ಏನೇ ಆದರೂ ನಮಗೆ ಆರೋಗ್ಯವೇ ಮುಖ್ಯ; ಸಂಗಣ್ಣ ಕರಡಿ ಕ್ವಿಟ್ ಬಲ್ಡೋಟ ೮೫ನೇ ದಿನದ ಧರಣಿ
Quit Baldota 85th day of sit-in

ಕ್ವಿಟ್ ಬಲ್ಡೋಟ ೮೫ನೇ ದಿನದ ಧರಣಿಗೆ ಗವಿಸಿದ್ದೇಶ್ವರ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು, ಬೀದಿ ಬದಿ ವ್ಯಾಪಾರಿಗಳು ಸಾಥ್
ಕೊಪ್ಪಳ: ನಗರಕ್ಕೆ ಹೊಂದಿಕೊAಡ ಬಲ್ಡೋಟ ಕಾರ್ಖಾನೆಯ ಲೈಸೆನ್ಸ್ ರದ್ಧಾಗಬೇಕು. ಹಲವು ವರ್ಷಗಳಿಂದ ನನ್ನ ಕವಲೂರು ಬಡಾವಣೆಯ ಮನೆ ದೂಳು ಬಾಧಿತವಾಗಿದೆ. ಸುತ್ತಲೂ ಇರುವ ವಾಸದ ಬಡಾವಣೆಗಳ ಜನರು ಬಹಳಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಸಂಸದರಾದ ಸಂಗಣ್ಣ ಕರಡಿ ಹೇಳಿದರು.
ನಗರಸಭೆ ಪಕ್ಕದ ವಾಣಿಜ್ಯ ಸಂಕೀರ್ಣದ ಹತ್ತಿರÀ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆ ನೇತೃತ್ವದಲ್ಲಿ ನಡೆಯುತ್ತಿರುವ ಅನಿರ್ದಿಷ್ಟ ಧರಣಿ ಹೋರಾಟ ೮೫ನೇ ದಿನದಲ್ಲಿ ಭಾಗವಹಿಸಿ ಮಾತನಾಡಿದರು.
ಈ ಹೋರಾಟವು ನಗರದ ಒಂದೂವರೆ ಲಕ್ಷ, ೨೦ ಹಳ್ಳಿಗಳ ೫೦ ಸಾವಿರ ಜನರ ಜೀವ, ಆರೋಗ್ಯಕ್ಕೆ ಸಂಬAಧಿಸಿದೆ. ೮೫ನೇ ದಿನದ ಈ ಹೋರಾಟ ತಾರ್ಕಿಕವಾಗಿ ಜಯದೊಂದಿಗೆ ಮುಕ್ತಾಯವಾಗಬೇಕಿದೆ. ಇಷ್ಟೊಂದು ಸುದೀರ್ಘ ದಿನಗಳಿಂದ ಹೋರಾಟ ನಡೆಸುವ ಈ ಹೋರಾಟಗಾರರು ಅಭಿನಂದನಾರ್ಹರು. ಯಾವುದೇ ಕಾರಣಕ್ಕೂ ವಿಸ್ತರಣೆ, ಹೊಸ ಸ್ಥಾಪನೆ ಇಲ್ಲಿ ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ಸ್ಪಾಂಜ್ ಐರನ್ ಕಾರ್ಖಾನೆಗಳು ಇಷ್ಟೊಂದು ಮಾಲಿನ್ಯ ಮಾಡಿವೆ. ಅವುಗಳು ಮಾಲಿನ್ಯ ನಿಯಂತ್ರಣ ಮಾಡಿದರೆ ಹಳ್ಳಿ ಜನರು, ಕೃಷಿ ಉಳಿಯುತ್ತದೆ. ಇಲ್ಲದಿದ್ದರೆ ರೋಗ ರುಜಿನ ಹೆಚ್ಚಾಗಿ ಅಕಾಲಿಕ ಸಾವು ಹೆಚ್ಚುತ್ತವೆ. ಬಲ್ಡೋಟ ವಿಸ್ತರಣೆ ಅಷ್ಟೇ ಅಲ್ಲ ಈಗಿರುವ ಲೈಸೆನ್ಸ್ ರದ್ಧಾಗಬೇಕು ಎನ್ನುವದಕ್ಕೆ ಸಹಮತವಿದೆ.
