ಸೆ.21ಕ್ಕೆ ಕೊಪ್ಪಳದಲ್ಲಿ ವಿಶ್ವಕರ್ಮ ಜಯಂತೋತ್ಸವ

Get real time updates directly on you device, subscribe now.

ಕೊಪ್ಪಳ :


ವಿಶ್ವಕರ್ಮ ಸಮಾಜವು ಆರ್ಥಿಕ, ರಾಜಕೀಯ, ಸಾಮಾಜಿಕವಾಗಿ ಸುಸಂಘಟಿತರಾಗಲು ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಮಹಾನ್ ತಪಸ್ವಿ, ಮಹರ್ಷಿ ಮೌನೇಶ್ವರರ ಭಾವಚಿತ್ರದೊಂದಿಗೆ ಇದೇ ಸೆ.21ಕ್ಕೆ “ವಿಶ್ವಕರ್ಮ” ಜಯಂತಿಯನ್ನು ನಡೆಸಲಾಗುವುದು ಎಂದು ಜಿಲ್ಲಾಧ್ಯಕ್ಷ ಈಶಪ್ಪ ಬಡಿಗೇರಿ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಈ ವಿಷಯ ತಿಳಿಸಿದ ಅವರು, ರಾಜ್ಯದಲ್ಲಿ ಸುಮಾರು 40 ಲಕ್ಷಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿದ ವಿಶ್ವಕರ್ಮ ಸಮುದಾಯವು ಹಿಂದುಳಿದ ವರ್ಗಕ್ಕೆ ಸೇರಿದೆ. ಈ ಹಿಂದೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಈ ಸಮುದಾಯದ ಅಭಿವೃದ್ಧಿಗೆ ನಿಗಮ ಮಂಡಳಿಯನ್ನು ಸ್ಥಾಪಿಸಿ 40 ಕೋಟಿ ರೂ.ನೀಡಿದ್ದರು. ಬಿಜೆಪಿ ಸರ್ಕಾರ ಕೇವಲ 10 ಕೋಟಿ ನೀಡಿ ಸಮುದಾಯದ ಸ್ವಲಂಬನೆಗೆ ಸರ್ಕಾರಗಳು ಪ್ರೋತ್ಸಾಹಿಸಿದ್ದವು ಎಂದು ತಿಳಿಸಿದರು.

ಸೆ.21 ಬೆಳಿಗ್ಗೆ 11 ಗಂಟೆಗೆ ನಗರದ ಸಿರಸಪ್ಪಯ್ಯನ ಮಠದಿಂದ ವಿಶ್ವಕರ್ಮ ಸಮಾಜದ ಜಯಂತಿಯ ಮೆರವಣಿಗೆ ಆರಂಭವಾಗಲಿದೆ. ಅಲ್ಲಿಂದ ಅಶೋಕ ಸರ್ಕಲ್ ಹತ್ತಿರದ ಸಾಹಿತ್ಯ ಭವನದಲ್ಲಿ ವಿವಿಧ ಕಾರ್ಯಕ್ರಮಗಳು ಜರುಗಲಿವೆ. ಪ್ರಸ್ತುತ ಕಾರ್ಯಕ್ರಮಕ್ಕೆ ಸಮಾಜದ ಬಂಧು ಬಾಂಧವರು ಆಗಮಿಸಿ ಕಾರ್ಯಕ್ರಮವನ್ನ ಯಶಸ್ವಿಗೊಳಿಸಲು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ವಿಶ್ವಕರ್ಮ ನಿಗಮ ಮಂಡಳಿಯ ಮಾಜಿ ಸದಸ್ಯ ಪ್ರಭಾಕರ ಬಡಿಗೇರ ಗುಳದಳ್ಳಿ, ಮುಖಂಡರಾದ ದೇವಪ್ಪ ಬಡಿಗೇರ, ರುದ್ರಪ್ಪ ಬಡಿಗೇರ ಸೇರಿದಂತೆ ಇತರರು ಉಪಸ್ಥಿತರಿದ್ದರು.

 

 

Get real time updates directly on you device, subscribe now.

Comments are closed.

error: Content is protected !!
%d bloggers like this: