ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿತರಿಗೆ ಮರಣದಂಡನೆ ಶಿಕ್ಷೆ – ತಾರ್ಕಿಕ ಅಂತ್ಯ ಕಂಡ ಪ್ರಕರಣ – Dr P S Harsha IGP

Get real time updates directly on you device, subscribe now.

ಸಾಣಾಪುರ ಕೆರೆಯ ಹತ್ತಿರ ಜರುಗಿದ  ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿತರಿಗೆ ಮರಣದಂಡನೆ ಶಿಕ್ಷೆ ವಿಧಿಸಿದ ಹಿನ್ನೆಲೆಯಲ್ಲಿ ಇಂದು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಬಳ್ಳಾರಿ ವಲಯ ಐಜಿಪಿ ಡಾ.  P.S. ಹರ್ಷಾ ಪತ್ರಿಕಾಗೋಷ್ಠಿ ನಡೆಸಿದರು.

ಈ ಸಂದರ್ಭದಲ್ಲಿ  ಇಡೀ ಪ್ರಕರಣದ ತನಿಖೆ ಕುರಿತು ಸಂಪೂರ್ಣ ಮಾಹಿತಿ ನೀಡಿದರು.

ಕೊಪ್ಪಳ ಜಿಲ್ಲೆ, ಗಂಗಾವತಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಸಾಣಾಪುರ ಕೆರೆಯ ಹತ್ತಿರ ಫಿರ್ಯಾದಿದಾರರು ಮತ್ತು ವಿದೇಶಿ ಪ್ರವಾಸಿಗರು ಸಹಿತ ಇತರೆ ನಾಲ್ಕು ಜನರು ನಿಸರ್ಗ ವೀಕ್ಷಣೆಗೆಂದು ಹೋದಾಗ ಮೂರು ಜನ ಆಪಾದಿತರು ಹೋಗಿ ಇವರನ್ನು 100 ರೂ ಹಣ ಕೇಳಿದ್ದು, ಪ್ರವಾಸಿಗರು ಹಣ ಇಲ್ಲಾ ಅಂತಾ 20 ರೂ ಕೊಟ್ಟಿದ್ದಕ್ಕೆ ಆ ಮೂರು ಜನರು ಫಿರ್ಯಾದಿ ಮತ್ತು ಅವರ ಸಂಗಡ ಬಂದಿದ್ದವರೊಂದಿಗೆ ಜಗಳ ತೆಗೆದು ಹಲ್ಲೆ ಮಾಡಿ ಮೂರು ಜನ ಗಂಡುಮಕ್ಕಳಿಗೆ ನೀರು ತುಂಬಿ ಹರಿಯುತ್ತಿದ್ದ ತುಂಗಭದ್ರ ಡ್ಯಾಂ ಎಡದಂಡೆ ಕಾಲುವೆಯಲ್ಲಿ ತಳ್ಳಿ ಫಿರ್ಯಾದಿ ಮತ್ತು ಇಸ್ರೇಲಿ ಪ್ರಜೆ ಮೇಲೆ ಹಲ್ಲೆ ಮಾಡಿ ಅತ್ಯಾಚಾರ ಮಾಡಿ ಅವರ ಹತ್ತಿರ ಇದ್ದ ಹಣ ಮತ್ತು 2 ಮೊಬೈಲ್ ಕಿತ್ತುಕೊಂಡು ಹೋಗಿದ್ದು ನೀರಿಗೆ ತಳ್ಳಿದ ಮೂರ ಜನರ ಪೈಕಿ ಬಿಬಾಷ ಎಂಬುವರು ಪತ್ತೆಯಾಗದಿರುವ ಬಗ್ಗೆ ನೊಂದ ಮಹಿಳೆ ನೀಡಿದ ದೂರಿನ ಮೇಲಿಂದ ದಿನಾಂಕ-07.03.2025 ರಂದು ಗಂಗಾವತಿ ಗ್ರಾಮೀಣ -73/2025 ໖໐:309(໖), 311, 64(2)(໖໖), 70(1), 109 & 3(5) 2 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ದಿನಾಂಕ: 08.03.2025 ರಂದು ಭಿಭಾಷ್ ಕುಮಾರ ನಾಯಕ್ ಇವರ ಮೃತ ದೇಹ ದೊರೆತ ನಂತರ ಪ್ರಕರಣದಲ್ಲಿ ಕಲಂ-103 ಬಿಎನ್ಎಸ್ ಕಾಯ್ದೆಯನ್ನು ಅಳವಡಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು

