ಭಾಗ್ಯನಗರದ ರಸ್ತೆಗೆ ದಿ ವಿಠ್ಠಪ್ಪ ಗೋರಂಟ್ಲಿ ಹೆಸರು ಸ್ವಾಗತಾರ್ಹ
ಈ ಹಿಂದೆ ಭಾಗ್ಯನಗರದ ಮುಖ್ಯರಸ್ತೆಗೆ ಅಥವಾ ಸರ್ಕಲ್ಗೆ ಹೋರಾಟಗಾರ ಪತ್ರಕರ್ತ ಸಾಹಿತಿ ದಿ ವಿಠ್ಠಪ್ಪ ಗೋರಂಟ್ಲಿ ಅವರ ಹೆಸರನ್ನು ಇಡಬೇಕು ಎಂದು ಮನವಿ ಸಲ್ಲಿಸಲಾಗಿತ್ತು. ಅದರಂತೆ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ರಸ್ತೆಗೆ ಹೆಸರು ಇಡಲು ನಿರ್ದರಿಸಿರುವುದು ಸ್ವಾಗತಾರ್ಹ ಎಂದು ಕವಿ ಸಮೂಹ ಬಳಗ, ಬಹುತ್ವ ಬಳಗ, ಬಹುತ್ವ ಮೀಡಿಯಾ ಹೌಸ್ ಸಂತಸ ವ್ಯಕ್ತಪಡಿಸಿದೆ


ಕೊಪ್ಪಳ: ಅಧ್ಯಕ್ಷರನ್ನೊಳಗೊಂಡ ಸ್ಮಶಾನ ಅಭಿವೃದ್ಧಿ ಸಮಿತಿ ರಚಿಸಿ, ನೀಲನಕ್ಷೆ ಸಿದ್ಧಪಡಿಸಿ ಅಭಿವೃದ್ಧಿಗೆ ಕ್ರಮ ವಹಿಸುತ್ತೇವೆ. ಈಗಾಗಲೇ ಸ್ಮಶಾನಕ್ಕೆ ಕಾಯ್ದಿರಿಸಿದ ಜಮೀನು ವಾರದೊಳಗೆ ಪಂಚಾಯಿತಿ ಹೆಸರಿಗೆ ಪಹಣಿ ಯಾಗಲಿದೆ. ಎಂದು ಭಾಗ್ಯನಗರ ಪಪಂ ಅಧ್ಯಕ್ಷ ರಮೇಶ ಹ್ಯಾಟಿ ಹೇಳಿದರು.
ಭಾಗ್ಯನಗರ ಪಪಂ ಸಭಾಂಗಣದಲ್ಲಿ ನಡೆದ ‘ಸಾಮಾನ್ಯ ಸಭೆ’ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಲ್ಲ 28 ಸಮಾಜದ ಅಧ್ಯಕ್ಷರನ್ನು ಸದಸ್ಯರನ್ನಾಗಿ ಮಾಡಿಕೊಂಡು, ಸ್ಮಶಾನ ಅಭಿವೃದ್ಧಿ ಸಮಿತಿ ಮಾಡಬೇಕು. ಸರ್ಕಾರದ ಅನುದಾನದ ಜತೆಗೆ ಎಲ್ಲ ಸಮಾಜದವರ ಸಹಕಾರದೊಂದಿಗೆ ಅಭಿವೃದ್ಧಿ ಮಾಡುತ್ತೇವೆ. ವಿವಿಧ ಸಮಾಜದವರು ಸ್ವಯಂಪ್ರೇರಿತರಾಗಿ ವಾಹನ ಕೊಡಿಸುವುದಾಗಿ ತಿಳಿಸಿದ್ದಾರೆ ಎಂದರು.
ಸದಸ್ಯ ಮೋಹನ್ ಅರಕಲ್ಲ ಪ್ರತಿಕ್ರಿಯಿಸಿ, ಸಶಾನಕ್ಕೆ ಶಾಸಕರು ಎರಡು ಕೋಟಿ ರೂ. ಕೊಡುತ್ತೇವೆಂದು ಭರವಸೆ ನೀಡಿದ್ದರು. ಅದನ್ನು ಅವರ ಬಳಿ ಪ್ರಸ್ತಾಪಿಸಬೇಕು ಎಂದು ತಿಳಿಸಿದರು. ಅಧ್ಯಕ್ಷರು ಮಾತನಾಡಿ, ಒಂದು ವಾರದಲ್ಲಿ ಸ್ಮಶಾನ ಪಂಚಾಯಿತಿ ಹೆಸರಲ್ಲಿ ಆಗಲಿದ್ದು, ಬಳಿಕ ಶಾಸಕರ ಬಳಿ ಹೋಗಿ ಅನುದಾನ ಕೇಳೋಣ ಎಂದು ಸ್ಪಷ್ಟಪಡಿಸಿದರು. ಎಷ್ಟು ಅನುದಾನ ಬೇಕು?, ಸಂಬಂಧಿಸಿದ ಇಲಾಖೆಯಿಂದ ಅನುದಾನ ಪಡೆಯಲು ಅನುಕೂಲವಾಗಲಿದೆ ಎಂದು ಸದಸ್ಯ ಪರಶುರಾಮ ನಾಯಕ ಸಲಹೆ ನೀಡಿದರು.