ಕಾರ್ಖಾನೆ ಮಾಲಿನ್ಯ ಗಾಳಿ, ನೀರು, ಅಂತರ್ಜಾಲದಲ್ಲಿ ಸೆರಿಕೊಂಡಿದೆ. ಬಸಾಪುರ ಕೆರೆ ಬಲ್ಡೋಟ ಅತಿಕ್ರಮಿಸಿದ್ದು ಮುಕ್ತವಾಗಬೇಕು. ಜನ ಜಾನುವಾರು ನೀರು ಕುಡಿಯುವಂತಾಗಬೇಕು. ಜಿಲ್ಲಾ ಮಂತ್ರಿ ಶಿವರಾಜ ತಂಗಡಗಿ, ಶಾಸಕರಾದ ರಾಘವೇಂದ್ರ ಹಿಟ್ನಾಳ, ಮುಖ್ಯಮಂತ್ರಿ ಆರ್ಥಿಕ ಸಲಹೆಗಾರರಾದ ಬಸವರಾಜ ರಾಯರೆಡ್ಡಿ, ಸಂಸದರಾದ ರಾಜಶೇಖರ ಹಿಟ್ನಾಳ, ಜನಾರ್ಧನರಡ್ಡಿ, ದೊಡ್ಡನಗೌಡ ಪಾಟೀಲ್, ಹೇಮಲತಾ ನಾಯಕ ಹಾಗೂ ಜಿಲ್ಲೆಯ ವಿರೋಧ ಪಕ್ಷದ ನಾಯಕರು, ಹೋರಾಟ ವೇದಿಕೆಯ ಮುಖಂಡರು ಸೇರಿ ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಒಂದು ಸಭೆಯನ್ನು ಕರೆಯುವ ವ್ಯವಸ್ಥೆ ಮಾಡಿಸಲು ಪ್ರಯತ್ನ ಮಾಡುತ್ತೇನೆ. ಮುಂದೆ ಮುಖ್ಯಮಂತ್ರಿಗಳ ಮುಂದೆ ಸರ್ವಪಕ್ಷ ಮತ್ತು ಹೋರಾಟದ ಮುಖಂಡರ ನಿಯೋಗ ತೆಗೆದುಕೊಂಡು ಹೋಗೋಣ. ನಮ್ಮ ನ್ಯಾಯಯುತವಾದ ಜೀವ, ಆರೋಗ್ಯ ಉಳಿಸಿಕೊಳ್ಳುವ ಬೇಡಿಕೆಗೆ ಸರ್ಕಾರ ಮತ್ತು ಮುಖ್ಯಮಂತ್ರಿಗಳು ಸ್ಪಂದಿಸುತ್ತಾರೆ ಎನ್ನುವ ಭರವಸೆ ಇದೆ. ಮಾರ್ಚ್ ೩ರ ಒಳಗಾಗಿ ಇತ್ಯರ್ಥಪಡಿಸಲು ಪ್ರಯೋತ್ನಿಸೋಣ ಎಂದರು.
