ಬೆಳಗಾವಿ : ಅಖಿಲ ಕರ್ನಾಟಕ ಚರ್ಮಕಾರ್ ಮಹಾಸಭಾದ ಪ್ರತಿಭಟನೆ, ಧರಣಿ

ಬೆಳಗಾವಿ : ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಅಖಿಲ ಕರ್ನಾಟಕ ಚರ್ಮಕಾರ್ ಮಹಾಸಭಾದ ವತಿಯಿಂದ ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನ ಸಂದರ್ಭದಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಸುವರ್ಣಸೌಧದ ಎದುರಿನ ಕೌಂಟರ್ ನಂಬರ್ ನಾಲ್ಕರಲ್ಲಿ ಬೃಹತ್ ಪ್ರತಿಭಟನೆ ಹಾಗೂ ಧರಣಿಯನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಸಮುದಾಯದ ರಾಜ್ಯ ಸಂಘಟನೆಯ ಪದಾಧಿಕಾರಿಗಳು ಅಧ್ಯಕ್ಷರು ಹಾಲಿ ಶಾಸಕರು ಮಾಜಿ ಶಾಸಕರು ಭಾಗವಹಿಸಿದ್ದರು.

ಕಳೆದ ಆಗಷ್ಟ ೨೦೨೪ ರಲ್ಲಿ ಸರ್ವೋಚ್ಚ ನ್ಯಾಯಾಲಯವು ಇದುವರೆಗೂ ಮೀಸಲಾತಿಯ ಸೌಲಭ್ಯಗಳು ಪರಿಣಾಮಕಾರಿಯಾಗಿ ತಲುಪದೇ ಇರುವ ಸಣ್ಣಪುಟ್ಟ ಜಾತಿಗಳಿಗೂ ಮೀಸಲಾತಿ ತಲುಪುವಂತೆ ಪರಿಶಿಷ್ಟ ಜಾತಿಯವರಿಗೆ ಇರುವ ಒಟ್ಟು ಮೀಸಲಾತಿಯನ್ನು ಉಪವರ್ಗೀಕರಣ ಮಾಡಿಕೊಳ್ಳುವಂತೆ ರಾಜ್ಯ ಸರ್ಕಾರಗಳಿಗೆ ಅಧಿಕಾರ ನೀಡಿ, ಆದೇಶ ಹೊರಡಿಸಿತ್ತು. ಕಳೆದ ೭೫ ವರ್ಷಗಳಿಂದ ಮಾದಿಗ ಜಾತಿಯೊಂದಿಗೆ ಚರ್ಮಕಾರರನ್ನು ಎಡಗೈವರ್ಗದಲ್ಲಿ ಸೇರಿಸಿದ್ದರಿಂದ ಬಹುಪಾಲು ಸೌಲಭ್ಯಗಳು ಮಾದಿಗರಿಗೆ ತಲುಪಿವೆ. ಒಳಮೀಸಲಾತಿಯ ಉಪವರ್ಗೀಕರಣದ ನಂತರವೂ ಸಹ ಅದೇ ಎಡಗೈವರ್ಗವನ್ನು ಗ್ರುಪ-ಎ ಎಂದು ಮರುನಾಮಕರಣ ಮಾಡಿ, ಮಾದಿಗರೊಂದಿಗೇ ಮತ್ತೆ ಸೇರಿಸಲಾಗಿದೆ. ಇದರಿಂದಾಗಿ ಚರ್ಮಕಾರರಿಗೆ ಮೀಸಲಾತಿ ಮತ್ತೆ ಸಿಗದಂತೆ ಆಗಿದೆ. ಆದ್ದರಿಂದ ವಿವಿಧ ಬೇಡಿಕೆಗಳನ್ನು ಚರ್ಮಕಾರ ಸಮುದಾಯಗಳ ಅಭಿವೃದ್ಧಿಯ ದೃಷ್ಟಿಯಿಂದ ಆದ್ಯತೆಯ ಮೇಲೆ ಈಡೇರಿಸಬೇಕೆಂದು ವಿನಂತಿಸಿಕೊAಡಿದ್ದಾರೆ ಚರ್ಮಕಾರರಿಗೆಂದೇ ಇರುವ ಲಿಡ್‌ಕರ್ ನಿಗಮದಲ್ಲಿ ಚರ್ಮಕಾರ/ಚಮಾರರಿಗೆ ಇದುವರೆಗೂ ಸೂಕ್ತ ಪ್ರಾತಿನಿಧ್ಯ/ಹುದ್ದೆ ಸಿಕ್ಕಿಲ್ಲ. ಆದ್ದರಿಂದ ಚರ್ಮಕಾರ/ಚಮಾರರಿಗೆ ಪ್ರತ್ಯೇಕ ಅಭಿವೃದ್ಧಿ ನಿಗಮ ಮಂಜೂರು ಮಾಡಬೇಕು.ಶೇ.