ಆಪಾದಿತರ ಬಗ್ಗೆ ಸುಳಿವು ಇಲ್ಲದ ಪ್ರಕರಣದ ಶೀಘ್ರ ಪತ್ತೆ ಕುರಿತು 06 ವಿಶೇಷ ಪತ್ತೆ ತಂಡಗಳನ್ನು ರಚಿಸಲಾಗಿತ್ತು, ಪತ್ತೆ ತಂಡದಲ್ಲಿನ ಅಧಿಕಾರಿ ಮತ್ತು ಸಿಬ್ಬಂದಿಯವರು ಫಿರ್ಯಾದಿ ಮತ್ತು ಸಾಕ್ಷಿಧಾರರಿಂದ ಮಾಹಿತಿಯನ್ನು ಸಂಗ್ರಹಿಸಿ ಪ್ರಕರಣ ದಾಖಲಾದ 24 ಗಂಟೆಯೊಳಗಾಗಿ ಆಪಾದಿತರಾದ

1) ಮಲ್ಲೇಶ @ ಹಂದಿ ಮಲ್ಲ @ ಮಲ್ಲಯ್ಯ ಸಾ. ಸಾಯಿನಗರ ಗಂಗಾವತಿ ಎಂಬ ವ್ಯಕ್ತಿಯನ್ನು ಕೊಪ್ಪಳದಲ್ಲಿ

2) ಸಾಯಿ @ ಚೈತನ್ಯ ಸಾಯಿ @ ಸಾಯಿ ಕುಮಾರ ಸಾ:ಸಾಯಿನಗರ ಗಂಗಾವತಿ ಎಂಬ ವ್ಯಕ್ತಿಯನ್ನು ಹೊಸಪೇಟಿಯಲ್ಲಿ ಮತ್ತು

3) ಶರಣಪ್ಪ@ಶರಣ ಬಸವರಾಜ@ಶರಣ ಸಾ.ಸಾಯಿನಗರ ಗಂಗಾವತಿ ಈತನನ್ನು ತಮಿಳುನಾಡಿನ ಚೆನ್ನೈನ ರೇಲ್ವೇ ನಿಲ್ದಾಣದಲ್ಲಿ ವಶಕ್ಕೆ ಪಡೆದು ವಿಚಾರಣೆ ಮಾಡಿ ದಸ್ತಗಿರಿ ಕ್ರಮ ಜರುಗಿಸಿ ನ್ಯಾಯಾಂಗ ಬಂದನಕ್ಕೆ ಕಳುಹಿಸಲಾಗಿತ್ತು.

ಪ್ರಕರಣದ ತನಿಖೆಯ ಕಾಲಕ್ಕೆ ದಸ್ತಗಿರಿ ಮಾಡಿದ ಆಪಾದಿತರಿಂದ ನೊಂದವರಿಗೆ ಸಂಬಂದಿಸಿದ ವಸ್ತುಗಳನ್ನು, ಸುಲಿಗೆ ಮಾಡಿದ ಹಣ, ಮೊಬೈಲ್ ವಶಪಡಿಸಿಕೊಂಡಿದ್ದು, ವೈಜ್ಞಾನಿಕ ರೀತಿಯಲ್ಲಿ ತನಿಖೆ ಕೈಗೊಂಡು ಕೂಡಲೇ ಸಾಕ್ಷಾಧಾರ ಸಂಗ್ರಹಿಸಿ, ಡಿಎನ್‌ಎ ಪರೀಕ್ಷಾ ವರದಿಗಳನ್ನು ಪಡೆದು, ಕಲಂ-183 ಬಿಎನ್‌ಎಸ್ಎಸ್ ಅಡಿಯಲ್ಲಿ ನ್ಯಾಯಾಲಯದಲ್ಲಿ ನೊಂದವರ ಹೇಳಿಕೆಗಳನ್ನು ಮಾಡಿಸಿದ್ದು, ಪ್ರಕರಣದಲ್ಲಿ ಒಟ್ಟು 101 ಸಾಕ್ಷಿಧಾರರಿದ್ದು, 84 ವಸ್ತುಗಳನ್ನು ಜಪ್ತಿಪಡಿಸಿಕೊಂಡಿದ್ದು, ಪ್ರಕರಣದ ತನಿಖೆಯ ಕಾಲಕ್ಕೆ ವೈದ್ಯಕೀಯ ವರದಿ, ಡಿಎನ್ಎ ವರದಿ ಮತ್ತು ವಸ್ತುಗಳ ಮೇಲೆ ದೊರೆತ ಜೈವಿಕ ಪೂರಾವೆಗಳಲ್ಲಿ ಹೊಂದಾಣಿಕೆಗಳು ಕಂಡುಬಂದಿದ್ದು, ಅಪಾದಿತರಾದ

