ಜಿಲ್ಲೆಯ ಕಾಲೇಜುಗಳಿಗೆ ಉಪನ್ಯಾಸಕರು ಹಾಗೂ ಮೂಲಭೂತ ಸೌಲಭ್ಯ ಒದಗಿಸಲು ಮನವಿ

Get real time updates directly on you device, subscribe now.

ಕೊಪ್ಪಳ ಜಿಲ್ಲೆಯ ತಾಲೂಕಾವಾರು ಎಲ್ಲಾ ಕಾಲೇಜುಗಳಿಗೆ ಉಪನ್ಯಾಸಕರು ಮತ್ತು ಪೀಠ ಉಪಕರಣ ಮತ್ತು ಲ್ಯಾಬ್ ಮತ್ತು ಮೂಲಭೂತ ಸೌಕರ್ಯ ಒದಗಿಸಬೇಕೆಂದು ಮುಸ್ಲಿ ಯುನಿಟಿಯ ಜಿಲ್ಲಾಧ್ಯಕ್ಷ ಮಹ್ಮದ್ ಜೀಲಾನ್ ಕಿಲ್ಲೆದಾರ್  ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ ಇವರಿಗೆ ಆಗ್ರಹಿಸಿದ್ದಾರೆ. ಈ ಕುರಿತು ಮನವಿ ನೀಡಿದ ಜಿಲ್ಲಾದ್ಯಕ್ಷರು

 ಕೊಪ್ಪಳ ಜಿಲ್ಲೆಯು 25 ವರ್ಷ ಕೊಪ್ಪಳ ಜಿಲ್ಲೆಯಾಗಿ ಶೈಕ್ಷಣಿಕದಿಂದ ಹಿಂದೆ ಉಳಿದಿದ್ದು,  ಎಲ್ಲಾ ಇಂಜೀನಿಯರಿಂಗ್ ಕಾಲೇಜು, ಮೆಡಿಕಲ್‌ ಕಾಲೇಜು, ಡಿಗ್ರಿ ಕಾಲೇಜು, ಅಲ್ಪಸಂಖ್ಯಾತರ ಎಲ್ಲಾ ವಸತಿ ನಿಲಯಗಳು  ಖುದ್ದಾಗಿ ಭೇಟಿ ನೀಡಿದರೆ ಅಲ್ಲಿನ ಎಲ್ಲಾ ಸ್ಥಿತಿಗತಿಗಳಬಗ್ಗೆ ತಿಳಿಯುತ್ತದೆ.

 ಬಡ ಕುಟುಂಬದ ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಸರಕಾರಿ ಕಾಲೇಜುಗಳಿಗೆ ಸೇರಿಸಿದರೇ ಅಲ್ಲಿ ಇರುವ ಹಲವಾರು ಸಮಸ್ಯೆಗಳು ಇರುವುದು ಕಂಡಿದ್ದೇವೆ. 

 1. ಇಂಜೀನಿಯರಿಂಗ್‌ ಗೌರ್ನಮೆಂಟ್ ಕಾಲೇಜು ತಳಕಲ್, ಈ ಕಾಲೇಜಿನಲ್ಲಿ

ವಿದ್ಯಾರ್ಥಿಗಳಿಗೆ ಪ್ರಾಕ್ಟಿಕಲ್ ಥೇರಿ ಮತ್ತು ಲ್ಯಾಬ್ & ಉಪನ್ಯಾಸಕರುಗಳಿಗೆ ವಿದ್ಯಾಭ್ಯಾಸಕ್ಕಾಗಿ ಮಕ್ಕಳಿಗೆ ಯಾವುದೇ ಸವಲತ್ತು ಇಲ್ಲ

. 2. ಮೆಡಿಕಲ್ ಕಾಲೇಜು ಕೊಪ್ಪಳ ಈ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆಪ್ರಾಕ್ಟಿಕಲ್ ಥೇರಿ ಮತ್ತು ಲ್ಯಾಬ್ & ಉಪನ್ಯಾಸಕರುಗಳಿಗೆ ವಿದ್ಯಾಭ್ಯಾಸಕ್ಕಾಗಿ ಮಕ್ಕಳಿಗೆ ಯಾವುದೇ ಸವಲತ್ತು ಇಲ್ಲ

 3. ಡಿಗ್ರಿ ಕಾಲೇಜು ಕೊಪ್ಪಳ, ಈ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಲ್ಯಾಬ್ & ಉಪನ್ಯಾಸಕರುಗಳಿಗೆ

ವಿದ್ಯಾಭ್ಯಾಸಕ್ಕಾಗಿ ಮಕ್ಕಳಿಗೆ ಯಾವುದೇ ಸವಲತ್ತು ಇಲ್ಲ .

4. ಕೊಪ್ಪಳ ಜಿಲ್ಲೆಯ ಎಲ್ಲಾಅಲ್ಪಸಂಖ್ಯಾತರ ಮೊರಾರ್ಜಿ ಮತ್ತು ವಸತಿ ಶಾಲೆಗಳನ್ನು ಈ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಉಪನ್ಯಾಸಕರುಗಳಿಗೆ ಮತ್ತುಮೂಲಭೂತ ಸೌಕರ್ಯಗಳನ್ನು ಇಲ್ಲದ ಕಾರಣ ವಿದ್ಯಾಭ್ಯಾಸಕ್ಕಾಗಿ ಮಕ್ಕಳಿಗೆ ಯಾವುದೇ ಸವಲತ್ತು ಇಲ್ಲ  ಸ್ವತಃಗಮನಿಸಬಹುದು.  ಹೀಗಾಗಿ

ಖುದ್ದಾಗಿ ಪರಿಶೀಲಿಸಿ ಅಗತ್ಯ ಸವಲತ್ತುಗಳನ್ನು ಒದಗಿಸಿಕೊಡಬೇಕೆಂದು  ಮಹ್ಮದ್ ಜಿಲಾನ್ ಕಿಲ್ಲೇದಾರ (ಮೈಲೈಕ್) ಮನವಿ ಮಾಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!
%d bloggers like this: