಾಲಿನ ಸಂಭವನೀಯ ಅತೀವೃಷ್ಟಿ ಅಥವಾ ಪ್ರವಾಹದಿಂದ ಹಾನಿಗೊಳಗಾಗುವ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಅಣುಕು ಪ್ರದರ್ಶನದ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸುವ ಕುರಿತು ಮಾ. 25 ರಿಂದ ಮಾ. 26ರವರೆಗೆ ಜಿಲ್ಲೆಯ ನದಿ ತೀರದ ಪ್ರವಾಹಪೀಡಿತ ಗ್ರಾಮ, ಪ್ರದೇಶ ಹಾಗೂ ಸಂಭವನೀಯ ಪ್ರವಾಹಕ್ಕೆ ಸಿಲುಕಿಕೊಳ್ಳಬಹುದಾದ ಗ್ರಾಮ, ಪ್ರದೇಶಗಳಲ್ಲಿ ಎನ್.ಡಿ.ಆರ್.ಎಫ್ ತಂಡದವರು ಮೊಕ್ ಡ್ರಿಲ್ (ಒಔಅಏ ಆಖIಐಐ) ಕಾರ್ಯಕ್ರಮ ನಡೆಸಲಿದ್ದು, ಈ ಕಾರ್ಯಕ್ರಮಕ್ಕೆ ಯಲಬುರ್ಗಾ, ಕೊಪ್ಪಳ ಮತ್ತು ಗಂಗಾವತಿ ತಹಶೀಲ್ದಾರರು ತಮ್ಮ-ತಮ್ಮ ತಾಲೂಕಿನ ಸಂಬಂಧಿಸಿದ ಎಲ್ಲ ಇಲಾಖೆಯ ಅಧಿಕಾರಿ, ಸಿಬ್ಬಂದಿ ವರ್ಗದವರಿಗೆ ಎನ್.ಡಿ.ಆರ್.ಎಫ್ ಮೊಕ್ ಡ್ರಿಲ್-2025-26 ರ ಅಡಿಯಲ್ಲಿ ನಡೆಯುವ ಕಾರ್ಯಕ್ರಮದ ಕುರಿತಾಗಿ ಸೂಕ್ತ ಯೋಜನೆ ರೂಪಿಸಿ ಕಾರ್ಯಕ್ರಮಕ್ಕೆ ಹಾಜರಾಗಬೇಕು.
ಎನ್.ಡಿ.ಆರ್.ಎಫ್ ತಂಡದವರು ನೀಡುವ ಮೊಕ್ ಡ್ರಿಲ್ ಕಾರ್ಯಕ್ರಮದ ಕುರಿತಾಗಿ ಸಂಬಂಧಿಸಿದ ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಗೂ ಸ್ಥಳೀಯ ಸಂಘ-ಸಂಸ್ಥೆಯ ಸ್ವಯಂ ಸೇವಕ ಗುಂಪುಗಳೊಂದಿಗೆ ಸಮನ್ವಯ ಸಾಧಿಸಿ, ಜಾಗೃತಿ ಮೂಡಿಸುವ ಮೂಲಕ ಎನ್.ಡಿ.ಆರ್.ಎಫ್ ಮೊಕ್ ಡ್ರಿಲ್-2025-26 ರ ಕಾರ್ಯಕ್ರಮವನ್ನು ಯಶಸ್ವಿಯಾಗಿ ಕಾರ್ಯಾಚರಣೆಗೊಳಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

Mock show by NDRF team on 25th and 26th March

Get real time updates directly on you device, subscribe now.

Comments are closed.

error: Content is protected !!