ಫೆ.13 ರಂದು ಬಣಜಿಗ ಸಮಾಜದ ಸಂಸ್ಥಾಪನಾ ದಿನಾಚರಣೆ ಹಾಗೂ ಗುರು ಬಸವ ಬಣಜಿಗರ ಭವನದ ಭೂಮಿ ಪೂಜೆ

Get real time updates directly on you device, subscribe now.

 

ಕೊಪ್ಪಳ,: ಬಣಜಿಗ ಸಮಾಜದ ಸಂಸ್ಥಾಪನಾ ದಿನಾಚರಣೆ ಹಾಗೂ ಗುರು ಬಸವ ಬಣಜಿಗರ ಭವನದ ಭೂಮಿ ಪೂಜೆ ಅಡಿಗಲ್ಲು ಸಮಾರಂಭವನ್ನು ಇದೇ ಫೆಬ್ರುವರಿ 13, ಶುಕ್ರವಾರ ಬೆಳಗ್ಗೆ 9.30ಕ್ಕೆ
ಕೊಪ್ಪಳ ನಗರದ ಬಣಜಿಗ ಸಮಾಜದ ನಿವೇಶನ, ಬಳ್ಳೊಳ್ಳಿ ರೈಸ್ ಮಿಲ್ ಹಿಂಭಾಗ, ಹಮಾಲರ ಕಾಲೋನಿ ಹತ್ತಿರದಲ್ಲಿ ಆಯೋಜಿಸಲಾಗಿದೆ ಎಂದು ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘ ತಾಲೂಕು ಅಧ್ಯಕ್ಷ ವೀರಣ್ಣ ಬುಳ್ಳಾ
ಹೇಳಿದರು.

ಬುಧವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿದ್ದೇಶಿಸಿ ಅವರು ಮಾತನಾಡಿದರು.

Foundation Day of Banajiga Samaj and Bhoomi Puja of Guru Basava Banajiga Bhavan on Feb. 13

ಈ ಸಮಾರಂಭದ ದಿವ್ಯ ಸಾನಿಧ್ಯವನ್ನು ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ವಹಿಸಲಿದ್ದು, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ್ ತಂಗಡಗಿ ಅವರು ಧ್ವಜಾರೋಹಣ ನೇರವೇರಿಸುವರು, ರಾಮದುರ್ಗ ಶಾಸಕರಾದ ಅಶೋಕ ಪಟ್ಟಣ್ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಭೂಮಿ ಪೂಜೆಯ ಅಡಿಗಲ್ಲು ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ರವರು ನೇರವೇರಿಸುವರು, ಜಗಜ್ಯೋತಿ ಶ್ರೀ ಬಸವೇಶ್ವರ ಭಾವಚಿತ್ರಕ್ಕೆ ಸಂಸದ ಕೆ.ರಾಜಶೇಖರ ಹಿಟ್ನಾಳ್ ಅವರು ಪುಷ್ಪ ನಮನ ಸಲ್ಲಿಸಲಿದ್ದಾರೆ ಹಾಗೂ ಸಂಸ್ಥಾಪಕ ರಾಜ್ಯಾಧ್ಯಕ್ಷರು ಲಿಂ. ಮಲ್ಲಿಕಾರ್ಜುನ ಅಗಡಿಯವರ ಭಾವಚಿತ್ರಕ್ಕೆ ಹುಬ್ಬಳ್ಳಿ – ಕೇಂದ್ರ ಶಾಸಕ ಮಹೇಶ ತೆಂಗಿನಕಾಯಿ ಅವರು ಪುಷ್ಪ ನಮನ ಸಲ್ಲಿಸಲಿದ್ದಾರೆ,
ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪ್ರಸನ್ನ‌ ಗಡಾದ ಘನ ಉಪಸ್ಥಿತಿ ವಹಿಸುವರು,
ಮುಖ್ಯ ಅತಿಥಿಗಳಾಗಿ ಮಾಜಿ ಸಂಸದ ಸಂಗಣ್ಣ ಕರಡಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ರಾಜ್ಯ ಜೆಡಿಎಸ್ ಕೋರ್ ಕಮಿಟಿ ಸದಸ್ಯ ಸಿವಿ ಚಂದ್ರಶೇಖರ, ರಾಜ್ಯ ಬಿಜೆಪಿ ಕಾರ್ಯಕಾರಣಿ ಸಮಿತಿ ಸದಸ್ಯ ಬಸವರಾಜ ಕ್ಯಾವಟರ್, ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘ ಕೊಪ್ಪಳ ಜಿಲ್ಲಾ ಘಟಕ ಅಧ್ಯಕ್ಷ ವಿಶ್ವನಾಥ ಬಳ್ಳೊಳ್ಳಿ ಅವರು ಆಗಮಿಸಲಿದ್ದಾರೆ. ಸಮಾರಂಭಕ್ಕೆ ಬಣಜಿಗ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಗುರು ಬಸವ ಬಣಜಿಗ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಗುರುರಾಜ ಹಲಗೇರಿ, ಬಣಜಿಗ ಸಮಾಜದ ಉಪಾಧ್ಯಕ್ಷರಾದ ಶಾಂತೇಶ ಸಂಕ್ಲಾಪುರ,
ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಅಪರ್ಣ ಬಳ್ಳೊಳ್ಳಿ, ನಗರ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಸುಧಾ ಶೆಟ್ಟರ್, ಯುವ ಘಟಕದ ಸಹ ಕಾರ್ಯದರ್ಶಿ ರಾಜೇಶ್ ವಾಲಿ, ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಬಸವರಾಜ ಕಮಲಾಪುರ ಇದ್ದರು.

Get real time updates directly on you device, subscribe now.

Comments are closed.

error: Content is protected !!