ಗವಿಸಿದ್ದೇಶ್ವರ ನರ್ಸಿಂಗ್ ಕಾಲೇಜು ಉಪನ್ಯಾಸಕರಾದ ಕೆ.ಎಸ್. ಸ್ವಾತಿ ಅವರು ಮಾತನಾಡಿ, ನಾನು ಬಾಧಿತ ಹಳ್ಳಿಯ ನಿವಾಸಿಯಾಗಿರುವೆ. ಕಾರ್ಖಾನೆ ಸುತ್ತುವರಿದ ಗ್ರಾಮಗಳು ಇಂದು ರೋಗ ಬಾಧಿತರ ಕೇಂದ್ರವಾಗಿವೆ. ಅಲ್ಲಿನ ಗಾಳಿ ಉಸಿರಾಡುವ ಜನ ಸಾಮಾನ್ಯವಾಗಿ ಪುಪ್ಪಸ ಸಂಬAಧಿ ಅಸ್ತಮಾ,ಟಿಬಿ ರೋಗಕ್ಕೆ ತುತ್ತಾಗಿ ನರುಳಾಡುತ್ತಿದ್ದಾರೆ. ಮುಂದಿನ ಪೀಳಿಗೆ ಉಳಿಯಬೇಕಾರೆ ಮಾಲಿನ್ಯ ನಿಯಂತ್ರಣ ಮಾಡಬೇಕು ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರಸನ್ನ ಗಡಾದ್ ಮಾತನಾಡಿ, ನಾನು ನಗರಸಭೆ ಸಹಭಾಗಿತ್ವದಲ್ಲಿ ಧರಣಿ ಸ್ಥಳದ ಕುರಿತಾಗಿ ಸಮಸ್ಯೆ ಎದುರಾದರೆ ಬಗೆಹರಿಸುತ್ತೇನೆ. ಇದು ಲಕ್ಷಗಟ್ಟಲೆ ಜೀವಗಳಿಗೆ ಸಂಬAಧಿಸಿದ ಹೋರಾಟ ಆಗಿದ್ದು ಎಲ್ಲರೂ ಸಹಕಾರ ಮಾಡುತ್ತಾರೆ. ಒಂದು ವೇಳೆ ಪ್ರಚೋದನೆ ಯಾರದ್ದಾದರೂ ಕಂಡುಬAದರೆ ಅವರಿಗೂ ತಿಳಿಸಿ ಹೇಳೋಣ, ಜನರೊಟ್ಟಿಗೆ ನಾನು ಇರುತ್ತೇನೆ ಎಂದರು.
ಧರಣಿ ಜನರನ್ನು ಉದ್ದೇಶಿಸಿ ಘಟಪ್ರಭ ಕೇಂದ್ರ ಮಾನವ ಬಂಧುತ್ವ ವೆದಿಕೆ ಸಂಪನ್ಮೂಲ ವ್ಯಕ್ತಿಯಾದ ಮಹಾಲಿಂಗಪ್ಪ ಆಲ್ಬಾಳ ಮಾತನಾಡಿ ಬಂಡವಾಳಿಗರು ೧೯೯೧ರಿಂದ ಮಾರುಕಟ್ಟೆ ಮೇಲೆ ಏಕಸ್ವಾಮ್ಯ ಸಾಧಿಸಿದ ಕಾರಣಕ್ಕೆ ಜನರ ಜೀವ, ಆರೋಗ್ಯ ಅವರಿಗೆ ಕಾಣದು. ನೀತಿ ರೂಪಿಸುವ ಜನ ಪ್ರತಿನಿಧಿಗಳು ಅಂಬಾನಿ, ಅದಾನಿ, ಟಾಟಾ, ಬಿರ್ಲಾಗಳು ಮತ್ತು ಇಲ್ಲಿನ ಬಲ್ಡೋಟಗಳನ್ನು ಅಭಿವೃದ್ಧಿ ಮಾಡುತ್ತಾರೆ. ಆದ್ದರಿಂದ ಈ ಹೋರಾಟ ಸರ್ವ ಜನರಿಂದ ನಡೆದು ನಡೆದು ಗೆಲ್ಲಬೇಕು ಎಂದರು.
