ಪ್ರವಾಹ ಪೀಡಿತ ಪ್ರದೇಶಕ್ಕೆ ಜೆಡಿಎಸ್ ನಾಯಕರ ಭೇಟಿ

Get real time updates directly on you device, subscribe now.

 

ಕೊಪ್ಪಳ: ರಾಜ್ಯ ಜೆಡಿಎಸ್ ಪಕ್ಷದ ನಿಯೋಗವು ಕಲಬುರಗಿ ಜಿಲ್ಲೆಯಲ್ಲಿ ಇತ್ತೀಚಿಗೆ ಸುರಿದ ಭಾರಿ ಮಳೆಯಿಂದ ಉಂಟಾದ ಹಾನಿಯ ಸಮೀಕ್ಷೆ ನಡೆಸಿತು.
ಶಾಸಕಾಂಗ ಪಕ್ಷದ ನಾಯಕರಾದ
ಸಿ ಬಿ ಸುರೇಶ ಬಾಬು ನೇತೃತ್ವದ ಹಾಗೂ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ ವಿ ಚಂದ್ರಶೇಖರ್, ಕಲಬುರಗಿ ಜಿಲ್ಲಾ ಅಧ್ಯಕ್ಷ ಬಲರಾಜ ಅಶೋಕ ಗುತ್ತೇದಾರ, ರಾಜ್ಯ ಮಹಾ ಪ್ರದಾನ ಕಾರ್ಯದರ್ಶಿ ವೆಂಕಟರಾವ್ ನಾಡಗೌಡ , ದೇವದುರ್ಗ ಶಾಸಕರಾದ ಶ್ರೀಮತಿ ಕರೆಮ್ಮ ನಾಯಕ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್, ಶಿವಕುಮಾರ್ ನಾಟಿಕಾರ್ ಹಾಗೂ ಶ್ರೀಮತಿ ಮಹೇಶ್ವರಿ ವಾಲಿ ಅವರನ್ನು ಒಳಗೊಂಡ ತಂಡ ಜೇವರ್ಗಿ ತಾಲೂಕಿನ ಕಟ್ಟಿ ಸಂಗಾವಿ, ಹೊನ್ನಾಳ, ಹೊತ್ತಿನಮಡು , ರಾಂಪುರ ಹಾಗೂ ಸುತ್ತಮುತ್ತಲಿನ
ಗ್ರಾಮಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಿತು.
ಮುಖಂಡರು ಸಂತ್ರಸ್ಥ ರೈತರಿಂದ
ನಷ್ಟದ ಮಾಹಿತಿ ಪಡೆದರು. ಈ ಕೂಡಲೇ ಪರಿಹಾರ ಬಿಡುಗಡೆ ಮಾಡುವಂತೆ ಸರಕಾರದ ಮೇಲೆ ಒತ್ತಡ ಹೇರುವುದಾಗಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಪ್ರವಾಹ ಹಾಗೂ ಬೆಳೆ ಹಾನಿಯಿಂದ ಬೇಸತ್ತು ಭೀಮಾ ನದಿಯ ಹಿನ್ನೀರಿನಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡ ಆಫಜಲಪುರ ವಿಧಾನಸಭಾ ಕ್ಷೇತ್ರದ ಬಸವಪಟ್ಟಣ ಗ್ರಾಮದ ರೈತ ಮರೆಪ್ಪ ಸಾಯಬಣ್ಣ ಬರ್ಮ ಅವರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದರು. ಪಕ್ಷದ ಪರವಾಗಿ ಪರಿಹಾರ ಧನ ಹಸ್ತಾಂತರಿಸಿದರು. JDS leaders visit flood-hit areas

Get real time updates directly on you device, subscribe now.

Comments are closed.

error: Content is protected !!