ಗ್ರಾಹಕರು ವಸ್ತುವನ್ನು ಖರೀದಿ ಮಾಡಿದಲ್ಲಿ ತಪ್ಪದೆ ರಶೀದಿಯನ್ನು ಪಡೆದುಕೊಳ್ಳಬೇಕು : ನ್ಯಾ.ರಂಗಸ್ವಾಮಿ ಜೆ
ಕುಕನೂರ : ಗ್ರಾಹಕರಾದ ನಾವು
ಯಾವುದೇ ಒಂದು ವಸ್ತುವನ್ನು ಖರೀದಿ ಮಾಡಿದಲ್ಲಿ ತಪ್ಪದೆ ರಶೀದಿಯನ್ನು ಪಡೆದುಕೊಳ್ಳಬೇಕು, ಹಾಗೆ ಪಡೆದುಕೊಂಡ ರಷೀದಿಯಿಂದ ಅಂಗಡಿ ಮಾಲೀಕರು
ಮೋಸ ಮಾಡಿದರೆ ಅಥವಾ ಖರೀದಿಸಿದ ವಸ್ತುಗಳು
ಕಳಪೆ ಅಂತ ತಿಳಿದು ಬಂದರೆ
ಅಧೀಕೃತ ರಷೀದಿ ಮೂಲಕ ನಾವು ಪರಿಹಾರ ಪಡೆದುಕೊಳ್ಳಲು ಹಕ್ಕನ್ನು ಹೊಂದಿರುತ್ತೇವೆ.
ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ರಂಗಸ್ವಾಮಿ ಜೆ ಹೇಳಿದರು.

ತಾಲೂಕು ಕಾನೂನು ಸೇವಾ ಸಮಿತಿ ನ್ಯಾಯವಾದಿಗಳ ಸಂಘ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಯಲಬುರ್ಗಾ ಕಂದಾಯ ಇಲಾಖೆ ಕುಕನೂರ್ ಗ್ರಾಮ ಪಂಚಾಯತಿ ಬೆಳಗೇರಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಗ್ರಾಹಕರ ಹಕ್ಕುಗಳ ದಿನಾಚರಣೆ ಹಾಗೂ ಅಂತರಾಷ್ಟ್ರೀಯ ವಿಕಲಚೇತನರ ದಿನಾಚರಣೆಯನ್ನು ಬಳಗೇರಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದು ಕಾರ್ಯಕ್ರಮವನ್ನು ಉದ್ಘಾಟನೆಯನ್ನು
ಉದ್ಘಾಟಿಸಿ ಮಾತನಾಡಿದ ಅವರು ಅಂಗಡಿ ಮಾಲೀಕರು ತಮ್ಮ ಗ್ರಾಹಕರೊಂದಿಗೆ ಉತ್ತಮ ಸೌಜನ್ಯತೆ ಇರಿಸಿಕೊಳ್ಳಬೇಕು, ಬೇಕಾ ಬಿಟ್ಟಿ ವ್ಯವಹರಿಸಿದರೆಂದು ಕಂಡು ಬಂದರೆ ಕ್ರಮ ಜರುಗಿಸಲಾಗುವದು ಎಂದರು.
. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಗೌರಮ್ಮ ವಿರೂಪಾಕ್ಷಪ್ಪ ಕುರ್ತಕೋಟಿ ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಎಂ, ಎಸ್ ನಾಯಕರ್ ಉಪಾಧ್ಯಕ್ಷರು ವಕೀಲರ ಸಂಘದ ಯಲಬುರ್ಗಾ, ಬಸವರಾಜ ಮಂಗಳೂರು ಸಹಾಯಕ ಸರ್ಕಾರಿ ಅಭಿಯೋಜಕರು ರವಿಕುಮಾರ್ ಮಲ್ಲನಗೌಡ ಎಸ್ ಪಾಟೀಲ್ ಪರಸರ್ಕಾರಿ ವಕೀಲರು ಮಹೇಶ್ ಗೌಡ ಪಿಡಿಒ ಬಳಗೇರಿ ಬೆಟ್ಟದೀಶ್ ಮಾಳೆಕೊಪ್ಪ ಸಿ ಡಿ ಪಿ ಓ ಯಲಬುರ್ಗಾ, ಮಹಾಂತೇಶ್ ಇ, ಟಿ, ಪ್ರಧಾನ ಕಾರ್ಯದರ್ಶಿಗಳು ವಕೀಲರ ಸಂಘ ಯಲಬುರ್ಗಾ, ಗ್ರಾಮ ಪಂಚಾಯತಿ ಸದಸ್ಯರಾದ ನಿಂಗಪ್ಪ ಮಳಕೊಪ್ಪ, ಹನುಮಕ್ಕ ಗೌಡ್ರು ಶರಣಪ್ಪ ಕುಕುನೂರು, ಈರಪ್ಪ ಕರೆಕುರಿ ಹಾಗೂ ನ್ಯಾಯಾಲಯದ ಸಿಬ್ಬಂದಿಯಾದ ರಾಘವೇಂದ್ರ ಕೋಳಿಹಾಳ್ ಹಾಗೂ ವಿನಾಯಕ್ ಇದ್ದರು
Comments are closed.