ಕೊಪ್ಪಳ ಜಿಲ್ಲಾ ಗುತ್ತೇದಾರರ ಸಂಘದ ವತಿಯಿಂದ 12 ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ

Get real time updates directly on you device, subscribe now.

ಕೊಪ್ಪಳ ಕೊಪ್ಪಳ ಜಿಲ್ಲಾ ಗುತ್ತೇದಾರರ ಸಂಘದ ವತಿಯಿಂದ 12 ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ. ಈ ಕುರಿತು

ದಿ: 08 ರಂದು ಕೊಪ್ಪಳ ತಾಲ್ಲೂಕಾ ಗುತ್ತೇದಾರರ ಸಂಘದ ಸಭೆ ಕೊಪ್ಪಳ ನಗರದ ಐಬಿಯಲ್ಲಿ ಅಧೈಕ್ಷರಾದ  ಕೃಷ್ಣ ಎಮ್ ಇಟ್ಟಂಗಿ ಇವರ ಅಧ್ಯಕ್ಷತೆಯಲ್ಲಿ ಸಭೆ ಜರುಗಿತು.  ಕೊಪ್ಪಳ ಜಿಲ್ಲಾ ಗುತ್ತೇದಾರರ ಸಂಘದ ಅಧ್ಯಕ್ಷರಾದ  ಸುರೇಶ ಭೂಮರೆಡ್ಡಿ ಇವರ ಉಪಸ್ಥಿತಿಯಲ್ಲಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಸಭೆಯ ನಿರ್ಣಯಗಳು

1) ಕೊಪ್ಪಳ ಜಿಲ್ಲಾ ಗುತ್ತೇದಾರರ ಸಂಘವು ಕೊಪ್ಪಳ ಜಿಲ್ಲಾ ಸ್ಟೋನ ಕ್ರಷರ್ ಅಸೋಸಿಯೇಶನ್ ಅವರು ಪ್ರೇರಣಾ ಕನ್ಸಟ್ರಕ್ಷನ್ ಎಂಬ ಎಜೆನ್ಸಿ ಮೂಲಕ ಜೆಲ್ಲಿ ಸರಬರಾಜು ಮಾಡುವದನ್ನು ಖಂಡನೆ ಮಾಡಲಾಯಿತು.
2) ಪ್ಯಾಕೆಜ ಟೆಂಡರ್ ಪದ್ದತಿಯನ್ನು ರದ್ದುಗೊಳಿಸುವ ಕುರಿತು ಮಾನ್ಯ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸುವ ಕುರಿತು ನಿರ್ಣಯ ಕೈಗೊಳ್ಳಲಾಯಿತು.
3) ಹೊರ ರಾಜ್ಯದ ಹಾಗೂ ಹೊರ ಜಿಲ್ಲೆಗಳ ಗುತ್ತೇದಾರರು ಹೆಚ್ಚಿನ ಸಂಖ್ಯಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಕಾಮಗಾರಿ ನಿರ್ವಹಿಸುತ್ತಿದ್ದು ಅದನ್ನು ನಿರ್ಬಧಿಸುವ ಕುರಿತು ನಿರ್ಣಯ ಕೈಗೊಳ್ಳಲಾಯಿತು.
4) ಕೊಪ್ಪಳ ಜಿಲ್ಲಾ ಗುತ್ತೇದಾರರ ಸಂಘವು ದಿನಾಂಕ:12/11/2025 ರಂದು ಬೆಳಿಗ್ಗೆ 9.30ಕ್ಕೆ ಹಮ್ಮಿಕೊಂಡಿರುವ ಪ್ರತಿಭಟನಾ ಮೆರವಣಿಗೆಯಲ್ಲಿ ಗುತ್ತೇದಾರರು ತಮ್ಮ ವಾಹನಗಳೊಂದಿಗೆ ಭಾಗವಹಿಸಿ ಅಂದು ಜಿಲ್ಲಾಧಿಕಾರಿಗಳ ಕಛೇರಿಯ ಮುಂಭಾಗ ಹಮ್ಮಿಕೊಂಡಿರುವ ಒಂದು ದಿನದ ಸಾಂಕೇತಿಕ ಧರಣಿಯಲ್ಲಿ ಕೊಪ್ಪಳ ತಾಲ್ಲೂಕ ವತಿಯಿಂದ ಹೆಚ್ಚಿನ ಸಂಖ್ಯಯಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸಲು ಸಭೆ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು.
5) ದಿನಾಂಕ:12/11/2025 ರಂದು ನಮ್ಮ ಬೇಡಿಕೆ ಈಡೇರದಿದ್ದರೆ 13/11/2025 ರಿಂದ ನಮ್ಮ ಬೇಡಿಕೆ ಈಡೇರುವವರೆಗೆ ಎಲ್ಲಾ ಗುತ್ತೆದಾರರು ,ಲ್ಯಾಂಡ್ ಆರ್ಮಿ ಮತ್ತು ನಿರ್ಮಿತಿ ಕೇಂದ್ರದವರು ಸಹಿತ ಕಾಮಗಾರಿ ಸ್ಥಗಿತಗೊಳಿಸುವ ನಿರ್ಧಾರವನ್ನು ಸಹ ನಿರ್ಣಯಿಸಲಾಯಿತು.
6) ಮೇಲಿನ ಎಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ನಿರ್ಣಯಿಸಲಾಯಿತು.

ಸಭೆಯಲ್ಲಿ ಜಿಲ್ಲಾ ಗುತ್ತೇದಾರರ ಸಂಘದ ಕಾರ್ಯದರ್ಶಿ  ದೇವಪ್ಪ ಅರಕೇರಿ , ಕೊಪ್ಪಳ ಜಿಲ್ಲಾ ಪರಿಶಿಷ್ಟ ಜಾತಿ ,ಪರಿಶಿಷ್ಟ ಪಂಗಡದ ಅಧ್ಯಕ್ಷರಾದ  ಹನುಮೇಶ ಕಡೇಮನಿ,ಹಿರಿಯ ಗುತ್ತೇದಾರರಾದ  ಬಸವರಾಜ ಪುರದ,  ಮಲ್ಲಯ ಎಲ್ ಎಮ್,  ಅಪ್ಜಲ್ ಪಟೇಲ್ ,  ಇಬ್ರಾಹಿಂ ಅಡ್ಡೇವಾಲೆ,ಶ್ರೀ ಖಾಜಾಹುಸೇನ ಗದಗ, ಮಹಾದೇವಪ್ಪ ,  ದ್ಯಾವiಣ್ಣ ಕರಿಗಾರ ,  ಪರಶುರಾಮ ಕಿಡದಾಳ,  ಪ್ರದೀಪ್ ,ಕಾಲೇಶ ಲಕ್ಮಾಪೂರ,ಶ್ರೀಧರ ಬನ್ನಿಕೊಪ್ಪ, ಚಂದ್ರಶೇಖರ ಹಳ್ಳಿ, ಸುರೇಶ ತಟ್ಟಿ, ವಿರೇಶ ಮ್ಯಾಗಳಮಠ,  ಮರ್ಧಾನ ಅಲಿ ಮಿಠಾಯಿ,ಈರಪ್ಪ ಹುಣಸಿಮರದ, ಕನಕಮೂರ್ತಿ,  ಶರಣಪ್ಪ ಬ್ಯಾಳಿ, ಹಾಗೂ ಹ¯ವಾರು ಗುತ್ತೇದಾರರು ಭಾಗವಹಿಸಿ ಸಭೆ ಯಶಸ್ವಿಗೊಳಿಸಲಾಯಿತು ಎಂದು ಕೃಷ್ಣ ಇಟ್ಟಂಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ..

Get real time updates directly on you device, subscribe now.

Comments are closed.

error: Content is protected !!