ರಸ್ತೆ ಕಾಮಗಾರಿಗಳ ಕೆಲಸ ಗುಣಾತ್ಮಕವಾಗಿರಲಿ- ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ

Get real time updates directly on you device, subscribe now.

ರಸ್ತೆ ಕಾಮಗಾರಿಗಳ ಕೆಲಸ ಗುಣಾತ್ಮಕವಾಗಿ ಮಾಡಬೇಕು ಕಳಪೆಯಾದರೆ ಜನರು ದಿನಾಲು ತಮಗೆ ಬೈಯುತ್ತಾ ತಿರುಗಾಡುತ್ತಾರೆ ಎಂದು ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಅವರು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಹೇಳಿದರು.
ಅವರು ಶನಿವಾರ ಕೊಪ್ಪಳ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಕರೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ರಸ್ತೆಗಳು ಬಹಳ ಕಡೆ ಹಾಳಾಗಿದ್ದು ರಸ್ತೆಯ ಮಧ್ಯದಲ್ಲಿ ಎಲ್ಲಿ ಗುಂಡಿಗಳು ಬಿದ್ದೆವೆ ಅವುಗಳನ್ನು ಮುಚ್ಚಲು ಮೊದಲ ಆದ್ಯತೆ ನೀಡಬೇಕು. ಲೋಕೋಪಯೋಗಿ ಇಲಾಖೆ ಈಗಾಗಲೇ 15 ಕೋಟಿ 71 ಲಕ್ಷ ಅನುದಾನ ಬಂದಿದ್ದು ಅದನ್ನು ಆದಷ್ಟು ಬೇಗನೆ ಟೆಂಡರ್ ಕರೆದು ಅವಶ್ಯಕತೆ ಇರುವಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಬೇಕು. ಕೆಲವು ಕಡೆ ಸರ್ವಿಸ್ ರೋಡಗಳು ಹಾಳಾಗಿದ್ದು ಅವುಗಳನ್ನು ಸಹ ಸರಿಪಡಿಸಬೇಕೆಂದರು.
ರಸ್ತೆ ಅಪಘಾತಗಳಲ್ಲಿ ಏನಾದರೂ ಆದರೆ ಸಂಬಂಧಿಸಿದ ಇಲಾಖೆಯ ಜೊತೆಗೆ ಆಯಾ ಕಾಮಗಾರಿಗಳ ಗುತ್ತಿಗೆದಾರರಿಗೆ ಜವಾಬ್ದಾರನ್ನಾಗಿ ಮಾಡಲಾಗುತ್ತಿದೆ. ಈ ಕುರಿತು ಎಚ್ಚರಿಕೆಯಿಂದ ಕೆಲಸ ಮಾಡಿ. ನಗರ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿರ ರಸ್ತೆಗಳು ಎಲ್ಲಿ ಹಾಳಾಗಿವೆ ಅವುಗಳನ್ನು ಸರಿಪಡಿಸಿ. ಎನ್.ಎಚ್. 67 ಮಂಗಳಾಪುರ ಮತ್ತು ಬಸಾಪುರ ಹತ್ತಿರದ ರಸ್ತೆ ಸಮಸ್ಯೆ ಬಗೆಹರಿಸಲು ಎಷ್ಟು ದಿನ ಬೇಕು. ಆದಷ್ಟು ಬೇಗನೆ ಅಲ್ಲಿಯ ಸಮಸ್ಯೆಗಳನ್ನು ಸರಿಪಡಿಸಬೇಕೆಂದು ಸಂಬಂಧಿಸಿದ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗಂಗಾವತಿಯಲ್ಲಿ ಕೆ.ಆರ್.ಐ.ಡಿ.ಎಲ್ ನವರು ರಸ್ತೆ ಕೆಲಸವನ್ನು ಸರಿಯಾಗಿ ಮಾಡಿಲ್ಲ ಎನ್ನುವ ದೂರುಗಳಿಗೆ ಅಲ್ಲಿ ಎಷ್ಟು ರಸ್ತೆಗಳಲ್ಲಿ ತಾವು ಕೆಲಸ ಮಾಡಿದ್ದಿರಾ ಆದಷ್ಟು ಬೇಗನೆ ಅವುಗಳನ್ನು ಸರಿಪಡಿಸಬೇಕು. ಲೋಕೋಪಯೋಗಿ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಇತರೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಜಿಲ್ಲೆಯಲ್ಲಿ ರಸ್ತೆಯ ಯಾವುದೇ ಕೆಲಸ ಕಾಮಗಾರಿಗಳನ್ನು ಕಾಲ ಮಿತಿಯಲ್ಲಿ ಮುಗಿಸುವುದರ ಜೊತೆಗೆ ಅವುಗಳನ್ನು ಗುಣಾತ್ಮಕವಾಗಿ ಮಾಡಬೇಕೆಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ ಎಲ್. ಅರಸಿದ್ದಿ ಮಾತನಾಡಿ, ಹೈವೇ ಟೋಲಗಳಲ್ಲಿ ಬೈಕ್‌ಗಳು ಹೋಗುವಾಗ ಅವು ತಮ್ಮ ಸಿಸಿಟಿವಿ ಕ್ಯಾಮರಾಗಳಲ್ಲಿ ದಾಖಲಾಗುತ್ತಿಲ್ಲ. ಅದನ್ನು ಸರಿಪಡಿಸಿ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನಗಳ ಸ್ಪೀಡ್ ರಡಾರಗಳನ್ನು ಅಳವಡಿಸುವುದರ ಜೊತೆಗೆ ಸೈನೇಜ ಮತ್ತು ಬ್ಯಾರಿಕೇಡಗಳನ್ನು ಅಳವಡಿಸಬೇಕೆಂದು ಹೇಳಿದರು.
ಈ ಸಭೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ನಿರ್ಮಲಾ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರಾದ ಹೇಮಂತ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೆಶಕರಾದ ಮಂಜುನಾಥ ಗುಂಡುರ, ರಾಷ್ಟ್ರೀಯ ಹೆದ್ದಾರಿ ಮತ್ತು ಕೆ.ಆರ್.ಐ.ಡಿ.ಎಲ್. ನ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.

Road works should be of high quality – District Magistrate Dr. Suresh B. itnaal

Get real time updates directly on you device, subscribe now.

Comments are closed.

error: Content is protected !!