ಎಸ್.ಎಲ್.ಬೈರಪ್ಪ ಜ್ಞಾನಪೀಠ ಕ್ಕಿ0ತ ಮಿಗಿಲಾದ ಸಾಹಿತಿ : ಹಾದಿಮನಿ

Get real time updates directly on you device, subscribe now.


ಕೊಪ್ಪಳ: ಪ್ರಖ್ಯಾತ ಕಾದಂಬರಿಕಾರರು ಸಾಹಿತ್ಯ ದಿಗ್ಗಜ ಡಾ. ಎಸ್.ಎಲ್.ಬೈರಪ್ಪ ಅವರು ತಮ್ಮ ಕೃತಿಗಳಲ್ಲಿ ವೈಚಾರಿಕ ಅಂಶಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಸಮಾಜ ಮುಖಿ ಲೇಖಕ ರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಗುರುವಾರ ಇಲ್ಲಿಯ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್ ಆಯೋಜಿಸಿದ್ಧ ಸಾಹಿತಿ ಎಸ್.ಎಲ್.ಬೈರಪ್ಪ ಅವರ ನುಡಿ ನಮನ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಸುಮಾರು ೨೯ ಕಾದಂಬರಿಗಳನ್ನು ಬರೆದು ಜ್ಞಾನಪೀಠ ಪ್ರಶಸ್ತಿ ಪುರಸ್ಕ್ರತ ರಿಗಿಂತಲು ಮಿಗಿಲಾದ ಸಾಹಿತಿ ಎಂದು ಬಣ್ಣಿಸಿದರು. ಸಾಹಿತಿಗಳಾದ ಅನ್ನಪೂರ್ಣ ಮನ್ನಾಪುರ ,ಎ.ಪಿ ಅಂಗಡಿ,
ಡಾ.ಮಹಾಂತೇಶ್ ನೆಲಾಗಣಿ, ಶಿವಪ್ಪ ಕೊಗಳಿ, ಗಂಗಾಧರ ಖಾನಾಪುರ, ನಾಗರತ್ನ ಬನ್ನಿಕೊಪ್ಪ, ತಾಲ್ಲೂಕು ಆಧ್ಯಕ್ಷ ಪ್ರದಿಪಕುಮಾರ್ ಹದ್ದಣ್ಣವರ್
ಮೈಲಾರಪ್ಪ ಉಂಕಿ ಸೇರಿ ಮೊದಲಾದವರು ಬೈರಪ್ಪನವರ ಸಾಹಿತ್ಯ ಸಾಧನೆಗಳ ಬಗ್ಗೆ ಸ್ಮರಿಸಿದರು.
ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ರುದ್ರಪ್ಪ ಭಂಡಾರಿ ಅಧ್ಯಕ್ಷತೆ ವಹಿಸಿ , ಬೈರಪ್ಪನವರ
ಕುರಿತಾದ ಚುಟುಕುಗಳನ್ನು ವಾಚಿಸಿದರು..

Get real time updates directly on you device, subscribe now.

Comments are closed.

error: Content is protected !!