೬ ರ ಒಳಮೀಸಲಾತಿಯ ಅಡಿಯಲ್ಲಿ ಗ್ರುಪ-ಎ ನಲ್ಲಿರುವ ಚರ್ಮಕಾರರ ಒಳಮಿಸಲಾತಿಯ ಪ್ರಮಾಣ ಎಷ್ಟು? ಎಂದು ನಿಗದಿಪಡಿಸಿ (ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ) ಕಳೆದ ೭೫ ವರ್ಷಗಳಿಂದ ಪರಿಣಾಮಕಾರಿಯಾಗಿ ಮೀಸಲಾತಿ ತಲುಪದೇ ಇರುವ ಚರ್ಮಕಾರರಿಗೂ ಒಳಮೀಸಲಾತಿ ತಲುಪುವಂತೆ ಮರು ವಿಭಜನೆ ಮಾಡಿ, ಸೂಕ್ತ ಆದೇಶ ಹೊರಡಿಸಬೇಕು. ಪ್ರತಿ ಆರು ವರ್ಷಗಳಿಗೊಮ್ಮೆ ಚರ್ಮಕಾರ ಸಮುದಾಯದ ಒಬ್ಬ ವ್ಯಕ್ತಿಗೆ ಎಮ್.ಎಲ್.ಸಿ.ಹುದ್ದೆಗೆ ನಾಮನಿರ್ದೇಶನ ಮಾಡಬೇಕು, ಮತ್ತು ಶಾಸಕ ಹಾಗೂ ಸಂಸದ ಸ್ಥಾನದ ಟಿಕೇಟ ಕೊಡಲು ಸೂಕ್ತ ಮೀಸಲಾತಿ ನಿಗದಿಪಡಿಸಬೇಕು. ಮೂಲ ಚರ್ಮೋದ್ಯೋಗ ಮಾಡುವ ಜನಗಣತಿಯ ವರದಿಯಲ್ಲಿ ಕೋಡ ಸಂಖ್ಯೆ ೯೩ ರಲ್ಲಿನ ಸಮಗಾರ, ಹಾಗೂ ಕೋಡ ಸಂಖ್ಯೆ ೨೨ ರಲ್ಲಿರುವ ಸಮಗಾರ್, ಚಮಗಾರ್, ಚಾಂಬಾರ, ಚಮಾರ, ಹರಳಯ್ಯ, ರವಿದಾಸಿಯಾ, ಮಚಿಗಾರ,ಮೋಚಿ, ಮುಚ್ಚಿಗ, (ಮಾದಿಗ್ ಮತ್ತು ಮಾದರ ಜಾತಿಗಳನ್ನು ಹೊರತುಪಡಿಸಿ) ಉಳಿದ ಜಾತಿಗಳು ಸಮಾನ ಜಾತಿಗಳಾಗಿವೆ. ಅದೇ ರೀತಿ ಕೋಡ ನಂ.೩೨ ರಲ್ಲಿರುವ ಚರ್ಮ ಹದ ಮಾಡುವ ಘೋರ ಜಾತಿಯವರೂ ಸಹ ಸಮಾನ ಜಾತಿಯವರಾಗಿದ್ದಾರೆ. ಆದ್ದರಿಂದ ಜಾತಿಗಳನ್ನೂ ಒಂದೇ ಗುಂಪಿನ ಅಡಿಯಲ್ಲಿ ಕೋಢೀಕರಿಸಿ, ಗಣತಿ ಮಾಡಿ ಜನಗಣತಿಯ ವರದಿಯಲ್ಲಿ ಒಂದೇ ಕೋಡ ನಂಬರ ಅಡಿಯಲ್ಲಿ ಪ್ರಕಟಿಸುವಂತೆ ಸಂಬAಧಪಟ್ಟ ಇಲಾಖೆಗೆ ನಿರ್ದೇಶನ ನೀಡುವ ಆದೇಶ ಹೊರಡಿಸಬೇಕು ಜೊತೆಗೆ ಇನ್ನೂ ಹಲವಾರು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಮುಖ್ಯಮಂತ್ರಿಗಳ ಪರವಾಗಿ ರಾಜು ಕಾಗೆ ಹಾಗೂ ರಹೀಮ್ ಖಾನ್ ಮನವಿ ಸ್ವೀಕರಿಸಿದರು
ಈ ಸಂದರ್ಭದಲ್ಲಿ ವಿಠ್ಠಲ ಕಟಕ್ ಶಾಸಕರು, ರಾಮಕೃಷ್ಣ ದೊಡ್ಡಮನಿ ಮಾಜಿ ಶಾಸಕರು, ಶಿವಣ್ಣ ಮುಳಗುಂದ ರಾಜ್ಯ ಅಧ್ಯಕ್ಷರು, ಗುರುನಾಥ್ ಉಲಿಕಾಶಿ, ಸಮಗಾರ ಸಮಾಜದ ಮುಖಂಡರು, ವೀರೇಶ್ ತಾವರಗೇರಿ, ಕೊಪ್ಪಳ ಮೋಚಿ ಸಮಾಜದ ಮುಖಂಡರು, ಮಲ್ಲಿಕಾರ್ಜುನ್ ಹುಲ್ಲೂರು ಜಿಲ್ಲಾ ಕಾರ್ಯದರ್ಶಿ, ಮಂಜುನಾಥ್ ಬಂಡಿ ಅಧ್ಯಕ್ಷರು, ಮೌನೇಶ್ ಜಾಲಿಹಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.
Comments are closed.