ರಹೀಮ್ ಬನ್ನಿಕಟ್ಟಿ ಅವರು ಬರವಣಿಗೆಯ ಕಲೆಯನ್ನು ಸಿದ್ಧಿಸಿಕೊಂಡವರು : ಆರ್, ಪಿ, ರಾಜೂರ

Get real time updates directly on you device, subscribe now.


ಯುವ ಕವಿ ರಹೀಮ್ ಬನ್ನಿಕಟ್ಟಿ ಅವರು ತಮ್ಮ ಪ್ರಭುದ್ಧ ಬರಹಗಳ ಮೂಲಕ ಓದುಗರನ್ನು ತಮ್ಮತ್ತ ಸೆಳೆಯುವ ಕಲೆಯನ್ನು ಸಿದ್ಧಿಸಿಕೊಂಡಿದ್ದಾರೆ ಎಂದು ನಿವೃತ್ತ ಉಪನ್ಯಾಸಕ ಆರ್, ಪಿ, ರಾಜೂರ ನುಡಿದರು.
ಸ್ಥಳೀಯ ಶಾದಿ ಮಹಲ್ ನಲ್ಲಿ ಕುಕನೂರಿನ ಯುವ ಕವಿ ರಹೀಮ್ ಬನ್ನಿಕಟ್ಟಿ ಅವರ ಚೊಚ್ಚಲ ಕೃತಿ ಗುಡಿಸಲಿಗೆ ಬಂದ ದೇವರು ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು ರಹೀಮ್ ಬನ್ನಿಕಟ್ಟಿ ಮುಂದಿನ ದಿನಗಳಲ್ಲಿ ತಮ್ಮ ಕಾವ್ಯದ ಮೂಲಕ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.
ಪ್ರೋ ಕೃಷ್ಣ ನಿಡಗುಂದಿ ಮಾತನಾಡಿ
ರಹಿಮ್ ಬನ್ನಿಕಟ್ಟಿ ಅವರು ಕಾವ್ಯವನ್ನು ತಮ್ಮ ಸುತ್ತಲಿನ ಪರಿಸರ ತಾವು ಕಂಡುಂಡ ಬದುಕಿನ ಬವಣೆಯನ್ನೇ ಪುಸ್ತಕಕ್ಕಿಳಿಸಿದ್ದಾರೆ.
ತಾಯಿ, ತಂದೆಯವರು ಅನುಭವಿಸಿದ ಕಷ್ಟವನ್ನೆಲ್ಲ ಓದುಗರೆದೆಯಲ್ಲಿ ಮನ ಮುಟ್ಟುವಂತೆ ಚಿತ್ರಿಸಿದ್ದಾರೆ ಎಂದರು.
ಹಿರಿಯ ಪತ್ರಕರ್ತ ಅಲ್ಲಾವುದ್ದೀನ ಯಮ್ಮಿ ಮಾತನಾಡಿ ರಹೀಮ್ ಬನ್ನಿಕಟ್ಟಿ ಅವರ ಚೊಚ್ಚಲ ಕೃತಿ ಗುಡಿಸಲಿಗೆ ಬಂದ ದೇವರು ಪ್ರಬುದ್ಧ ಕವನಗಳಿಂದ ಕೂಡಿವೆ.
ಗುಡಿಸಲಿಗೆ ಬಂದ ದೇವರು ಎನ್ನುವುದಕ್ಕಿಂತಲೂ ರಹೀಮ್ ಬನ್ನಿಕಟ್ಟಿ ತಮ್ಮ ಅಕ್ಷರಗಳ ಲಾಲಿತ್ಯ,
ಅಕ್ಷರಗಳ ಸೊಗಡು, ಅಕ್ಷರಗಳ ದುಷ್ಟಾಂತ ಮತ್ತು ಅಕ್ಷರಗಳ ಒಂದೊಂದೇ ಪದ ಜೋಡಣೆಯ ಪ್ರೌಢಿಮೆ ಹಾಗೂ ಪ್ರತಿಮೆಗಳು
ಓದುಗರ ಎದೆಯಾಳಕ್ಕಿಳಿದು ಮುದ ನೀಡುವಲ್ಲಿ ಯಶಸ್ವಿಯಾಗವೆ.
ರಹಿಮ್ ಬನ್ನಿಕಟ್ಟಿ ಅವರ ಬರವಣಿಗೆಯ ಭಾಷಾ ಶೈಲಿಯಿಂದ ದೇವರನ್ನೇ ಗುಡಿಸಲಿಗೆ ಕರೆತಂದಿದ್ದಾರೆ ಎಂದರು.
ಪ್ರೊ ಸೋಮಶೇಖರ ನಿಲೋಗಲ್ ಮಾತನಾಡಿ ರಹೀಮ್ ಬನ್ನಿಕಟ್ಟಿ ಅವರು ವಿದ್ಯಾರ್ಥಿ ಜೀವನದಲ್ಲಿಯೂ ಶಿಸ್ತು ಮತ್ತು ಸಂಯಮ, ಸಮಯ ಪ್ರಜ್ಞೆಯನ್ನು ಮೈಗೂಡಿಸಿಕೊಂಡು ಬಂದವರು, ಅವರ ಕವನ ಸಂಕಲನ ತುಂಬಾ ಸೊಗಸಾಗಿ ಮೂಡಿಬಂದಿದೆ ಎಂದರು
ರಷೀದ್ ಅಹ್ಮದ್ ಹಣಜಗಿರಿ ಮಾತನಾಡಿದರು.
ಕಾತರಕಿ, ಗುಡ್ಲಾನೂರ್ ನ
ಆಂಗ್ಲ ಭಾಷಾ ಉಪನ್ಯಾಸಕಿ ವಿಶಾಲಾಕ್ಷಿ ವಿವೇಕಿ, ರಾಮಣ್ಣ ಬೀಡ್ನಾಳ ಮುಂತಾದವರು ಮಾತನಾಡಿದರು.
ಗುಡಿಸಲಿಗೆ ಬಂದ ದೇವರು
ಕೃತಿ ಲೇಖಕ ರಹೀಮ್ ಬನ್ನಿಕಟ್ಟಿ ಅವರು ಕೃತಿ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಸ್ಲಿಂ ಅಂಜುಮನ್ ಕಮೀಟಿಯ ಅಧ್ಯಕ್ಷ ರಷೀದ್ ಸಾಬ್ ಉಮಚಗಿ ವಹಿಸಿದ್ದರು.
ಶಿಕ್ಷಕ ಸಾಹಿತಿ ವಿರೇಶ ಕುರಿ ಹಾಗೂ ಶಿಕ್ಷಕ ಸಂಪನ್ಮೂಲ ವ್ಯಕ್ತಿ ಶಫಿ ಅಹ್ಮದ್ ಕೃತಿ ಕುರಿತಂತೆ ಉಪನ್ಯಾಸ ನೀಡಿದರು.
ಕಾರ್ಯಕ್ರಮವನ್ನು ಶಿವನಗೌಡ ಕಬಾಡಿ ನಿರೂಪಿಸಿದರು.
ವೇದಿಕೆ ಮೇಲೆ ವಿದ್ಯಾನಂದ ಗುರುಕುಲ ಪ್ರಾಚಾರ್ಯ ಸೋಮಶೇಖರ್ ನಿಲೋಗಲ್, ರಹಿಮ್ ಬನ್ನಿಕಟ್ಟಿ ಅವರ ತಂದೆ
ಸಲೀಂ ಬನ್ನಿಕಟ್ಟಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸನ್ಮಾನ : ನಿವೃತ್ತ ಉಪನ್ಯಾಸಕರಾದ ಕೃಷ್ಣ ನಿಡಗುಂದಿ, ಆರ್ ಪಿ ರಾಜೂರ, ಹಿರಿಯ ಪತ್ರಕರ್ತ ಅಲ್ಲಾವುದ್ದೀನ ಯಮ್ಮಿ,ವಿರೇಶ್ ಕುರಿರಷೀದ್ ಸಾಬ್ ಉಮಚಗಿ ಸೇರಿದಂತೆ ಅನೇಕ ಸಾಧಕರಿಗೆ ಸನ್ಮಾನಿಸಲಾಯಿತು

Get real time updates directly on you device, subscribe now.

Comments are closed.

error: Content is protected !!