ನೆಟ್‌ಬಾಲ್ ಚಿನ್ನ ಪಡೆದ ಸಾಹಿತ್ಯ ಗೊಂಡಬಾಳಗೆ ವಿಶೇಷ ಗೌರವ

ಕೊಪ್ಪಳ: ನಗರದ ಶ್ರೀ ಚೈತನ್ಯ ಸಮೂಹದ ಲೈಯನ್ಸ್ ಸ್ವಾಮಿ ವಿವೇಕಾನಂದ ಪದವಿಪೂರ್ವ ವಿಜ್ಞಾನ ಕಾಲೇಜಿನ ದ್ವಿತಿಯ ಪಿಯು ವಿದ್ಯಾರ್ಥಿನಿ ಸಾಹಿತ್ಯ ಮಂಜುನಾಥ ಗೊಂಡಬಾಳ ೧೯ ವರ್ಷದೊಳಗಿನ ಕರ್ನಾಟಕ ತಂಡಕ್ಕೆ ಆಡಿ ರಾಷ್ಟ್ರೀಯ ಶಾಲಾ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದು ಜಿಲ್ಲೆಗೆ, ರಾಜ್ಯಕ್ಕೆ ಕೀರ್ತಿ ತಂದಿರುವದಕ್ಕೆ ಪಪೂ ಇಲಾಖೆ ವಿಶೇಷ ಗೌರವ ಸಲ್ಲಿಸುತ್ತದೆ ಎಂದು ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಉಪನಿರ್ದೇಶಕ ಜಗದೀಶ ಅವರು ತಿಳಿಸಿದ್ದಾರೆ.
ಈಚೆಗೆ ಮಂಗಳೂರಿನಲ್ಲಿ ಸ್ಕೂಲ್ ಗೇಮ್ಸ್ ಆಫ್ ಇಂಡಿಯಾ, ಕರ್ನಾಟಕ ಸರಕಾರ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಮತ್ತು ಸ್ವಾಮಿ ವಿವೇಕಾನಂದ ಪದವಿಪೂರ್ವ ಕಾಲೇಜು ಎಡಪದವುಗಳ ಆಶ್ರಯದಲ್ಲಿ ಜರುಗಿದ ೧೯ ವರ್ಷದೊಳಗಿನ ಬಾಲಕ ಬಾಲಕಿಯರ ರಾಷ್ಟ್ರೀಯ ನೆಟ್‌ಬಾಲ್ ಕ್ರೀಡಾಕೂಟದಲ್ಲಿ ೧೨ ಜನರ ಕರ್ನಾಟಕ ತಂಡದಲ್ಲಿ ಆಯ್ಕೆಯಾಗಿ, ಕ್ಯಾಂಪನಲ್ಲಿ ತರಬೇತಿ ಹೊಂದಿ ಕರ್ನಾಟಕದ ಐತಿಹಾಸಿಕ ದಾಖಲೆಯ ಮೊದಲ ಬಾರಿ ಚಿನ್ನದ ಪದಕ ಗೆದ್ದ ತಂಡದಲ್ಲಿದ್ದು ಜಿಲ್ಲೆಗೆ, ರಾಜ್ಯಕ್ಕೆ ಕೀರ್ತಿ ತಂದಿರುತ್ತಾಳೆ.
ಸಂಗೀತ, ವೆಸ್ಟರ್ನ್ ನೃತ್ಯ, ಭರತನಾಟ್ಯ ಸೇರಿದಂತೆ ಗಿಟಾರ್ ವಾದನ, ಕೀಬೋರ್ಡ, ಹಾರ್ಮೋನಿಯಂ ನುಡಿಸುವದು ಮತ್ತು ಮೌಥ್ ಪಿಯಾನೋದಲ್ಲಿ ಪರಿಣತಿಯನ್ನು ಹಾಗೂ ಕ್ರೀಡಾ ಕ್ಷೇತ್ರದ ಸಾಧನೆ ಪರಿಗಣಿಸಿ ರಾಜ್ಯಮಟ್ಟದ ಬಾಲಗೌರವ ಪ್ರಶಸ್ತಿ ಪಡೆದಿರುವ ಕು. ಸಾಹಿತ್ಯ ಎಂ. ಗೊಂಡಬಾಳ, ಕೊಪ್ಪಳಕ್ಕೆ ಮೊದಲ ಸಲ ರಾಜ್ಯಮಟ್ಟದ ದಸರಾ ಸಿಎಂ ಕಪ್ ನೆಟ್‌ಬಾಲ್ ಕಂಚಿನ ಪದಕ, ಪೆಂಕಾಕ್ ಸಿಲತ್‌ನಲ್ಲಿ ರಾಜ್ಯ ಮತ್ತು ರಾಷ್ಟಮಟ್ಟದ ಪದಕ ಪಡೆದಿರುವದನ್ನು ಪರಿಗಣಿಸಿ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಗಣರಾಜ್ಯೋತ್ಸವದಲ್ಲಿ ಸಚಿವರಾದ ಶಿವರಾಜ ತಂಗಡಗಿ, ಶಾಸಕರಾದ ರಾಘವೇಂದ್ರ ಹಿಟ್ನಾಳ, ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಮತ್ತು ಜಿ.ಪಂ. ಸಿಇಓ ವರ್ಣಿತ್ ನೇಗಿ ಅವರು ಸನ್ಮಾನ ಮಾಡಿದ್ದು, ವಿಶೇಷ ಗೌರವ ಮತ್ತು ಕ್ರೀಡಾ ಸಹಾಯಧನ ಕೊಡುವಂತೆ ಇಲಾಖೆಗೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಪತ್ರ ಬರೆಯಲಾಗುವದು ಎಂದು ಉಪನಿರ್ದೇಶಕರ ಕಛೇರಿ ಪ್ರಕಟನೆಯಲ್ಲಿ ತಿಳಿಸಿದೆ.
Comments are closed.