Get real time updates directly on you device, subscribe now.
ಕೊಪ್ಪಳ : ಪವಿತ್ರ ರಂಜಾನ್ ಹಾಗೂ ಯುಗಾದಿ ಹಬ್ಬದ ನಿಮಿತ್ತ ವಿವಿಧ ಗ್ರಾಮಗಳಲ್ಲಿ ಬಡವರಿಗೆ ಕೆಪಿಸಿಸಿ ಸಂಯೋಜಕ ಹಾಗೂ ಸೈಯದ್ ಫೌಂಡೇಶನ್ ಅಧ್ಯಕ್ಷ ಡಾ.ಕೆ.ಎಂ. ಸೈಯದ್ ಅವರು ಹಬ್ಬದ ಸಾಮಗ್ರಿಗಳ ಕಿಟ್ ವಿತರಿಸಿದರು.
ಅವರು ಕೊಪ್ಪಳ ವಿಧಾನಸಭಾ ಕ್ಷೇತ್ರದ ನಿಂಗಾಪುರ, ಮುನಿರಾಬಾದ್, ಹುಲಿಗಿ ಬಸಾಪುರ, ಮಹಮ್ಮದ್ ನಗರ, ಹೊಸಳ್ಳಿ ಹಳೇ ಬಂಡಿ ಹರ್ಲಾಪುರ, ಹೊಸ ಬಂಡಿ ಹರ್ಲಾಪುರ ಸೇರಿದಂತೆ ಇತರ ಗ್ರಾಮಗಳಲ್ಲಿ ವಿತರಿಸಿದರು.
ಯುವ ಮುಖಂಡ ರಾಮು ಪೂಜಾರ್ ಮಾತನಾಡಿ ಕೆ.ಎಂ.ಸೈಯದ್ ಫೌಂಡೇಶನ್ ನಿಂದ ಪ್ರತಿ ವರ್ಷ ರಂಜಾನ್ ಮತ್ತು ಯುಗಾದಿ ಹಬ್ಬವನ್ನು ಎಲ್ಲರೂ ಆಚರಿಸಲು ಕಿಟ್
ಡಾ.ಕೆ.ಎಂ.ಸೈಯದ್ ಅವರು ವಿತರಿಸಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ ಎಂದರು.
Dr. K.M. Syed distributed Ramadan-Ugadi festival kits
ಈ ಸಂದರ್ಭದಲ್ಲಿ ಗ್ರಾಮಗಳ ಹಿರಿಯರು, ಯುವಕರು, ಸೈಯದ್ ಫೌಂಡೇಶನ್ ಪದಾಧಿಕಾರಿಗಳು ಉಪಸ್ಥಿತರಿದ್ದರು.
Comments are closed.