ಬೂದಗುಂಪಾ ಮನೆಗಳ್ಳತನ – ಕಳ್ಳರ ಬಂಧನ

Get real time updates directly on you device, subscribe now.

ಕಾರಟಗಿ :  ಬೂದಗುಂಪಾ ಗ್ರಾಮದಲ್ಲಿ ಹಾಡುಹಗಲೇ ನಡೆದಿದ್ದ ಕಳ್ಳತನ ಪ್ರಕರಣ ಬೇದಿಸಿರುವ ಪೋಲಿಸರು ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಗಸ್ಟ್ ೧೪ ರಂದು ಮದ್ಯಾಹ್ನ  ಮನೆಯ ಬೀಗವನ್ನು ಹೊಡೆದು ಮನೆಯಲ್ಲಿದ್ದ ಆಬರಣ ಹಾಗೂ ನಗದನ್ನು ಕದ್ದೊಯ್ದಿದ್ದರು. ಪ್ರಕರಣ ತನಿಖೆ ಆರಂಭಿಸಿದ್ದ ಕಾರಟಗಿ ಪೋಲಿಸರು ಅದೇ ಗ್ರಾಮದ ಪೀರಸಾಬ ಹಾಗೂ ಇನ್ನೊರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಬಂಧಿಸಿ ಬಂಧಿತರಿಂದ ೨.೫ ಲಕ್ಷ  ಮೌಲ್ಯದ ಒಡವೆಗಳನ್ನು ವಶಪಡಿಸಿಕೊಂಡಿದ್ದಾರೆ

ಈ ಪ್ರಕರಣದ ತನಿಖೆಗಾಗಿ ಎಸ್ಪಿ ಶ್ರೀಮತಿ ಯಶೋಧಾ ವಂಟಗೋಡಿ, ಹಾಗೂ ಡಿಎಸ್ಪಿ. ಸಿದ್ಧಲಿಂಗಪ್ಪಗೌಡ ಪಾಟೀಲ್‌,  ಮಾರ್ಗದರ್ಶನದಲ್ಲಿ ಕಾರಟಗಿ ಪಿಐ ಸಿದ್ರಾಮಯ್ಯ ಬಿ.ಎಂ.  ನೇತೃತ್ವದಲ್ಲಿ ಠಾಣೆಯ ಸಿಬ್ಬಂದಿಯವರನ್ನೊಳಗೊಂಡ ವಿಶೇಷ ತಂಡವನ್ನು ರಚನೆ ಮಾಡಲಾಗಿತ್ತು.

 

 

Get real time updates directly on you device, subscribe now.

Comments are closed.

error: Content is protected !!