ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಕಲೆ,ಸಾಹಿತ್ಯ- ಸಂಸ್ಕೃತಿ ಪೂರಕವಾಗಿವೆ- ಜಗದೀಶ್ ಜಿ ಎಚ್

0

Get real time updates directly on you device, subscribe now.

ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳು-2025

ಇಂದು ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಕೊಪ್ಪಳ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಜಿಲ್ಲೆಯ 71 ಕಾಲೇಜುಗಳಿಂದ 350ಕ್ಕೂ ಹೆಚ್ಚು ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಇಲಾಖೆಯು ನಿಗದಿಪಡಿಸಿರುವ ರಸಪ್ರಶ್ನೆ, ಭಾವಗೀತೆ, ಜಾನಪದ ನೃತ್ಯ ಸೇರಿದಂತೆ 11 ಸ್ಪರ್ಧೆಗಳು ನೆಲವೇರಿದವು. ಕಾಯ೯ಕ್ರಮದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ 1500, 1200 ಮತ್ತು 900 ಕ್ರಮವಾಗಿ ಪ್ರಥಮ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದರವರಿಗೆ ವಿತರಿಸಲಾಯಿತು. ಈ ಕಾಯ೯ಕ್ರಮದ ಉದ್ಘಾಟನೆಯನ್ನು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶ್ರೀ ಜಗದೀಶ್ ಜಿ.ಎಚ್. ಇವರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಹಿರಿಯ ಪ್ರಾಚಾರ್ಯರಾದ ಶ್ರೀ ರಾಜಶೇಖರ್ ಪಾಟೀಲ್, ಕೊಪ್ಪಳ ಜಿಲ್ಲಾ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷರಾದ ಸೋಮಶೇಖರ್ ಗೌಡ, ಹಿರಿಯ ಪ್ರಾಚಾರ್ಯರಾದ ಶ್ರೀ ಶಾಂತಪ್ಪ ಟಿ.ಸಿ., ಡಾ. ರವಿ ಚೌಹಾಣ್, ಶಿವಾನಂದ ಮೇಟಿ, ಆನ್ಸರ್ ಭಾಷಾ, ಹಿರಿಯ ಉಪನ್ಯಾಸಕರಾದ ಶ್ರೀ ಲಿಂಗಣ್ಣ ಜಂಗಮರಹಳ್ಳಿ, ರಮಾ, ಅಜಗರ್ ಪಾಷಾ ಇತರರು ಭಾಗವಹಿಸಿದ್ದರು.. ಕಾಯ೯ಕ್ರಮದ ಉದ್ಘಾಟನೆ ಮಾಡಿ ಮಾತನಾಡಿದ ಉಪನಿರ್ದೇಶಕರು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದಲ್ಲಿ ಸಾಂಸ್ಕೃತಿಕ ಸ್ಪರ್ಧೆಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ…ಕಲೆ ಸಾಹಿತ್ಯ ಸಂಸ್ಕೃತಿ ನಮ್ಮ ಇತಿಹಾಸವನ್ನು ಬಿಂಬಿಸುತ್ತವೆ. ವಿಶೇಷವಾಗಿ ಭಾವಗೀತೆ, ಜಾನಪದ ಸಂಗೀತ ಮನುಷ್ಯನ ಮಾನಸಿಕ ಆರೋಗ್ಯವನ್ನು ವೃದ್ಧಿಸುತ್ತದೆ. ಸಂಗೀತ ಸಾಹಿತ್ಯದ ಸಂಪಕ೯ದಲ್ಲಿರುವ ವ್ಯಕ್ತಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಶ್ರಮಿಸುತ್ತಾನೆ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಬಸಪ್ಪ ನಾಗೋಲಿ ವಹಿಸಿಕೊಂಡು ಮಾತನಾಡುತ್ತಾ ಆಧುನಿಕ ಶಿಕ್ಷಣವು ವಿದ್ಯಾರ್ಥಿಗಳನ್ನು ಅಂಕ ಗಳಿಸುವ ಯಂತ್ರಗಳನ್ನಾಗಿ ರೂಪಿಸುವ ದಿಕ್ಕಿನತ್ತ ಸಾಗುತ್ತಿರುವುದು ಅತ್ಯಂತ ಖೇದಕರ ಸಂಗತಿ ಎಂದರು. ಆರಂಭದಲ್ಲಿ ಶ್ರೀ ಲಿಂಗಣ್ಣ ಜಂಗಮರಹಳ್ಳಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು, ಶ್ರೀಮತಿ ಶ್ರೀದೇವಿ ಉಪನ್ಯಾಸಕರು ಕಾಯ೯ಕ್ರಮ ನಿರೂಪಿಸಿದರು…

ಬಸಪ್ಪ ನಾಗೋಲಿ ಪ್ರಾಚಾರ್ಯರು ಬಾಲಕರ ಸರಕಾರಿ ಪದವಿಪೂರ್ವ ಕಾಲೇಜು ಗಂಗಾವತಿ

Get real time updates directly on you device, subscribe now.

Leave A Reply

Your email address will not be published.

error: Content is protected !!