ಸ್ಥಳೀಯ ಚುನಾವಣೆಗಳಲ್ಲಿ ಜೆಡಿಎಸ್ ಗೆಲುವು ನಿಶ್ಚಿತ – ಸುರೇಶ್ ಭೂಮರಡ್ಡಿ

‘
ಕೊಪ್ಪಳ: ಜಿಲ್ಲೆಯಾದ್ಯಂತ ಜೆಡಿಎಸ್ ಪುನಶ್ಚೇತನ ಕಾರ್ಯ ಆರಂಭವಾಗಿದೆ. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಪಕ್ಷ ದಿಗ್ವಿಜಯ ಸಾಧಿಸುವುದು ಶತಸಿದ್ಧ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಸುರೇಶ್ ಭೂಮರಡ್ಡಿ ಹೇಳಿದರು.
ನಗರದಲ್ಲಿ ಶನಿವಾರ ಬೂತ್ ಮಟ್ಟದ ಕಾರ್ಯಕರ್ತರ ನೇಮಕ ಹಾಗೂ ಸದಸ್ಯತ್ವ ನೋಂದಣಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
“ಮುಂದಿನ ಎಲ್ಲಾ ಚುನಾವಣೆಗಳಲ್ಲಿ ಪಕ್ಷ ಮುನ್ನಡೆ ಸಾಧಿಸಲು ಸಕಲ ಸಿದ್ಧತೆಗಳನ್ನು ಕೈಗೊಳ್ಳಬೇಕಿದೆ. ಇದಕ್ಕೆ ಬೇಕಾದ ಯೋಜನೆ ಸಿದ್ಧಗೊಂಡಿದೆ. ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಯೊಂದು ಮನೆಗೂ ಭೇಟಿ ನೀಡಿ ಪಕ್ಷಕ್ಕೆ ಬೆಂಬಲ ದೊರಕುವಂತೆ ನೋಡಿಕೊಳ್ಳಬೇಕು,” ಎಂದು ಹೇಳಿದರು.
ನಗರದಲ್ಲಿ ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸುವ ಹಾಗೂ ಜನರ ಧ್ವನಿಯನ್ನು ಗಟ್ಟಿಯಾಗಿಸುವ ನಿರ್ಧಾರ ಮಾಡಲಾಗಿದೆ. ಇದಕ್ಕಾಗಿ ಬೂತ್ ಮಟ್ಟದ ಕಾರ್ಯಕರ್ತರ ಸಭೆ ಏರ್ಪಡಿಸಲಾಗಿದೆ. ಸ್ಥಳೀಯ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ಹೆಚ್ಚಿನ ಜವಾಬ್ದಾರಿ ನೀಡಲಾಗುವುದು. ಪಕ್ಷಕ್ಕೆ ಉತ್ತಮ ವಾತಾವರಣವಿದ್ದು ಅದನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ರಾಜ್ಯ ಕೋರ್ ಕಮಿಟಿ ಸದಸ್ಯ ಸಿ ವಿ ಚಂದ್ರಶೇಖರ್ ಹೇಳಿದರು.
“ಪಕ್ಷದಲ್ಲಿ ನಿಷ್ಠೆಯಿಂದ ದುಡಿದು, ಪಕ್ಷ ನೀಡುವ ಜವಾಬ್ದಾರಿಗಳನ್ನು ನಿಭಾಯಿಸುವ ಮೂಲಕ ಮುಂದಿನ ದಿನಮಾನಗಳಲ್ಲಿ ಜಿಲ್ಲೆಯಲ್ಲಿ ಪಕ್ಷದ ಧ್ವಜವನ್ನು ಎತ್ತಿ ಹಿಡಿಯುವ ಸಂಕಲ್ಪವನ್ನು ಎಲ್ಲರೂ ಕೈಗೊಳ್ಳಬೇಕು,” ಇಂದು
ಜಿಲ್ಲಾ ಸಂಸ್ಕೃತಿ ವಿಭಾಗದ ಅಧ್ಯಕ್ಷರಾದ ಮಂಜುನಾಥ ಸೊರಟೂರು ಹೇಳಿದರು.
ಪಕ್ಷದ ಕೊಪ್ಪಳ ತಾಲೂಕ
ಬಿಎಲ್ಎ–1 ರಮೇಶ್ ಡಂಬ್ರಳ್ಳಿ ಬಿ ಎಲ್ ಎ ಕಾರ್ಯಕರ್ತರ ಕೆಲಸ ಮತ್ತು ಜವಾಬ್ದಾರಿಗಳನ್ನು ವಿವರಿಸಿದರು.
ಸಭೆಯಲ್ಲಿ ಕೊಪ್ಪಳ ನಗರದ ವಿವಿಧ ವಾರ್ಡ್‌ಗಳಿಗೆ ಬೂತ್ ಮಟ್ಟದ ಕಾರ್ಯಕರ್ತರನ್ನು ನೇಮಕ ಮಾಡಲಾಯಿತು.
ಮಹಿಳಾ ನಗರ ಘಟಕ ಅಧ್ಯಕ್ಷೆ ನಿರ್ಮಲಾ ಎನ್ ಮೇದರ, ಉಪಾಧ್ಯಕ್ಷೆ ರತ್ನಮ್ಮ ಹಿರೇಮಠ, ಅಲ್ಪಸಂಖ್ಯಾತ ನಗರ ಘಟಕ ಅಧ್ಯಕ್ಷ ಸಿರಾಜ್ ಕೋಲ್ಕಾರ್, ಕ್ರೀಡಾ ವಿಭಾಗ ಅಧ್ಯಕ್ಷ ಸೈಯದ್ ಮೆಹಬೂಬ್ ಹುಸೇನ್ ಬಲ್ಲೆ, ತಾಲೂಕು ಗ್ರಾಮೀಣ ಘಟಕ ಅಧ್ಯಕ್ಷ ವಿರೇಶ್ ದಳಪತಿ, ಮುಖಂಡರಾದ ಪ್ರವೀಣಕುಮಾರ ಇಟಗಿ, ಶ್ರೀನಿವಾಸ ಗೊಂದಳಿ, ಮಾರುತಿ, ಶಿವಕುಮಾರ ಚಟ್ಟಿ, ಪ್ರಾಣೇಶ್ ಕಂಪ್ಲಿಕರ್, ಸುಧಾಕರ್, ಶಿವರಾಜ ಮಠಪತಿ, ರವಿಕುಮಾರ, ಸುರೇಶ್ ದದೇಗಲ್, ಮಂಜುನಾಥ, ಭಾಗ್ಯಶ್ರೀ ಐವಳಿ, ಸಿದ್ದೇಶ ಇಂಗಳದಾಳ, ರಂಗಪ್ಪ ಭೋವಿ, ಲಕ್ಷ್ಮಣ ಭೋವಿ, ಬಸವರಾಜ ಗಾಳಿ, ಕಿರಣಕುಮಾರ ಹಿರೇಮಠ, ಸಲೀಮ್ ಸೇರಿದಂತೆ ಅನೇಕ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸಿವಿಸಿ ಫೌಂಡೇಶನ್ ವತಿಯಿಂದ ನೂತನ ವರ್ಷದ ಕ್ಯಾಲೆಂಡರ್ ವಿತರಿಸಲಾಯಿತು.
ಜಿಲ್ಲಾ ಕೋಶಾಧ್ಯಕ್ಷರಾದ ಮೌನೇಶ್ ಕಿನ್ನಾಳ ಅವರು ಸ್ವಾಗತಿಸಿದರು. ನಗರ ಘಟಕದ ಅಧ್ಯಕ್ಷರಾದ ಸೋಮನಗೌಡ ಹೊಗರನಾಳ ವಂದಿಸಿದರು.
ಶೀರ್ಷಿಕೆಗಳು:
ನಗರದಲ್ಲಿ ಶನಿವಾರ ಬೂತ್ ಮಟ್ಟದ ಕಾರ್ಯಕರ್ತರ ನೇಮಕ ಹಾಗೂ ಸದಸ್ಯತ್ವ ನೋಂದಣಿ ಸಭೆಯಲ್ಲಿ ಪಕ್ಷದ ಕೋರ್ ಕಮಿಟಿ ಸದಸ್ಯ ಸಿ ವಿ ಚಂದ್ರಶೇಖರ್ ಮಾತನಾಡಿದರು.
ನಗರದಲ್ಲಿ ಶನಿವಾರ ಬೂತ್ ಮಟ್ಟದ ಕಾರ್ಯಕರ್ತರ ನೇಮಕ ಹಾಗೂ ಸದಸ್ಯತ್ವ ನೋಂದಣಿ ಸಭೆಯಲ್ಲಿ ಸಿವಿಸಿ ಫೌಂಡೇಶನ್ ವತಿಯಿಂದ ನೂತನ ವರ್ಷದ ಕ್ಯಾಲೆಂಡರ್ ವಿತರಿಸಲಾಯಿತು.
Comments are closed.