ಜಿಲ್ಲಾ ಅತ್ಯುತ್ತಮ ಶಿಕ್ಷಕರಿಗೆ ಸಚಿವರಿಂದ ಪ್ರಶಸ್ತಿ ಪ್ರದಾನ

Get real time updates directly on you device, subscribe now.

ಕೊಪ್ಪಳ :  2023-24ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ವತಿಯಿಂದ “ಜಿಲ್ಲಾ ಅತ್ಯುತ್ತಮ ಶಿಕ್ಷಕ” ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್ ತಂಗಡಗಿ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ನಗರದ ಸಾಹಿತ್ಯ ಭವನದಲ್ಲಿ ಸೆಪ್ಟೆಂಬರ್ 05ರಂದು ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ, ಬೆಂಗಳೂರು, ಶಾಲಾ ಶಿಕ್ಷಣ ಇಲಾಖೆ, ಕೊಪ್ಪಳ ಸಹಯೋಗದಲ್ಲಿ ನಡೆದ ಕೊಪ್ಪಳ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಮತ್ತು ಜಿಲ್ಲಾ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಚಿವರು, ಸಂಸದರು, ಶಾಸಕರು ಹಾಗೂ ಇನ್ನಿತರ ಗಣ್ಯರು ಶಿಕ್ಷಕರಿಗೆ ಶಾಲು ಹೊದಿಸಿ, ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು.
*ಪ್ರಶಸ್ತಿ ವಿಜೇತ ಶಿಕ್ಷಕರ ವಿವರ:* ಕಿರಿಯ ಪ್ರಾಥಮಿಕ ಶಾಲಾ ವಿಭಾಗದಿಂದ ಕೊಪ್ಪಳ ತಾಲೂಕಿನ ಬಿಕನಹಳ್ಳಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕರಾದ ಹೆಚ್.ಕವಿತಾ ನಾಗನೂರು, ಹಿರೇಸಿಂದೋಗಿಯ ರೋಟರಿನಗರದ ಶಾಲೆಯ ಸಹಶಿಕ್ಷಕರಾದ ಗುರುಸ್ವಾಮಿ ಆರ್., ಗಂಗಾವತಿಯ ಆಶ್ರಯ ಕಾಲೋನಿ ಶಾಲೆಯ ಶಿಕ್ಷಕರಾದ ಈರಮ್ಮ ಉರ್ಪ್  ಪೂರ್ಣಿಮಾ, ಕುಷ್ಟಗಿ ತಾಲೂಕಿನ ಎಮ್.ಬಸಾಪೂರ ಶಾಲೆಯ ಸಹಶಿಕ್ಷಕರಾದ ನಟರಾಜ ಸೋನಾರ, ಯಲಬುರ್ಗಾ (ಕುಕನೂರು) ತಾಲೂಕಿನ ಚನಪನಹಳ್ಳಿ ಶಾಲೆಯ ಸಹಶಿಕ್ಷಕರಾದ ಗಿರಿಜಾ ಶರಣಯ್ಯ ಧರ್ಮಸಾಗರ ಇವರಿಗೆ. ಅದೇ ರೀತಿ ಹಿರಿಯ ಪ್ರಾಥಮಿಕ ಶಾಲಾ ವಿಭಾಗದಿಂದ ಕೊಪ್ಪಳ ತಾಲೂಕಿನ ಹಲಗೇರಿ ಶಾಲೆಯ ಸಹಶಿಕ್ಷಕರಾದ ಪರಶುರಾಮ ಬಿಲಂಕರ, ಗಂಗಾವತಿ ತಾಲೂಕಿನ ವಿರುಪಾಪುರ ಶಾಲೆಯ ಸಹಶಿಕ್ಷಕರಾದ ಜಿ.ಶ್ರೀದೇವಿ ಕೃಷ್ಣಪ್ಪ, ಕುಷ್ಟಗಿ ತಾಲೂಕಿನ ಎಂ.ಗುಡದೂರು ಶಾಲೆಯ ಸಹಶಿಕ್ಷಕರಾದ ಜಹಾನ್ ಆರಾ, ಕಂದಕೂರ ಶಾಲೆಯ ಸಹಶಿಕ್ಷಕರಾದ ಶಶಿಕಲಾ ಪಾಟೀಲ, ಯಲಬುರ್ಗಾ ತಾಲೂಕಿನ ಬಂಡಿ ಗ್ರಾಮದ ಕರ್ನಾಟಕ ಪಬ್ಲಕ್ ಶಾಲೆ (ಸ.ಮಾ,ಹಿ,ಪ್ರಾ,ಶಾಲೆ)ಯ ಸಹಶಿಕ್ಷಕರಾದ ಜಯಶ್ರೀ ಕೊತಬಾಳ ಅವರಿಗೆ. ಅದೇ ರೀತಿ ಪ್ರೌಢ ಶಾಲಾ ವಿಭಾಗದಿಂದ ಕನಕಗಿರಿ ತಾಲೂಕಿನ ಸೋಮನಾಳ ಗ್ರಾಮದ ಸರಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾದ ರಾಘವೇಂದ್ರ ಕಂಠಿ, ಕೊಪ್ಪಳ ತಾಲೂಕಿನ ಹ್ಯಾಟಿ ಶಾಲೆಯ ದೈಹಿಕ ಶಿಕ್ಷಕರಾದ ಶರಣಬಸಪ್ಪ ಮಣ್ಣೂರು, ಗಂಗಾವತಿ ತಾಲೂಕಿನ ಗುಂಡೂರು ಸರಕಾರಿ ಪ್ರೌಢ ಶಾಲೆ (ಆರ್.ಎಂ.ಎಸ್.ಎ) ಸಹಶಿಕ್ಷಕರಾದ ಕರಿಯಪ್ಪ ದೂಡ್ಯಾಳ, ಕುಷ್ಟಗಿ ತಾಲೂಕಿನ ನವಲಹಳ್ಳಿ ಶಾಲೆಯ ಸಹಶಿಕ್ಷಕರಾದ ಪರಶುರಾಮ ಮತ್ತು ಯಲಬುರ್ಗಾ ತಾಲೂಕಿನ ಹಿರೇಮ್ಯಾಗೇರಿಯ ಸರಕಾರಿ ಪದವಿ ಪೂರ್ವ ಕಾಲೇಜಿನ (ಪ್ರೌಢಶಾಲಾ ವಿಭಾಗದ) ಸಹಶಿಕ್ಷಕರಾದ ನಿಂಗಪ್ಪ ಶೇಗುಣಸಿ ಅವರಿಗೆ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ನೀಡಲಾಯಿತು.
*ಶಿಕ್ಷಕರೊಂದಿಗೆ ಸೆಲ್ಫಿ:* ಸಮಾರಂಭದಲ್ಲಿ ಭಾಗಿಯಾಗಿದ್ದ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ಪ್ರಶಸ್ತಿ ವಿಜೇತ ಶಿಕ್ಷಕರೊಂದಿಗೆ ಆಪ್ತವಾಗಿ ಮಾತನಾಡಿ, ಗೌರವಿಸಿದರು. ಶಿಕ್ಷಕರೊಂದಿಗೆ ಸೆಲ್ಫಿ ಪಡೆದು ಪ್ರೋತ್ಸಾಹಿಸಿದರು. ಈ ಸಂದರ್ಭದಲ್ಲಿ ಸಂಸದರಾದ ಸಂಗಣ್ಣ ಕರಡಿ, ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ, ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ, ನಗರಸಭೆ ಅಧ್ಯಕ್ಷರಾದ ಶಿವಗಂಗಾ ಶಿವರೆಡ್ಡಿ ಭೂಮಕ್ಕನವರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಯಶೋಧಾ ಸುನೀಲ್ ವಂಟಗೋಡಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ನಾಗರಾಜ ಜುಮ್ಮಣ್ಣವರ್, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಎಸ್.ಎಸ್ ಬಿರಾದಾರ ಸೇರಿದಂತೆ ಮತ್ತಿತರರಿದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: