ಗ್ರಾಮೀಣ ಮಹಿಳೆಯರಿಗೆ ದೇಶಿ ಕೋಳಿಮರಿ ವಿತರಣೆ: ಅರ್ಜಿ ಆಹ್ವಾನ

Get real time updates directly on you device, subscribe now.

ಕೊಪ್ಪಳ ಅಕ್ಟೋಬರ್ 24  ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ 2025-26 ನೇ ಸಾಲಿನಲ್ಲಿ ದೇಶಿ ಕೋಳಿಮರಿಗಳನ್ನು ಗ್ರಾಮೀಣ ರೈತ ಮಹಿಳೆಯರಿಗೆ ವಿತರಿಸಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
 ಈ ಯೋಜನೆಯಡಿ ಆಯ್ಕೆಯಾದ ಪ್ರತಿ ಫಲಾನುಭವಿಗಳಿಗೆ 5 ವಾರದ 20 ದೇಶಿ  ಕೋಳಿ ಮರಿಗಳನ್ನು ಉಚಿತವಾಗಿ ವಿತರಣೆ ಮಾಡಲಾಗುವುದು. ಪ್ರಸ್ತುತ ಸಾಲಿನಲ್ಲಿ ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳಿ ನಿಯಮಿತ, ಬೆಂಗಳೂರು ವತಿಯಿಂದ ಯಲಬುರ್ಗಾ ತಾಲ್ಲೂಕನ್ನು ಆಯ್ಕೆ ಮಾಡಲಾಗಿದ್ದು, 99 ಫಲಾನುಭವಿಗಳ ಗುರಿಗಳನ್ನು ನಿಗದಿಪಡಿಸಲಾಗಿರುತ್ತದೆ.
ಅರ್ಜಿ ಸಲ್ಲಿಸಲು ಫಲಾನುಭವಿಯು ಗ್ರಾಮೀಣ ಭಾಗದ ರೈತ ಮಹಿಳೆಯರಾಗಿರಬೇಕು, ಬಡತನ ರೇಖೆಗಿಂತ ಕೆಳಗಿರುವ ಬಗ್ಗೆ ಪ್ರಮಾಣ ಪತ್ರ (ಬಿ.ಪಿ.ಎಲ್. ಕಾರ್ಡ್) ಹೊಂದಿರಬೇಕು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದ ಫಲಾನುಭವಿಗಳು ಜಾತಿ ಪ್ರಮಾಣ ಪತ್ರವನ್ನು ಹೊಂದಿರಬೇಕು (ಪ್ರಮಾಣ ಪತ್ರದಲ್ಲಿ ಖಆ ಓಔ. ಇರಬೇಕು). ಅಂಗವಿಕಲರಾಗಿದ್ದಲ್ಲಿ ಪ್ರಮಾಣ ಪತ್ರ ಹೊಂದಿರಬೇಕು. ರೈತ ಮಹಿಳೆಯರು, ಸ್ವ-ಸಹಾಯ ಗುಂಪಿನ ಮಹಿಳಾ ಸದಸ್ಯರಿಗೆ, ಪ್ರಾಥಮಿಕ ಕೋಳಿ ಸಹಕಾರ ಸಂಘಗಳಲ್ಲಿರುವ ಮಹಿಳಾ ಸದಸ್ಯರಿಗೆ, ರೈತ ಉತ್ಪಾದಕ ಸಂಸ್ಥೆಯ ಮಹಿಳಾ ಸದಸ್ಯರಿಗೆ ಆದ್ಯತೆ ನೀಡಲಾಗುವುದು.
ಅರ್ಜಿ ಸಲ್ಲಿಸಲು ನವೆಂಬರ್ 10 ಕೊನೆಯ ದಿನವಾಗಿದೆ. ಅರ್ಜಿಗಳಿಗಾಗಿ ಮತ್ತು ಹೆಚ್ಚಿನ ಮಾಹಿತಿಗಾಗಿ ಮುಖ್ಯ ಪಶುವೈದ್ಯಾಧಿಕಾರಿಗಳು(ಆಡಳಿತ), ಸಹಾಯಕ ನಿರ್ದೇಶಕರು, ಪಶು ಆಸ್ಪತ್ರೆ, ಯಲಬುರ್ಗಾ ಕಛೇರಿಗೆ ಸಂಪರ್ಕಿಸಲು ಮತ್ತು ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ರೈತರಲ್ಲಿ ಇಲಾಖೆಯ ಉಪನಿರ್ದೇಶಕರಾದ ಡಾ.ಪಿ.ಎಂ.ಮಲ್ಲಯ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!