ವಿದ್ಯುತ್ ಕಂಬಕ್ಕೆ ಅಂಟಿಸಲಾದ ಪ್ರಕಟಣೆ ಕೊಪ್ಪಳ ನಗರಸಭೆಗೆ ಸಂಬಂಧಪಟ್ಟಿಲ್ಲ -ಪೌರಾಯುಕ್ತ

ಕೊಪ್ಪಳ ಜನವರಿ 14 : ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿನ ಬನ್ನಿಕಟ್ಟಿ ಬಡಾವಣೆಯ ಹತ್ತಿರ ಪದಕಿ ಲೇಔಟ್ (ನಗರಸಭೆ ಪಾರ್ಕ ಹತ್ತಿರ) ವಿದ್ಯುತ್ ಕಂಬಕ್ಕೆ ಇತ್ತೀಚೆಗೆ ಅಂಟಿಸಲಾದ ಪ್ರಕಟಣೆಯು ಕೊಪ್ಪಳ ನಗರಸಭೆಗೆ ಸಂಬಂಧಪಟ್ಟಿರುವುದಿಲ್ಲ.
ಜನವರಿ 11 ರಂದು ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿನ ಬನ್ನಿಕಟ್ಟಿ ಬಡಾವಣೆಯ ಹತ್ತಿರ ಪದಕಿ ಲೇಔಟ್ (ನಗರಸಭೆ ಪಾರ್ಕ ಹತ್ತಿರ) ಅಪರಿಚಿತ ವ್ಯಕ್ತಿಗಳು ನಗರಸಭೆ ವತಿಯಿಂದ ಎಂದು ಹೇಳಲಾಗುವ ಅಶ್ಲೀಲ ಪದಗಳ ಬಳಕೆಯನ್ನು ಮಾಡಿದ ಸೂಚನಾ ಬರಹವನ್ನು ವಿದ್ಯುತ್ ಕಂಬಕ್ಕೆ ಅಂಟಿಸಿರುತ್ತಾರೆ. ಇದರಿಂದಾಗಿ ಆ ಪ್ರದೇಶದ ನಿವಾಸಿಗಳು ಈ ರೀತಿಯ ಅಸಹ್ಯಕರ ಮತ್ತು ಅಶ್ಲೀಲ ಪದಗಳನ್ನು ಬಳಕೆ ಮಾಡಿ ಅಂಟಿಸಿರುವ ಸೂಚನಾ ಬರಹಕ್ಕೆ ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿರುತ್ತಾರೆ. ಈ ವಿಷಯದ ಕುರಿತು ಈಗಾಗಲೇ ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿ, ಪ್ರಕರಣ ದಾಖಲಿಸಿಕೊಳ್ಳುವಂತೆ ಪತ್ರವನ್ನು ಬರೆಯಲಾಗಿದೆ.
ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿನ ಬನ್ನಿಕಟ್ಟಿ ಬಡಾವಣೆಯ ಹತ್ತಿರ ಪದಕಿ ಲೇಔಟ್ (ನಗರಸಭೆ ಪಾರ್ಕ ಹತ್ತಿರ) ವಿದ್ಯುತ್ ಕಂಬಕ್ಕೆ ಅಂಟಿಸಲಾದ ಪ್ರಕಟಣೆಯನ್ನು ಯಾರೋ ಅಪರಿಚಿತ ವ್ಯಕ್ತಿಗಳು ಈ ರೀತಿ ಫಲಕವನ್ನು ವಿದ್ಯುತ್ ಕಂಬಕ್ಕೆ ಅಂಟಿಸಿರುತ್ತಾರೆ. ಆದಕಾರಣ ಈ ವಿಷಯವನ್ನು ನಗರದ ಸಾರ್ವಜನಿಕರ ಗಮನಕ್ಕೆ ತರುತ್ತಾ, ಇನ್ನು ಮುಂದೆ ಈ ರೀತಿಯ ಕೃತ್ಯವನ್ನು ಮಾಡಿದಲ್ಲಿ ಅಂಥಹ ವ್ಯಕ್ತಿಗಳ ವಿರುದ್ಧ ಕಾನೂನು ರೀತ್ಯಾ ನಿಯಮಾನುಸಾರ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದೆಂಬ ಅಂಶವನ್ನು ನಗರದ ಸಾರ್ವಜನಕರಿಗೆ ತಿಳಿಯಪಡಿಸಲಾಗಿದೆ ಎಂದು ಕೊಪ್ಪಳ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.