ಕೊಪ್ಪಳ‌ ವಿಶ್ವವಿದ್ಯಾಲಯ ; ರಾಷ್ಟ್ರೀಯ ಶಿಕ್ಷಣ ದಿನ ಹಾಗೂ ಒನಕೆ ಓಬವ್ವ ದಿನಾಚರಣೆ

Get real time updates directly on you device, subscribe now.

ಕೊಪ್ಪಳ, : ಕೊಪ್ಪಳ‌ ವಿಶ್ವವಿದ್ಯಾಲಯದಿಂದ ಇಂದು ರಾಷ್ಟ್ರೀಯ ಶಿಕ್ಷಣ ದಿನ ಹಾಗೂ ಒನಕೆ ಓಬವ್ವ ದಿನಾಚರಣೆಯನ್ನುಸಂಭ್ರಮದಿಂ ಆಚರಿಸಲಾಯಿತು.
ಈ ವೇಳೆ ವಿ.ವಿ.ಯ ಆಡಳಿತಾಧಿಕಾರಿ ಪ್ರೊ. ತಿಮ್ನಾರೆಡ್ಡಿ ಮೇಟಿಯವರು ಮಾತನಾಡಿ, ಇಂದಿನ ದಿನಗಳಲ್ಲಿ‌ ಜ್ಞಾನ ಮತ್ತು ಕೌಶಲ್ಯ ಇರುವವರು ಉನ್ನತ ಸ್ಥಾನಕ್ಕೇರಲು ಹಾಗೂ ಸುಸ್ಥಿರ ಸಮಾಜ ನಿರ್ಮಿಸಲು ಸಾಧ್ಯ ಎಂದರಲ್ಲದೇ ಮಾಜಿ ಉಚಿತ ಶಿಕ್ಷಣ ಸಚಿವ ಅಬುಲ ಕಲಮ ಆಜಾದ, ಹಾಗೂ ವೀಋ ವನಿತೆ ಒನಕೆ ಓಬವ್ವ ಇವರ ಸೇವೆ ತ್ಯಾಗ, ಸಾಧನೆಗಳ ಬಗ್ಗೆ , ಅವರ ಆದರ್ಶಗಳ‌ ಪಾಲನೆ ಬಗ್ಗೆ ತಿಳಿಸಿದರು.

ಈ ವೇಳೆ ಒನಕೆ ಓಬವ್ವ ಹಾಗೂ ಅಬುಲ‌ಕಲಮ ಆಜಾದ ಅವರ ಭಾವಚಿತ್ರಕ್ಕೆ ಪೂಜೆ, ಪ್ರಾರ್ಥನೆ ಸಲ್ಲಿಸಲಾಯಿತು. ಉಪನ್ಯಾಸಕರಾದ ಡಾ, ರಮೇಶ, ಡಾ: ರಮೇಶ ಸೋಮಪ್ಪ ,ಇನ್ನಿತರರು ಈ ಸಂದರ್ಭದಲ್ಲಿ ಮಾತನಾಡಿದರು. ಅನೇಕ ಬೋಧಕ, ಬೋದಕೇತರ ಸಿಬ್ಬಂಧಿ, ವಿದ್ಯಾರ್ಥಿ ವಿದ್ಯಾರ್ಥಿನಿಯರು ಈ ವೇಳೆ ಉಪಸ್ಥಿತರಿದ್ದರು…

Get real time updates directly on you device, subscribe now.

Comments are closed.

error: Content is protected !!