ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ್ ಸುವರ್ಣ ಇವರ ವಿಶೇಷ ಉಪನ್ಯಾಸ

ಕೊಪ್ಪಳ: ಕೊಪ್ಪಳ ವಿಶ್ವವಿದ್ಯಾಲಯ ಹಾಗೂ ಪತ್ರಿಕೋದ್ಯಮ ವಿಭಾಗದಿಂದ ವಿದ್ಯಾರ್ಥಿಗಳಿಗಾಗಿ ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ್ ಸುವರ್ಣ ಇವರ ವಿಶೇಷ ಉಪನ್ಯಾಸ ಏರ್ಪಡಿಸಲಾಗಿತ್ತು. ಇದಕ್ಜೆ ವಿಶ್ವವಿದ್ಯಾಲಯದ ಆಡಳಿತಾಧಿಕಾರಿ ತಿಮ್ಮಾರೆಡ್ಡಿಯವರು ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಛಾಯಾಗ್ರಹಣದ ಮಹತ್ವ, ಇರುವ ಉದ್ಯೋಗಾವಕಾಶಗಳು, ಇನ್ನಿತರ ಮಾಹಿತಿ ನೀಡಿದರಲ್ಲದೇ ಇಂತಹ ಉಪನ್ಯಾಸಗಳ ಸದುಪಯೊಗ ಪಡೆದುಕೊಳ್ಳಬೇಕೆಂದರು.
ನಂತರ ವಿಶೇಷ ಉಪನ್ಯಾಸ ನೀಡಿದ ಹಿರಿಯ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಅವರು,ಪತ್ರಿಕಾ ಛಾಯಾಗ್ರಹಣದಲ್ಲಿನ ಕಾರ್ಯವಿಧಾನ, ಅದರಲ್ಲಿನ ಸವಾಲುಗಳು ಅವರು ಕಾರ್ಯನಿರ್ವಹಣೆ ಸಂದರ್ಭದಲ್ಲಿ ಎದುರಿಸಿದ ಕಷ್ಟ ನಷ್ಟಗಳು, ಸಮಸ್ಯೆಗಳನ್ನು ಎದುರಿಸುವಾಗ ಹೊಂದಿರಬೇಕಾದ ಧೈರ್ಯ ಇತರೆ ವಿಷಯಗಳ ಬಗ್ಗೆ ತಿಳಿಸಿದರು. ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಉತ್ತರಿಸಿದರು. ಈ ವೇಳೆ ವಿಶ್ವವಿದ್ಯಾಲಯ ಹಾಗೂ ಪತ್ರಿಕೋದ್ಯಮ ವಿಭಾಗದಿಂದ ವಿಶ್ವನಾಥ ಸುವರ್ಣ ಇವರಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಪತ್ರಿಕೋದ್ಯಮ ವಿಭಾಗದ ಸಂಯೋಜಕರಾದ ಶ್ರೀಕಾಂತ ಕೆಬಿ ಉಪನ್ಯಾಸಕರಾದ ಡಾ: ಬಸವರಾಜ ಗಡಾದ, ಡಾ: ಸೃಷ್ಠಿ ಜಾವಳಕರ್, ಸಂತೋಷಕುಮಾರ ಉಪಸ್ಥಿತರಿದ್ದರು.
ಆರಂಭದಲ್ಲಿ ಡಾ: ಬಸವರಾಜ ಗಡಾದ ಸ್ವಾಗತಿಸಿದರು. ಶ್ರೀಕಾಂತ ಕೆ.ಬಿ ವಂದಿಸಿದರು.
Comments are closed.