ಆಡಳಿತ ನಿಷ್ಕ್ರಿಯತೆಯಿಂದ ಕುಲಪತಿ ನಿರ್ಗಮನ: ಸಿವಿಸಿ

ಕೊಪ್ಪಳ: ಕೊಪ್ಪಳ ವಿಶ್ವವಿದ್ಯಾಲಯದ ಪ್ರಥಮ ಕುಲಪತಿಯಾದ ಬಿಕೆ ರವಿ ಅವರು ನಿರಾಶಾಯದಾಯಕವಾಗಿ ವಿದಾಯ ಹೇಳಿದ್ದು ಕೊಪ್ಪಳದ ನಿಷ್ಕ್ರಿಯ ಆಡಳಿತ ವ್ಯವಸ್ಥೆಯ ದ್ಯೋತಕ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ ವಿ ಚಂದ್ರಶೇಖರ್ ಕಿಡಿ ಕಾರಿದ್ದಾರೆ.
ಬಿ ಕೆ ರವಿ ಸಮರ್ಥ ಆಡಳಿತಗಾರರು. ಮುಖ್ಯಮಂತ್ರಿ ಅವರ ಜೊತೆಗೆ ಆಪ್ತವಾಗಿ ಕೆಲಸ ಮಾಡಿದವರು. ಕಳೆದ ಎರಡೂವರೆ ವರ್ಷಗಳಲ್ಲಿ ಅವರಿಗೆ ಕೊಪ್ಪಳ ವಿಶ್ವವಿದ್ಯಾಲಯದಲ್ಲಿ ಉಸಿರುಗಟ್ಟುವ ವಾತಾವರಣ ಇತ್ತು. ಈ ಭಾಗಕ್ಕೆ ಕೊಡುಗೆ ಕೊಡಬೇಕೆಂದು ಅಪಾರ ನಿರೀಕ್ಷೆ ಹೊಂದಿದ್ದ ಅವರನ್ನು ಶಾಸಕ ಮತ್ತು ಸಂಸದರು ತಮ್ಮ ನಿಷ್ಕ್ರಿಯತೆಯಿಂದ ಭ್ರಮ ನಿರಸನಗೊಳಿಸಿದರು. ಸ್ವಂತ ಕಟ್ಟಡ, ಕನಿಷ್ಠ ಸಿಬ್ಬಂದಿ ವರ್ಗ, ಸರಿಯಾದ ಹಣಕಾಸು ವ್ಯವಸ್ಥೆ ಇಲ್ಲದೆ ರವಿಯವರು ಪರದಾಡಬೇಕಾಯಿತು. ಶಾಸಕರ ಮತ್ತು ಸಂಸದರ ಮರೆ ಹೋದರೂ ಕೂಡ ಪ್ರಯೋಜನವಾಗಲಿಲ್ಲ. ವಿಶ್ವವಿದ್ಯಾಲಯ ಪ್ರಗತಿಗಾಗಿಕಾರಣಕ್ಕೂ ಶಾಸಕ ಮತ್ತು ಸಂಸದರು ಸರಕಾರದ ಮೇಲೆ ಒತ್ತಡ ತಂದು ಕೆಲಸ ಮಾಡಬಹುದಿತ್ತು. ಆದರೆ ಅದು ಅವರಿಗೆ ಲಾಭದಾಯಕವಾಗಿರದ ಕಾರಣ ಅದನ್ನು ಮಾಡಲಿಲ್ಲ. ಪೂರಕ ವಾತಾವರಣವಿದ್ದರೆ ಸಮರ್ಥ ಆಡಳಿತಗಾರನನ್ನು ಕೊಪ್ಪಳ ವಿಶ್ವವಿದ್ಯಾಲಯ ಕಳೆದುಕೊಳ್ಳುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಅವರು
ಆರೋಪಿಸಿದ್ದಾರೆ.
ನೂತನವಾಗಿ ಅಧಿಕಾರವಹಿಸಿಕೊಂಡಿರುವ ಡಾ. ಎಸ್ ವಿ ಡಾಣಿ ರವಿ ಅವರಷ್ಟೇ ಸಮರ್ಥರು. ಶಾಸಕ ಮತ್ತು ಸಂಸದರು ಕೊಪ್ಪಳ ವಿಶ್ವವಿದ್ಯಾಲಯದ ಜವಾಬ್ದಾರಿ ವಹಿಸಿಕೊಂಡ ಡಾಣಿಯವರಿಗೆ ಸಹಕಾರ ನೀಡಬೇಕು. ಸರಕಾರದ ಮೇಲೆ ಒತ್ತಡ ತಂದು ವಿಶ್ವವಿದ್ಯಾಲಯದ ಅಭಿವೃದ್ಧಿಗಾಗಿ ಆಗಬೇಕಿರುವ ಕೆಲಸವನ್ನು ಮಾಡಬೇಕು ಎಂದು ತಿಳಿ ಹೇಳಿದ್ದಾರೆ.
Comments are closed.