ಜೈಲಿನಲ್ಲಿ ಕೊಟ್ನೆಕಲ್ ಕೃತಿ ಬಿಡುಗಡೆ

Get real time updates directly on you device, subscribe now.

ಕೊಪ್ಪಳ; , ಮೇಘನಾ ಪ್ರಕಾಶನ ಕೊಪ್ಪಳ ಹಾಗೂ ಜಿಲ್ಲಾ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಶ್ರೀ ಗವಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕರಾದ ಸಿದ್ಧಲಿಂಗಪ್ಪ ಕೊಟ್ನೆಕಲ್‌ರವರ “ಕೊಪ್ಪಳ ಚರಿತ್ರೆ ಮತ್ತು ಸಂಸ್ಕೃತಿಯ ಹುಡುಕಾಟ” ಎಂಬ ಸಂಶೋಧನಾ ಕೃತಿಯ ಬಿಡುಗಡೆ ನಗರದ ಹಾಲವರ್ತಿ ರಸ್ತೆಯಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಬಿಡುಗಡೆಗೊಳ್ಳಲಿದೆ. ಈ ಕೃತಿಯನ್ನು ಸ್ವಾತಂತ್ರö್ಯ ಹೋರಾಟಗಾರರಾದ

ನಾರಾಯಣಾಚಾರ ಮಾದಿನೂರುರವರು ಬಿಡುಗಡೆ ಮಾಡಲಿದ್ದಾರೆ. ಕೃತಿಯ ಕುರಿತು ಬಂಡಾಯ ಸಾಹಿತಿ ಹಾಗೂ ಹೋರಾಟಗಾರರಾದ ಪ್ರೊ.ಅಲ್ಲಮಪ್ರಭು ಬೆಟ್ಟದೂರುರವರು ಮಾತನಾಡಲಿದ್ದಾರೆ. ‘ಭವಿಷ್ಯದ ಬದುಕಿಗೆ ಪರಿವರ್ತನೆ ಹಾದಿ’ ಎಂಬ ವಷಯ ಕುರಿತು ಪ್ರೊ.ಶರಣಬಸಪ್ಪ ಬಿಳಿಎಲೆಯವರು ಮಾತನಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕಾರಾಗೃಹದ ಅಧೀಕ್ಷಕರಾದ  ವಿಜಯಕುಮಾರ ಚವ್ಹಾಣರವರು ವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಹಿರಿಯ ಸಾಹಿತಿಗಳಾದ ಡಾ.ಮಹಾಂತೇಶ ಮಲ್ಲನಗೌಡರ್, ಪ್ರಾಧ್ಯಾಪಕರಾದ ಡಾ.ಬಸವರಾಜ ಪೂಜಾರ್ ಭಾಗವಹಿಸಲಿದ್ದಾರೆ. ಕೃತಿ ಲೇಖಕರಾದ ಸಿದ್ಧಲಿಂಗಪ್ಪ ಕೊಟ್ನೆಕಲ್‌ರವರು ಉಪಸ್ಥಿತರಿರಲಿದ್ದಾರೆಂದು ಮೇಘನಾ ಪ್ರಕಾಶನದ ಪ್ರಕಾಶಕರಾದ ಶ್ರೀಮತಿ ಮಂಜುಳಾ ಕೊಟ್ನೆಕಲ್‌ರವರು  ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!
%d bloggers like this: