ಡಿಸೆಂಬರ್ 6 ರಂದು ವಿವಿಧ ಮಾರ್ಗಗಳಲ್ಲಿವಿದ್ಯುತ್ ವ್ಯತ್ಯಯ

Get real time updates directly on you device, subscribe now.

Power outage on various routes on December 6 : ಕೊಪ್ಪಳ ಜೆಸ್ಕಾಂ ಉಪ ವಿಭಾಗ ವ್ಯಾಪ್ತಿಯ 110 ಕೆ.ವಿ ಎಂ.ಯು.ಎಸ್.ಎಸ್ ಹಿರೇಸಿಂಧೋಗಿ ಸ್ಟೇಷನ್ ತುರ್ತು ನಿರ್ವಹಣೆ ಕಾಮಗಾರಿ (ಮೆಂಟೆನನ್ಸ್) ನಡೆಸುತ್ತಿರುವ ಪ್ರಯುಕ್ತ ಡಿಸೆಂಬರ್ 6 ರಂದು ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
110 ಕೆ.ವಿ ಎಂ.ಯು.ಎಸ್.ಎಸ್ ಹಿರೇಸಿಂಧೋಗಿ ಸ್ಟೇಷನ್‌ಗೆ ಒಳಪಡುವ ಎಫ್-1 ಬಿಕನಳ್ಳಿ ಎನ್.ಜೆ.ವೈ., ಎಫ್-2 ಹಂದ್ರಾಳ, ಎಫ್ -3 ಗುನ್ನಳ್ಳಿ ಎನ್.ಜೆ.ವೈ., ಎಫ್-4 ವದಗನಾಳ, ಎಫ್-5 ಕೋಳೂರು, ಎಫ್-6 ಚಿಕ್ಕಸಿಂದೋಗಿ, ಎಫ್-7 ಬೂದಿಹಾಳ, ಎಫ್-8 ಗೊಂಡಬಾಳ ಎಮ್.ಐ, ಎಫ್-9 ಗೊಂಡಬಾಳ, ಎಫ್-10 ಹಿರೇಸಿಂಧೋಗಿ ಹಾಗೂ ಎಫ್-11 ಮೈನಳ್ಳಿ ಈ ಎಲ್ಲಾ 11 ಕೆವಿ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕು.
ಈ ನಿರ್ವಹಣೆ ಕಾಮಗಾರಿ ಕೆಲಸವು ಬೇಗನೆ ಮುಕ್ತಾಯಗೊಂಡಲ್ಲಿ, ಯಾವುದೇ ಸಮಯದಲ್ಲಿ ವಿದ್ಯುತ್ ಸರಬರಾಜು ಮಾಡಲಾಗುವುದು. ಆದ್ದರಿಂದ ಸಾರ್ವಜನಿಕರು ಯಾವುದೇ ತರಹದ ವಿದ್ಯುತ್ ದುರಸ್ಥಿ ಕೆಲಸ-ಕಾರ್ಯಗಳನ್ನು ಮಾಡಬಾರದೆಂದು ಈ ಮೂಲಕ ಕೋರಲಾಗಿದೆ. ಒಂದು ವೇಳೆ ವಿದ್ಯುತ್ ಅಫಘಾತ ಸಂಭವಿಸಿದಲ್ಲಿ ಕಂಪನಿಯು ಜವಾಬ್ದಾರರಾಗಿರುವುದಿಲ್ಲ ಎಂದು ಜೆಸ್ಕಾಂ ಕೊಪ್ಪಳ ಕಾರ್ಯ ಮತ್ತು ಪಾಲನಾ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!