ಸಾಮೂಹಿಕ ಮದುವೆಗಳಿಗೆ ಜೋಡಿಗಳ ಹೆಸರು ನೋಂದಾಯಿಸಲು ಮನವಿ

Get real time updates directly on you device, subscribe now.

ಕೊಪ್ಪಳ ನಗರದ ಸರದಾರಗಲ್ಲಿಯ ಮುಸ್ಲಿಮ್ ಪಂಚ ಕಮೀಟಿಯ ಪರವಾಗಿ ದಿನಾಂಕ 30 ನೇ ನವೆಂಬರ್ 2025 ರವಿವಾರ ಮುಂಜಾನೆ 11.00 ಘಂ.ಗೆ ಹಜರತ್ ಮೆಹಬೂಬ ಸುಭಾನಿ (ರ.ಅ.) ರವರ ಪವಿತ್ರ ಗ್ಯಾರವಿ ಶರೀಫ್ ಆಚರಣೆಯ ನಿಮಿತ್ತ ಸತತವಾಗಿ 21 (ಇಪ್ಪತ್ತೊಂದ) ನೇ ವರ್ಷದ ಬಡ ಮುಸ್ಲಿಮ್ ಜೋಡಿಗಳ ಸಾಮೂಹಿಕ ಮದುವೆಗಳ ಕಾರ್ಯಕ್ರಮಗಳನ್ನು ಪ್ರತಿ ವರ್ಷದಂತೆ ನೆರವೇರಿಸಲಾಗುವದು.  ಮುಸ್ಲಿಮ ಬಾಂಧವರು ತಮ್ಮ ಸಂಬಂಧಿಕರು ಅಥವಾ ಸ್ನೇಹಿತರ ಕಡೆಯಿಂದ ಜೋಡಿಗಳ ಬಗ್ಗೆ ಹೆಸರು ನೊಂದಾಯಿಸಲು ಇಚ್ಚಿಸಿದಲ್ಲಿ ಕೊಪ್ಪಳ ನಗರದ ಸರದಾರ ಗಲ್ಲಿಯ ಮುಸ್ಲಿಂ ಪಂಚ ಕಮೀಟಿಯ ಪದಾಧಿಕಾರಿಗಳಾದ (1) ಖಾದರಸಾಬ ಕುದ್ರಿಮೋತಿ (ಮೊ.9036967122), (2) ನಗರಸಭೆಯ ಮಾಜಿ ಸದಸ್ಯರಾದ ಮೆಹಬೂಬ ಪಾಷಾ ಮಾನ್ವಿ (ಮೊ. 9900576586), (3) ಮರ್ದಾನಸಾಬ ಲುಂಗಿ (9741581671) ಅಥವಾ (4) ಮೀರಾಸಾಬ ಬನ್ನಿಗೋಳ (7899336766), ಇವರನ್ನು ಖುದ್ದಾಗಿ ಸಂಪರ್ಕಿಸಿ ದಿನಾಂಕ 23-11-2025 ರ ಒಳಗಾಗಿ ದಾಖಲಾತಿಗಳೊಂದಿಗೆ ಹೆಸರು ನೊಂದಾಯಿಸ ಬೇಕೆಂದು ಈ ಮೂಲಕ ಮನವಿ ಮಾಡಿಕೊಳ್ಳಲಾಗಿದೆ.

MUSLIM PANCHA COMMITTEE SARDAR GALLI KOPPAL

Get real time updates directly on you device, subscribe now.

Comments are closed.

error: Content is protected !!