ದಿ.ಎಂ.ಎಸ್.ಮಹಾಂತಯ್ಯನಮಠ ನೇರ ನಿಷ್ಠುರವಾದಿಗಳು : ಸಿದ್ದಣ್ಣ ನಾಲ್ವಡ್

Get real time updates directly on you device, subscribe now.

ಕೊಪ್ಪಳ : ನಗರದ ಶ್ರೀಶಿವಮೂರ್ತಯ್ಯ ಮಹಾಂತಯ್ಯನಮಠ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರು, ಉದ್ಯಮಿಗಳು, ರಾಜಕಾರಣಿ ದಿ.ಎಂ.ಎಸ್. ಮಹಾಂತಯ್ಯಮಠ ಅವರು ನೇರ ನಿಷ್ಠುರವಾದಿಗಳು ಎಂದು ವಾಣಿಜ್ಯ ಪ್ರಶಸ್ತಿ ಪುರಸ್ಕೃತರಾದ ಸಿದ್ದಣ್ಣ ನಾಲ್ವಡ್ ಹೇಳಿದರು.
ಅವರು ಬುಧವಾರದಂದು ನಗರದ ಮಹಾಂತಯ್ಯನಮಠ ಕಲ್ಯಾಣ ಮಂಟಪದಲ್ಲಿ 15ನೇ ಸಂಸ್ಥಾಪಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ ದಿವಂಗತ ಎಂ.ಎಸ್.ಮಹಾಂತಯ್ಯನ ಮಠ ಕೊಪ್ಪಳ ನಗರದಲ್ಲಿ ತಮ್ಮತಂದೆ ಹೆಸರಿನಲ್ಲಿ ಇಂಗ್ಲೀಷ್ ಮೀಡಿಯಂ ಶಾಲೆಯನ್ನು ತೆರೆದು ಯಾವುದೇ ಡೊನೇಷನ್ ಪಡೆಯದೆ ಬಡ ಮಕ್ಕಳಿಗಾಗಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ತೆರೆದು ಉತ್ತಮ ಶಿಕ್ಷಣವನ್ನು ನೀಡಿ ಮಕ್ಕಳ ಮುಂದಿನ ಜೀವನಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ, ಅವರು ರಾಜಕೀಯ, ಉದ್ಯಮ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿ ಅತ್ಯಂತ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದಂತ ಕೀರ್ತಿ ಮಹಾಂತಯ್ಯನ ಮಠ ಅವರಿಗೆ ಸಲ್ಲುತ್ತದೆ, ಅವರನ್ನು ನಾವು ಇಂದು ನೆನೆಯಬೇಕಾಗಿದೆ ಅವರ ಕುಟುಂಬಸ್ಥರು ಸಹ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತಿದ್ದು ಇಂದು ಶಿಕ್ಷಣ ಸಂಸ್ಥೆ ಗುಣಮಟ್ಟದ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದ್ದು ಇಲ್ಲಿ ಕಲಿತ ವಿದ್ಯಾರ್ಥಿಗಳು ವೈದ್ಯಕೀಯ, ಇಂಜಿನಿಯರಿಂಗ್, ಸರಕಾರಿ ನೌಕರರಾಗಿ,  ಕಂಪನಿಗಳಲ್ಲಿ ಉನ್ನತ ಮಟ್ಟದ ಹುದ್ದೆ ನಿರ್ವಹಿಸುತ್ತಿದ್ದು ಸಂತಸ ತಂದಿದೆ ಹೀಗೆ ಶಿಕ್ಷಣ ಸಂಸ್ಥೆ ಯಶಸ್ವಿಯಾಗಿ ಮುನ್ನಡೆಯಲ್ಲಿ ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ನಗರಸಭೆ ಮಾಜಿ ಅಧ್ಯಕ್ಷ ಗವಿಸಿದ್ದಪ್ಪ ಕಂದಾರಿ ಮಾತನಾಡಿ ದಿ.ಎಂ.ಎಸ್.
 ಮಹಾಂತಯ್ಯನಮಠ ಅವರು ಶಿಕ್ಷಣಕ್ಕೆ ತಮ್ಮದೇ ಆದ ಅಮೂಲ್ಯವಾದ ