2019 ರಾಜ್ಯ ಚಲನಚಿತ್ರ ಜೀವಮಾನ ಸಾಧನೆ, ಸಾಹಿತ್ಯ ಹಾಗೂ ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿ ಪ್ರಕಟ ನವೆಂಬರ್ 3 ರಂದು ಮೈಸೂರಿನಲ್ಲಿ ಪ್ರಶಸ್ತಿ ಪ್ರದಾನ

ಬೆಂಗಳೂರು, ಅಕ್ಟೋಬರ್ 30
ಚಲನಚಿತ್ರ ರಂಗದಲ್ಲಿನ ಜೀವಮಾನ ಸಾಧನೆಗೆ ನೀಡುವ ಡಾ.ರಾಜಕುಮಾರ್ ಪ್ರಶಸ್ತಿ, ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಹಾಗೂ ಡಾ.ವಿಷ್ಣುವರ್ಧನ್ ಪ್ರಶಸ್ತಿ, ವಾರ್ಷಿಕ ಸಾಹಿತ್ಯ ಮತ್ತು ಕಿರುಚಿತ್ರ ಪ್ರಶಸ್ತಿಗಳಿಗೆ 2019 ನೇ ಸಾಲಿನ ಪುರಸ್ಕøತರನ್ನು ಆಯ್ಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ನವೆಂಬರ್ 3 ರಂದು ಮೈಸೂರಿನಲ್ಲಿ ಆಯೋಜಿಸಿರುವ 2018 ಹಾಗೂ 2019 ರ ಕ್ಯಾಲೆಂಡರ್ ವರ್ಷಗಳ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು.
ಕನ್ನಡ ಚಿತ್ರರಂಗದಲ್ಲಿನ ಜೀವಮಾನ ಸಾಧನೆಗೆ ನೀಡುವ ಡಾ.ರಾಜಕುಮಾರ್ ಪ್ರಶಸ್ತಿಗೆ ಸಿನಿಮಾ ಮತ್ತು ರಂಗಭೂಮಿಯ ಹಿರಿಯ ನಟಿ ಉಮಾಶ್ರೀ, ಪುಟ್ಟಣ್ಣ ಕಣಗಾಲ್ ಪ್ರಶಸ್ತಿಗೆ ಎನ್ ಆರ್ ನಂಜುಂಡೇಗೌಡ ಹಾಗೂ ಡಾ.ವಿಷ್ಣುವರ್ಧನ್ ಪ್ರಶಸ್ತಿಗೆ ರಿಚಾರ್ಡ್ ಕ್ಯಾಸ್ಟಲಿನೋ ಅವರು ಆಯ್ಕೆಯಾಗಿದ್ದಾರೆ. ಈ ಮೂರು ಪ್ರಶಸ್ತಿಗಳು ತಲಾ ಐದು ಲಕ್ಷ ರೂ.ನಗದು ಹಾಗೂ ಐವತ್ತು ಗ್ರಾಂ ಚಿನ್ನದ ಪದಕ ಒಳಗೊಂಡಿದೆ.
2019ರ ಅತ್ಯುತ್ತಮ ಚಲನಚಿತ್ರ ಸಾಹಿತ್ಯ ವಾರ್ಷಿಕ ಪ್ರಶಸ್ತಿಗೆ ಹಿರಿಯ ಪತ್ರಕರ್ತ ರಘುನಾಥ ಚ.ಹ.ಅವರು ಬರೆದಿರುವ “ಬೆಳ್ಳಿ ತೊರೆ” ಸಿನೆಮಾ ಪ್ರಬಂಧಗಳು ಕೃತಿ ಆಯ್ಕೆಯಾಗಿದೆ. ಅಂಕಿತ ಪುಸ್ತಕವು ಈ ಕೃತಿಯನ್ನು ಪ್ರಕಟಿಸಿದೆ. ಈ ಪ್ರಶಸ್ತಿಯು ಕೃತಿಕಾರರಿಗೆ ಹಾಗೂ ಪ್ರಕಾಶಕರಿಗೆ ತಲಾ 20 ಸಾವಿರ ರೂ.ನಗದು ಮತ್ತು 50 ಗ್ರಾಂ ಬೆಳ್ಳಿ ಪದಕ ಒಳಗೊಂಡಿದೆ.
2019 ರ ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿಗೆ ಶ್ರೀನಾಥ್ ಎಸ್ ಹಡಗಲಿ ನಿರ್ದೇಶನದ “ಗುಳೆ” ಕಿರುಚಿತ್ರವು ಆಯ್ಕೆಯಾಗಿದೆ. ಮನೋಹರ್ ಎಸ್ ಐಯ್ಯರ್ ನಿರ್ಮಿಸಿರುವ ಈ ಚಿತ್ರದ ನಿರ್ದೇಶಕರು ಮತ್ತು ನಿರ್ಮಾಪಕರಿಗೆ ತಲಾ 25 ಸಾವಿರ ರೂ. ನಗದು ಹಾಗೂ 50 ಗ್ರಾಂ ಬೆಳ್ಳಿ ಪದಕ ನೀಡಿ ಗೌರವಿಸಲಾಗುತ್ತಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ *ಹೇಮಂತ್ ಎಂ ನಿಂಬಾಳ್ಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆಯಾದವರ ಕಿರು ಪರಿಚಯ:
ಉಮಾಶ್ರೀ:
ಉಮಾಶ್ರೀ ಕನ್ನಡ ರಂಗಭೂಮಿ ಮತ್ತು ಚಿತ್ರರಂಗದ ಒಬ್ಬ ಪ್ರತಿಭಾವಂತ ನಟಿ, ನಿರ್ದೇಶಕಿ ಮತ್ತು ರಾಜಕಾರಣಿಯಾಗಿದ್ದಾರೆ. ಬಾಲ್ಯದಲ್ಲಿಯೇ ರಂಗಭೂಮಿಯಲ್ಲಿ ಅಭಿನಯವನ್ನು ಪ್ರಾರಂಭಿಸಿದ ಇವರು 1980 ರದಶಕದಲ್ಲಿ “ಅನುಭವ” ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.
ಅಭಿನಯದಲ್ಲಿ ತಮಾμÉ ಸೇರಿದಂತೆ ಭಾವನಾತ್ಮಕ ಮತ್ತು ಗಂಭೀರ ಪಾತ್ರಗಳಲ್ಲಿ ಅವರ ಬಹುಮುಖ ಪ್ರತಿಭೆ ಎದ್ದು ಕಾಣುತ್ತದೆ. ಒಟ್ಟಾರೆಯಾಗಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಉಮಾಶ್ರೀ, ಕನ್ನಡ ಚಿತ್ರರಂಗದ ಒಂದು ದಂತ ಕತೆಯಾಗಿದ್ದಾರೆ.
ಉಮಾಶ್ರೀ ಅವರು ಎರಡು ಬಾರಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ. “ಗುಲಾಬಿ ಟಾಕೀಸ್” ಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನೂ ಸಹ ಪಡೆದಿದ್ದಾರೆ. ಕಲೆಯ ಮೂಲಕ ಜನಮಾನಸ ಗೆದ್ದು ರಾಜಕೀಯದಲ್ಲಿ ಸಹ ತೊಡಗಿಸಿ ಕೊಂಡಿರುವ ಅವರು 2013ರಿಂದ 2018 ರವರೆಗೆ ಶಾಸಕರಾಗಿ ಕರ್ನಾಟಕದ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.
ಪ್ರಸ್ತುತ ಕರ್ನಾಟಕ ವಿಧಾನ ಪರಿಷತ್ ಸದಸ್ಯೆಯಾಗಿದ್ದರೂ ಸಹ ರಂಗಭೂಮಿ, ಕಿರುತೆರೆ ಮತ್ತು ಸಿನಿಮಾಗಳಲ್ಲಿ ಸಕ್ರಿಯವಾಗಿ ನಟಿಸುತ್ತಿರುವ ಅವರು ಸರಳತೆ, ಸಾಮಾಜಿಕ ಕಳಕಳಿ ಮತ್ತು ಕಲಾತ್ಮಕ ಸಾಧನೆಗಾಗಿ ಜನರಿಗೆ ಸ್ಫೂರ್ತಿಯಾಗಿದ್ದಾರೆ. ಇವರ ಜೀವಮಾನ ಸಾಧನೆಗಾಗಿ 2019 ನೇ ಸಾಲಿನ ‘ಡಾ.ರಾಜ್ ಕುಮಾರ್ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ.
ಎನ್.ಆರ್. ನಂಜುಂಡೇಗೌಡ:
ಎನ್.ಆರ್. ನಂಜುಂಡೇಗೌಡ ಕನ್ನಡ ಚಿತ್ರರಂಗದ ಪ್ರಮುಖ ನಿರ್ದೇಶಕರಾಗಿದ್ದು, ನಟ ಮತ್ತು ಸಂಭಾಷಣಾಕಾರರಾಗಿ ಸೇª Éಸಲ್ಲಿಸಿದ್ದಾರೆ. ಸಿನಿಮಾ ಸೇರಿದಂತೆ ರಂಗಭೂಮಿ ಮತ್ತು ಮಾಧ್ಯಮ ಕ್ಷೇತ್ರದಲ್ಲಿ ಅನುಭವ ಹೊಂದಿರುವ ಶ್ರೀಯುತರು ಚಲನಚಿತ್ರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ವಿವಿಧ ಸಮಿತಿಗಳ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಶ್ರೀಯುತರು 1989 ರಲ್ಲಿ ಸ್ವತಂತ್ರ ನಿರ್ದೇಶಕರಾಗಿ ‘ಸಂಕ್ರಾಂತಿʼಯಿಂದ ಕನ್ನಡ ಚಲನಚಿತ್ರದಲ್ಲಿ ಕ್ರಾಂತಿಯನ್ನು ಆರಂಭಿಸಿದರು. ಮಕ್ಕಳ ಸಿನಿಮಾ, ಸಾಹಿತ್ಯ, ಕಲೆಗಳಿಗೆ ಮೀಸಲಾದ ಸ್ವಯಂ ಸೇವಾ ಸಂಸ್ಥೆ ಚಿಲ್ಡ್ರನ್ಸ್ ಇಂಡಿಯಾ ಸಂಸ್ಥಾಪಕ ಅಧ್ಯಕ್ಷರಾಗಿ, ಮಕ್ಕಳ ಮಾಸಪತ್ರಿಕೆ ‘ಚಿಲಿಪಿಲಿʼ ಪ್ರಕಾಶಕ ಮತ್ತು ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀಯುತರು ಚಲನಚಿತ್ರಗಳಿಗೆ ಸಂಬಂಧಿಸಿದ ಅನೇಕ ಸಂಘ ಸಂಸ್ಥೆಗಳ ಸದಸ್ಯರಾಗಿ ಸಕ್ರಿಯ ಸೇವೆ ಸಲ್ಲಿಸುತ್ತಿದ್ದಾರೆ.
“ಅಮಾನುಷ”, “ನವತಾರೆ”, “ಚುಕ್ಕಿ ಚಂದ್ರಮ”, “ನಾನು ನೀನು ಜೋಡಿ” “ನಾನುಗಾಂಧಿ” ಮತ್ತು “ಅಪೂರ್ವ ಜೋಡಿ” ಹಾಗೂ ಮಕ್ಕಳ ಚಿತ್ರಗಳಾದ ಅಆಇಈ ಮತ್ತು ಚುಕ್ಕಿ ಚಂದ್ರಮ ಚಿತ್ರಗಳು ಅವರ ನಿರ್ದೇಶನದ ಪ್ರಸಿದ್ಧ ಚಿತ್ರಗಳು. 2018ರಲ್ಲಿ ಬಿಡುಗಡೆಯಾದ “ಹೆಬ್ಬೆಟ್ರಾಮಕ್ಕ” ಚಿತ್ರವು ಇವರ ವೃತ್ತಿಜೀವನದ ಮೈಲಿಗಲ್ಲಾಗಿ ನಿಲ್ಲುತ್ತದೆ. ಈ ಚಿತ್ರಕ್ಕಾಗಿ 65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಕನ್ನಡದ ಉತ್ತಮ ಚಲನಚಿತ್ರ ಪ್ರಶಸ್ತಿ ಗಳಿಸಿತ್ತು.
ನಂಜುಂಡೇಗೌಡರ ನಿರ್ದೇಶನ ಶೈಲಿ ಸರಳತೆ ಮತ್ತು ಭಾವನಾತ್ಮಕತೆಗೆ ಹೆಸರು ವಾಸಿಯಾಗಿದೆ. ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಗಳು ಸೇರಿದಂತೆ ದೇಶ-ವಿದೇಶಗಳಲ್ಲಿ ಇವರು ನಿರ್ದೇಶಿಸಿದ ಚಿತ್ರಗಳು ಚಿತ್ರೋತ್ಸವದಲ್ಲಿ ಭಾಗವಹಿಸಿವೆ. ಕನ್ನಡ ಚಿತ್ರರಂಗದಲ್ಲಿ ಗುಣಮಟ್ಟದ ಚಿತ್ರಗಳನ್ನು ರೂಪಿಸುವಲ್ಲಿ ಅವರ ಕೊಡುಗೆ ಅಪಾರವಾಗಿದೆ. ನಂಜುಂಡೇಗೌಡ ಅವರ ಸಾಧನೆಗಳು ಉದಯೋನ್ಮುಖ ನಿರ್ದೇಶಕರಿಗೆ ಸ್ಫೂರ್ತಿಯಾಗಿ…