ಇಬ್ರಾಹಿಂ ಸಾಬ್ ಬಿಸರಳ್ಳಿ, ಹೊನ್ನೂರು ಸಾಬ್ ಬೈರಾಪುರ ರಿಗೆ ಸನ್ಮಾನ

Get real time updates directly on you device, subscribe now.

ಭಾಗ್ಯನಗರ :
ಪಟ್ಟಣ ಪಂಚಾಯತ ಹಂಗಾಮಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಹೊನ್ನೂರು ಸಾಬ್ ಬೈರಾಪುರ ಹಾಗೂ ವಕೀಲರಾಗಿ 27 ವರ್ಷಗಳನ್ನು ಪೂರೈಸಿರುವ ಭಾಗ್ಯನಗರ ಜಾಮಿಯಾ ಮಸೀದಿ ಕಮಿಟಿಯ ಅಧ್ಯಕ್ಷರಾದ ಇಬ್ರಾಹಿಂ ಸಾಬ್ ಬಿಸರಳ್ಳಿ ಇವರಿಗೆ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ , ಸತತವಾಗಿ ಮೂರು ಸಲ ಸದಸ್ಯರಾಗಿ ಆಯ್ಕೆಯಾಗಿರುವ ಬೈರಾಪುರ ಪ್ರಸ್ತುತ ಪಟ್ಟಣ ಪಂಚಾಯತ್ ಸದಸ್ಯರಾಗಿ, ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಭಾಗ್ಯನಗರದ ಪಟ್ಟಣ ಪಂಚಾಯತ್ ಹಂಗಾಮಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಹಾಗೂ ವಕೀಲರಾಗಿ 27 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವ ಭಾಗ್ಯನಗರ ಜಾಮಿಯಾ ಮಸೀದಿ ಕಮಿಟಿಯ ಅಧ್ಯಕ್ಷರಾದ ಇಬ್ರಾಹಿಂಸಾಬ್ ಬಿಸರಳ್ಳಿ ಇವರಿಗೆ ಭಾಗ್ಯನಗರದ ಮುಸ್ಲಿಂ ಬಾಂಧವರ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ
ಉಪಾಧ್ಯಕ್ಷ ಮೌಲಾಹುಸೇನ ಹಣಗಿ, ಮೆಹಬೂಬಸಾಬ ಬಳಿಗಾರ, ರಶೀದ್‌ಸಾಬ್‌, ಹಾಜಿ ಕುತ್ಬುದ್ದೀನಸಾಬ್, ಬಾಬಾ ಪಟೇಲ್, ಶರೀಫಸಾಬ ಪಿಂಜಾರ, ಮೆಹಬೂಬ ಹಣಗಿ, ಮರ್ದಾನಸಾಬ ಹಿರೆಮಸೂತಿ, ನೂರಬಾಷಾ , ಕಬೀರಸಾಬ ಬೈರಾಪೂರ, ಅಮೀನ್ ಸಾಬ್ ಸೂಡಿ, ಮಹ್ಮದ್ ಸಾಬ್ ಬೈರಾಪುರ ಹಾಗೂ ಮೆಹಬೂಬಸಾಬ ಕೊತ್ವಾಲ, ಶಾಕೀರ್ ನದಾಪ, ಹಾಜಿ ಅತ್ತಾರ ಸಾಬ್, ಮಹ್ಮದ್ ರಫಿ ಬೈರಾಪೂರ ಇದ್ದರು.

Get real time updates directly on you device, subscribe now.

Comments are closed.

error: Content is protected !!