1) ಮಲ್ಲೇಶ@ಹಂದಿ ಮಲ್ಲ@ ಮಲ್ಲಯ್ಯ ತಂದೆ ಆಯ್ಯಪ್ಪ @ದಾಸಪ್ಪ ಚನ್ನದಾಸರ ವಯ:22ವರ್ಷ ಸಾ. ಸಾಯಿನಗರ ಗಂಗಾವತಿ

2) ಸಾಯಿ@ಚೈತನ್ಯ ಸಾಯಿ@ಸಾಯಿ ಕುಮಾರ ತಂದೆ ಕಾಮೇಶ್ವರ ವಯ:20 ವರ್ಷ, ಸಾ:ಸಾಯಿನಗರ ಗಂಗಾವತಿ

3) ಶರಣಪ್ಪ@ಶರಣ ಬಸವರಾಜ@ಶರಣ ತಂದೆ ಬಾಲಪ್ಪ ನಾಯಕ ವಯಾ:27ವರ್ಷ ಸಾ.ಸಾಯಿನಗರ ಗಂಗಾವತಿ

ಇವರುಗಳು ಹಲ್ಲೆ, ಸುಲಿಗೆ, ಸಾಮೂಹಿಕ ಅತ್ಯಾಚಾರ, ಕೊಲೆ ಮತ್ತು ಕೊಲೆಗೆ ಪ್ರಯತ್ನಿಸಿದ ಅಪರಾಧ ಕೃತ್ಯ ಎಸಗಿರುವುದು ತನಿಖೆಯಲ್ಲಿ ಸಾಭೀತಾಗಿದ್ದರಿಂದ ಆರೋಪಿತರ ವಿರುದ್ಧ ಕಲಂ-103, 64(2)(ಎಂ), 70(1), 109, 309(6), 311, ಸಹಿತ 3(5) ಭಾರತೀಯ ನ್ಯಾಯ ಸಂಹಿತೆ-2023ರ ಅಡಿಯಲ್ಲಿ ದಿನಾಂಕ-30.05.2025 ರಂದು 750 ಪುಟಗಳ ದೋಷಾರೋಪಣಾ ಪತ್ರವನ್ನು ತಯಾರಿಸಿ ಪ್ರಕರಣ ದಾಖಲಾದ 84 ದಿನಗಳಲ್ಲಿ ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. 06 ತಿಂಗಳಲ್ಲಿ ವಿಚಾರಣೆ ಪೂರ್ಣಗೊಳಿಸಿದ ಮಾನ್ಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಗಂಗಾವತಿಯ ಗೌರವಾನ್ವಿತ ನ್ಯಾಯಾಧೀಶರು ರವರು ದಿನಾಂಕ-06.02.2026 ರಂದು ಪ್ರಕರಣದ ಮೂರು ಜನ ಆಪಾದಿತರಿಗೆ ಶಿಕ್ಷೆ ಘೋಷಣೆ ಮಾಡಿ ನಂತರ ದಿನಾಂಕ-16.02.2026 ರಂದು ಮೂರು ಜನ ಆರೋಪಿತರಿಗೆ ಮರಣದಂಡನೆ (Death Sentence) ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದು ಇರುತ್ತದೆ.

ಮಾನ್ಯ ಪೊಲೀಸ್ ಮಹಾನಿರೀಕ್ಷಕರು, ಬಳ್ಳಾರಿ ವಲಯ, ಬಳ್ಳಾರಿ ರವರ ಮಾರ್ಗದರ್ಶನದಲ್ಲಿ ಡಾ: ರಾಮ್ ಎಲ್. ಆರಸಿದ್ದಿ, ಐ.ಪಿ.ಎಸ್, ಪೊಲೀಸ್ ಅಧೀಕ್ಷಕರು ಕೊಪ್ಪಳ ರವರ ನೇತೃತ್ವದಲ್ಲಿ  ಹೇಮಂತ್ ಕುಮಾರ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಕೊಪ್ಪಳ, ಗಂಗಾವತಿ ಉಪವಿಭಾಗದ ಈ ಹಿಂದಿನ ಡಿಎಸ್‌ಪಿ ರವರಾದ  ಸಿದ್ದಲಿಂಗಪ್ಪಗೌಡ ಪಾಟೀಲ್, ಸದ್ಯದ ಡಿಎಸ್‌ಪಿ ರವರಾದ  ಜಿ.ಎಸ್ ನ್ಯಾಮಗೌಡ ಸಹಿತ ಈ ಕೆಳಕಾಣಿಸಿದ ತಂಡವಾರು ಅಧಿಕಾರಿ ಮತ್ತು ಸಿಬ್ಬಂದಿಯವರು ಉತ್ತಮ ಕರ್ತವ್ಯ ನಿರ್ವಹಿಸಿರುತ್ತಾರೆ.

ಪ್ರಕರಣದ ತನಿಖೆಯಲ್ಲಿ : ತನಿಖಾಧಿಕಾರಿಗಳಾದ  ಸೋಮಶೇಖರ ಜುಟ್ಟಲ ಪಿ.ಐ ಗಂಗಾವತಿ ಗ್ರಾಮೀಣ ಠಾಣೆ (ಸದ್ಯ ಡಿಎಸ್‌ಪಿ ರೇಲ್ವೆ ಹುಬ್ಬಳ್ಳಿ),  ರಂಗಪ್ಪ ಪಿ.ಐ ಗಂಗಾವತಿ ಗ್ರಾಮೀಣ ಠಾಣೆ ಮತ್ತು ತನಿಖಾ ಸಹಾಯಕ ಸಿಬ್ಬಂದಿಗಳಾದ  ಮಾರುತಿ ಹೆಚ್.ಸಿ-55,  ಸೈಯದ್ ಗೌಸ್ ಪಿ.ಸಿ-153 ಗಂಗಾವತಿ ಗ್ರಾಮೀಣ ಠಾಣೆ ರವರು ಉತ್ತಮ ಕರ್ತವ್ಯ ನಿರ್ವಹಿಸಿರುತ್ತಾರೆ.

ಪ್ರಕರಣದ ಆಪಾದಿತರ ಪತ್ತೆ ಕಾರ್ಯದಲ್ಲಿ : 1 ಮತ್ತು 2ನೇ ಆಪಾದಿತರ ಪತ್ತೆ ತಂಡದ  ಪ್ರಕಾಶ ಮಾಳೆ ಪಿ.ಐ ಗಂಗಾವತಿ

ನಗರ ಠಾಣೆ, ಹಾಗೂ ಅವರ ತಂಡದ  ವೆಂಕಟೇಶ ಚವ್ಹಾಣ, ಪಿ.ಎಸ್.ಐ, ಸಿಬ್ಬಂದಿಯವರಾದ ವಿಶ್ವನಾಥ ಹೆಚ್.ಸಿ, ಚಿರಂಜೀವಿ ಹೆಚ್.ಸಿ. ಮರಿಶಾಂತ ಗೌಡ ಹೆಚ್.ಸಿ. ಗ್ಯಾನಪ್ಪ ಪಿ.ಸಿ, ಮೈಲಾರಪ್ಪ ಪಿ.ಸಿ ಮರಿಯಪ್ಪ ಹೆಚ್.ಸಿ ಮತ್ತು ಮಾಂತೇಶ ಪಿ.ಸಿ 343 ಗಂಗಾವತಿ ಗ್ರಾಮೀಣ ಠಾಣೆ ಹಾಗೂ 3ನೇ ಆರೋಪಿ ಪತ್ತೆ ತಂಡದ  ಮಾಹಂತೇಶ ಸಜ್ಜನ ಪಿ.ಐ ಸೆನ್ ಪಿ.ಎಸ್ ಕೊಪ್ಪಳ (ಸದ್ಯ ಸಿಪಿಐ ಹರಪನಹಳ್ಳಿ ವೃತ್ತ),  ಗುರುರಾಜ ಪಿ.ಎಸ್.ಐ ಕುಕನೂರ ಠಾಣೆ ಮತ್ತು ಅವರ ತಂಡದ ಮಹಿಬೂಬ್ ಹೆಚ್.ಸಿ, ದೇವಿಂದ್ರಪ್ಪ ಹೆಚ್.ಸಿ. ಸದ್ದಾಂಹುಸೇನ್ ಪಿ.ಸಿ ಯಲಬುರ್ಗಾ ಠಾಣೆ ರವರು ಉತ್ತಮ ಕರ್ತವ್ಯ ನಿರ್ವಹಿಸಿರುತ್ತಾರೆ.

>

ತಾಂತ್ರಿಕ ವಿಧದ ಪತ್ತೆ ಕಾರ್ಯ :  ಆಂಜನೇಯ ಡಿ.ಎಸ್ ಪಿಐ ಸೈಬರ್ ಪೊಲೀಸ್ ಠಾಣೆ ಮತ್ತು ತಾಂತ್ರಿಕ ವಿಭಾಗದ  ಪ್ರಸಾದ ಎಪಿಸಿ,  ಮಂಜುನಾಥ ಎಪಿಸಿ ರವರು ಉತ್ತಮ ಕರ್ತವ್ಯ ನಿರ್ವಹಿಸಿರುತ್ತಾರೆ.

ವೈಜ್ಞಾನಿಕ ಸಾಕ್ಷಾಧಾರ ಸಂಗ್ರಹ ಮತ್ತು ಪರೀಕ್ಷಾ ವರದಿ ನೀಡುವಲ್ಲಿ: ಸುಕೋ ಅಧಿಕಾರಿಗಳಾದ  ತರುಣ,  ಆರುಣ,  ಮಹೇಶ ರವರು ಮತ್ತು ವೈದ್ಯಾಧಿಕಾರಿಗಳು ಉತ್ತಮ ಕರ್ತವ್ಯ ನಿರ್ವಹಿಸಿರುತ್ತಾರೆ.

ಬೆರಳು ಮುದ್ರೆ ವರದಿ ಕೊಡುವಲ್ಲಿ:  ಚಂದ್ರಪ್ಪ ಪಿ.ಐ ಬೆರಳು ಮುದ್ರೆ ಘಟಕ ರವರು ಉತ್ತಮ ಕರ್ತವ್ಯ ನಿರ್ವಹಿಸಿರುತ್ತಾರೆ.

ಶ್ವಾನದಳದ ಕಾರ್ಯ: ಘಟನಾ ಸ್ಥಳಕ್ಕೆ ತುಂಗಾ ಹೆಸರಿನ ಶ್ವಾನ ಮತ್ತು ಸಿಬ್ಬಂದಿಯವರಾದ ಎಪಿಸಿ ಮಾರುತಿ, ನಾಗರಾಜ ಇವರು ಭೇಟಿ ನೀಡಿ ವಸ್ತುಗಳ ಪತ್ತೆ ಮತ್ತು ಘಟನಾ ಸ್ಥಳ ಗುರುತಿಸುವಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿರುತ್ತಾರೆ.

ಕೋರ್ಟ ಮತ್ತು ಪ್ರೊಸೆಸ್ ಕರ್ತವ್ಯದಲ್ಲಿ:  ಮಂಜುನಾಥ ಹೆಚ್.ಸಿ.  ಶ್ರೀಶೈಲ್ ಪಿ.ಸಿ ಗಂಗಾವತಿ ಗ್ರಾಮೀಣ ಠಾಣೆ ರವರು

ಉತ್ತಮ ಕರ್ತವ್ಯ ನಿರ್ವಹಿಸಿರುತ್ತಾರೆ.

