ಮೂರನೇ ದಿನ ಕಾರ್ಖಾನೆ ವಿರುದ್ಧ ಹೋರಾಟ
Third day of struggle against the factory
ಕವಿ ಸಾಹಿತಿಗಳಿಗೆ ಸಾಥ್ ನೀಡಿದ ಜೆಡಿಎಸ್ ನಾಯಕರು
ಕೊಪ್ಪಳ: ಮೂರನೇ ದಿನದಲ್ಲಿ ನಡೆದಿರುವ ಬಲ್ಡೋಟ ಬಿಎಸ್ ಪಿಎಲ್, ಕಿರ್ಲೋಸ್ಕರ್ ಫೆರಸ್, ಕಲ್ಯಾಣಿ ಸ್ಟೀಲ್, ಮುಕುಂದ-ಸುಮಿ, ಎಕ್ಸಿಂಡಿಯ ವಿಸ್ತರಣೆ ಹಾಗೂ ನೂತನ ಸ್ಥಾಪನೆ ವಿರೋಧಿಸಿ, ಬಸಾಪುರ 44.35 ಎಕರೆ ವಿಸ್ತೀರ್ಣದ ಕೆರೆ ಸಾರ್ವಜನಿಕ ಬಹಕೆಗೆ ಮುಕ್ತಗೊಳಿಸಲು ಆಗ್ರಹಿಸಿ 20 ಬಾಧಿತ ಹಳ್ಳಿಗಳಲ್ಲಿ ಆರೋಗ್ಯಸ್ನೇಹಿ ಪರಿಸರ ಪುನರ್ ನಿರ್ಮಾಣ ಮಾಡಲು ಒತ್ತಾಯಿಸಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಬೆಂಬಲಿಸಿ ಜೆಡಿಎಸ್ ಪ್ರಮುಖರು ಪಾಲ್ಗೊಂಡಿದ್ದರು. ಈ ದಿನದ ಧರಣಿ ನೇತೃತ್ವವನ್ನು ಕೊಪ್ಪಳ ಸಾಹಿತಿಗಳು, ಬರಹಗಾರರು ವಹಿಸಿದ್ದರು. ಧರಣಿ ವೇದಿಕೆಯಲ್ಲಿ ಪರಿಸರ, ಆರೋಗ್ಯ, ಜೀವಪರವಾದ ಕವನಗಳನ್ನು ಕವಿಗಳಾದ ಈಶ್ವರ ಹತ್ತಿ, ಸಾವಿತ್ರಿ ಮುಜುಮದಾರ, ಪುಷ್ಪಲತಾ ಏಳುಭಾವಿ, ಮಹೇಶ ಮನ್ನಾಪೂರ, ಅಲ್ಲಮಪ್ರಭು ಬೆಟ್ಟದೂರು ವಾಚನ ಮಾಡಿದರು.
ಇವತ್ತಿನ ಸಭೆಯನ್ನು ಉದ್ದೇಶಿಸಿ ಜ್ಞಾನಬಂಧು ಶಿಕ್ಷಣ ಸಂಸ್ಥೆಯ ದಾನಪ್ಪ ಕವಲೂರು ಧರಣಿ ಬೆಂಬಲಿಸಿ ಮಾತನಾಡಿದರು. ಕವಯತ್ರಿ ಮಾಲಾ ಬಡಿಗೇರ, ರವಿ ಕಾಂತನವರ, ಡಿ. ಎಂ. ಬಡಿಗೇರ, ಶಂಭುಲಿಂಗಪ್ಪ ಆರ್. ಹರಗೇರಿ, ಡಾ. ಬಸವರಾಜ ಪೂಜಾರ, ಡಿ. ಹೆಚ್. ಪೂಜಾರ, ಕೆ. ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಯಲ್ಲಪ್ಪ ಬಂಡಿ, ಹನುಮಂತಪ್ಪ ಗೊಂದಿ, ಶಿವಕುಮಾರ ಏಣಿಗಿ, ಪ್ರವೀಣ ಇಟಗಿ, ಸೋಮನಗೌಡ ಎಚ್. ಸುರೇಶ ಪೂಜಾರ, ನಿರ್ಮಲಾ ಮೇದಾರ, ಎಚ್.ಬಿ. ರಂಗಪ್ಪ, ನಾಗರಾಜ್ ಮೇದಾರ, ಡಾ ಮಹಾಂತೆಶ ನೆಲಾಗಣಿ, ವಿರುಪಾಕ್ಷಪ್ಫ ಸಿಂಗಾಡಿ, ಹನುಮಂತಪ್ಪ ನಾಯಕ ಹಾಸಗಲ್, ಗವಿಸಿದ್ದಪ್ಪ ಹಲಿಗಿ ಕುಣಿಕೇರಿ, ಮೂಕಪ್ಪ ಮೇಸ್ತ್ರಿ ಬಸಾಪುರ, ಮಖಬೂಲ್ ರಾಯಚೂರು, ಶರಣು ಗಡ್ಡಿ, ಮಹಾಂತೇಶ ಕೊತಬಾಳ, ವಿಜಯಕುಮಾರ ಬೋಂದಾಡೆ, ಎಸ್ ಮಹಾದೇವಪ್ಪ, ಚನ್ನಬಸಪ್ಪ ಅಪ್ಪಣ್ಣವರ. ಬಸವರಾಜ ಶೀಲವಂತರ, ವೆಂಕಟೇಶ ಬಂಡಿವಡ್ಡರ ಅನೇಕರು ಇದ್ದರು.