ಪುರಭವನ ಕಟ್ಟಡಕ್ಕೆ ಮಾರ್ಚ್ ನಂತರ ಐದು ಕೋಟಿ ರೂ. ಅನುದಾನ ನೀಡುವುದಾಗಿ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಭರವಸೆ ನೀಡಿದ್ದು, ಈ ನಿಟ್ಟಿನಲ್ಲಿ ಪತ್ರವೂ ಬಂದಿದೆ. ಪಕ್ಕದ ಖಾದಿ ಗ್ರಾಮೋದ್ಯೋಗ ಮಂಡಳಿಗೆ ನೀಡಿದ್ದ ಜಾಗ ಹಿಂಪಡೆದರೆ ಅನುಕೂಲವಾಗಲಿದ್ದು, ಕ್ರಮ ವಹಿಸಲಾಗುತ್ತಿದೆ. ಅಲ್ಲದೇ ಭಾಗ್ಯನಗರ ಪಟ್ಟಣವನ್ನು ಪುರಸಭೆಯಾಗಿ ಮೇಲ್ದರ್ಜೆಗೇರಿಸಲು ಎಲ್ಲ ಸದಸ್ಯರ ನಿಯೋಗವು ಶಾಸಕರೊಂದಿಗೆ ಸಂಬಂಧಪಟ್ಟ ಸಚಿವರು, ಮುಖ್ಯಮಂತ್ರಿಗಳನ್ನು ಭೇಟಿಯಾಗಿ, ಸರ್ಕಾರಕ್ಕೆ ಒತ್ತಾಯಿಸೋಣ ಎಂದು ಅಧ್ಯಕ್ಷ ತಿಳಿಸಿದರು. ಅದಕ್ಕೆ ಸರ್ವಸದಸ್ಯರು ಒಪ್ಪಿಗೆ ಸೂಚಿಸಿದರು.
ಪತ್ರಕರ್ತ, ಸಾಹಿತಿ ದಿ.ವಿಠಪ್ಪ ಗೋರಂಟ್ಲಿ ಹೆಸರನ್ನು ಪಟ್ಟಣದ ಗಾಂಧೀಜಿ ವೃತ್ತದಿಂದ ಅವರ ಮನೆಗೆ ತೆರಳುವ ಬಜಾರ್ ರಸ್ತೆಗೆ ನಾಮಕರಣ ಮಾಡುವಂತೆ ಸದಸ್ಯ ಸವಿತಾ ಗೋರಂಟ್ಲಿ ತಿಳಿಸಿದರು. ಅದಕ್ಕೆ ಅಧ್ಯಕ್ಷರು ಮತ್ತು ಸದಸ್ಯರು ಒಪ್ಪಿಗೆ ನೀಡಿದರು. ಪಟ್ಟಣಕ್ಕೆ ಕ್ರೀಡಾಂಗಣ ಮಂಜೂರು ಮಾಡುವಂತೆ ಸದಸ್ಯ ಗವಿಸಿದ್ದಪ್ಪ ಮಗಿಮಾವಿನಳ್ಳಿ ಒತ್ತಾಯಿಸಿದರು.
ಅಮೃತ-2 ಪ್ರಕಾರ ಕಾಮಗಾರಿಆಗುತ್ತಿಲ್ಲ. ಇದಕ್ಕೆ ಜೆಇಗೆ ಕರೆ ಮಾಡಿದರೆ, ಸರಿಯಾಗಿ ಸ್ಪಂದಿಸುವುದಿಲ್ಲ ಎಂದು ಸದಸ್ಯರುಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪ್ರತ್ಯೇಕ ಸಭೆಕರೆದು. ಯೋಜನೆಯ ವಿನ್ಯಾಸ ಸೇರಿಯೋಜನಾ ವರದಿ ಮಾಹಿತಿ ನೀಡುತ್ತೇವೆ. ಬಳಿಕ ಎಲ್ಲ ವಾರ್ಡುಗಳಿಗೂ ತೆರಳಿ, ಕಾಮಗಾರಿ ಸ್ಥಳ ಪರಿಶೀಲನೆ ಮಾಡೋಣ ಎಂದು ಅಧ್ಯಕ್ಷರು ಉಪಾಧ್ಯಕ್ಷ ಹೊನ್ನುರಸಾಬ್ ಬೈರಾಪುರ, ಮುಖ್ಯಾಧಿ ಕಾರಿ ಸುರೇಶ ಬಬಲಾದಿ, ಸದಸ್ಯರು ಸಭೆಯಲ್ಲಿ ಇದ್ದರು.
Comments are closed.