ಘಟನೆ ಜರುಗಿ ಪ್ರಕರಣ ವರದಿಯಾದಾಗಿನಿಂದ ನಿಗದಿತ ಅವಧಿಯಯೊಳಗೆ ಗುಣಮಟ್ಟದ ದೋಷಾರೋಪಣ ಪತ್ರ ತಯಾರಿಸಿ ಕೋರ್ಟ ಸಿಸಿ ನಂಬರ್ ಬಂದು ವಿಚಾರಣೆ ಪ್ರಾರಂಭವಾಗುವವರೆಗೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಜಿಲ್ಲಾ ಪೊಲೀಸ್ ಕಾರ್ಯಾಲಯದ  ಶಿವರಾಜ ಇಂಗಳೆ ಪಿಐ ಡಿಸಿಆರ್‌ಬಿ ಘಟಕ ಮತ್ತು  ಭೀಮಸೇನ್‌ರಾವ್ ಕುಲಕುರ್ಣಿ ಹೆಚ್.ಸಿ. ಅಪರಾಧ ಶಾಖೆ ರವರು ರವರು ಉತ್ತಮ ಕರ್ತವ್ಯ ನಿರ್ವಹಿಸಿರುತ್ತಾರೆ.

ಕೋರ್ಟ ವಿಚಾರಣೆ ಕಾಲಕ್ಕೆ ಅಭಿಯೋಗದ ಪರ ವಾದ ಮಂಡನೆ : ಶ್ರೀಮತಿ ನಾಗಲಕ್ಷ್ಮೀ ಸರ್ಕಾರಿ ಅಭಿಯೋಜಕರು, 1ನೇ

ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಗಂಗಾವತಿ ರವರು ಸಮರ್ಥವಾಗಿ ವಾದ ಮಂಡನೆ ಮಾಡಿ ಪ್ರಕರಣ ಶಿಕ್ಷೆಯಲ್ಲಿ ಮುಕ್ತಾಯವಾಗಲು ಶ್ರಮಿಸಿ ಉತ್ತಮ ಕರ್ತವ್ಯ ನಿರ್ವಹಿಸಿರುತ್ತಾರೆ.

ಡಾ: ರಾಮ್ ಎಲ್. ಅರಸಿದ್ದಿ, ಐ.ಪಿ.ಎಸ್, ಪೊಲೀಸ್ ಅಧೀಕ್ಷಕರು ಕೊಪ್ಪಳ ಮತ್ತು  ಹೇಮಂತ್ ಕುಮಾರ ಹೆಚ್ಚುವರಿ ಪೊಲೀಸ್ ಅಧಿಕ್ಷಕರು, ಕೊಪ್ಪಳ ರವರ ಮಾರ್ಗದರ್ಶನದಲ್ಲಿ ಪ್ರಕರಣ ದಾಖಲಾದಾಗಿನಿಂದ ಶಿಕ್ಷೆಯಾಗುವವರೆಗೆ ಉತ್ತಮ ಪತ್ತೆ ಕಾರ್ಯ ಮಾಡಿದ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ  ಡಿಜಿ & ಐಜಿಪಿ ಕರ್ನಾಟಕ ರಾಜ್ಯ ಬೆಂಗಳೂರು ರವರ ಸಹಿತ ಎಲ್ಲಾ ಹಿರಿಯ ಅಧಿಕಾರಿಗಳು ಪ್ರಶಂಸನೆ ವ್ಯಕ್ತಪಡಿಸಿರುತ್ತಾರೆ.

ಪತ್ರಿಕಾಗೋಷ್ಠಿಯಲ್ಲಿ  ಎಸ್ಪಿ ರಾಮ್ ಎಲ್ ಅರಸಿದ್ದಿ, ಹೇಮಂತ್ ಕುಮಾರ ಹೆಚ್ಚುವರಿ ಪೊಲೀಸ್ ಅಧಿಕ್ಷಕರು,.   ,    CEN DSp, ಸಿದ್ದಲಿಂಗಪ್ಪಗೌಡ ಪಾಟೀಲ್,ಡಿಎಸ್‌ಪಿ ರವರಾದ  ಜಿ.ಎಸ್ ನ್ಯಾಮಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.

Dr P S Harsha IPS

Bellary Range IGP ,

Get real time updates directly on you device, subscribe now.

Comments are closed.

error: Content is protected !!