ಧರಣಿಯಲ್ಲಿ ಸಾಹಿತಿ ಎ.ಎಂ. ಮದರಿ, ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಡಿ.ಎಚ್. ಪೂಜಾರ, ಮಂಜುನಾಥ ಜಿ. ಗೊಂಡಬಾಳ, ಡಾ. ಮಂಜುನಾಥ ಸಜ್ಜನ್, ರಾಜು ಬಾಕಳೆ, ಎಸ್.ಬಿ. ರಾಜೂರು, ಜಿ.ಬಿ. ಪಾಟೀಲ್, ರವಿ ಕಾಂತನವರ, ಗಂಗಾಧರ ಖಾನಾಪೂರ, ರಾಜ್ಯ ರೈತ ಸಂಘದ ನಜೀರ್ ಸಾಬ್ ಮೂಲಿಮನಿ, ದಲಿತ ಮುಖಂಡ ಶುಕರಾಜ ತಾಳಕೇರಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ರಾಮಣ್ಣ ಕಲ್ಲಣ್ಣವರ, ಜಿಲ್ಲಾ ಕೆ ಬೀದಿಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ರೆಹಮತ್ ಉಲ್ಲಾ ಶಬ್ಬೀರ್, ರ‍್ರೀಸ್ವಾಮಿ, ಶರಣು ಗಡ್ಡಿ ಈಶ್ವರ ಹತ್ತಿ, ಶಾಂತಯ್ಯ ಅಂಗಡಿ, ಮಹಾಂತೇಶ ಕೊತಬಾಳ, ಎಂ.ಎಸ್.ಸಜ್ಜನ್, ಶಿವಪ್ಪ ಹಲಗೆರಿ, ಮೂಕಪ್ಪ ಮೇಸ್ತಿç ಬಸಾಪುರ, ಯಮನೂರಪ್ಪ ಹಾಲಳ್ಳಿ ಬಸಾಪುರ, ಹೋರಟಗಾರ ಡಾ. ಕೆ.ಎಸ್. ಜನಾರ್ಧನ, ರಾಮಚಂದ್ರ ಜಿ. ಕಡೇಮನಿ, ರತ್ನಮ್ಮ ದೊಡ್ಡಮನಿ, ಶಿವಪ್ಪ ಜಲ್ಲಿ, ಮಹಾದೇವಪ್ಪ ಮಾವಿನಮಾಡು, ವಿಜಯ ಮಹಾಂತೇಶ ಹಟ್ಟಿ, ಮಖ್ಬುಲ್ ರಾಯಚೂರು, ಜಮಲ್ ದಫೆದಾರ್, ಆನಂದ, ಮಕ್ಬುಲ್, ಮೌನೇಶ್, ರವಿ ಈರಣ್ಣ, ಹಾಲಪ್ಪ, ಶ್ರೀಕಾಂತ್, ಕಲೀಮ್ ಕಿನ್ನಾಳ್, ಮಂಜು, ಚಿನ್ನು, ಪರಸಪ್ಪ ಮನ್ನಾಪುರ, ಈರಮ್ಮ, ಮುದಿಯಪ್ಪ ಕಾಳಿದಾಸನಗರ್, ಗವಿಸಿದ್ದಪ್ಪ ಹೂಗಾರ್, ಸಂತೋಷ್, ಅನ್ನಪೂರ್ಣ, ನೂರಾರು ವ್ಯಾಪಾರಸ್ಥರು, ಗವಿಸಿದ್ದೇಶ್ವರ ನರ್ಸಿಂಗ್ ವಿದ್ಯಾರ್ಥಿಗಳು, ಕರ್ನಾಟಕ ರಾಜ್ಯ ಸಂಯುಕ್ತ ಬೀದಿಬದಿ ವ್ಯಾಪಾರಸ್ಥರ ಸಂಘ ಮತ್ತು ಚಿಕ್ಕ ಪುಟ್ಟ ಬೀದಿಬದಿ ವ್ಯಾಪಾರಸ್ಥರ ಹಿತ ರಕ್ಷಣಾ ಸಂಘದ ನೂರಾರು ಸದಸ್ಯರು ಭಾಗವಹಿಸಿದರು.
Comments are closed.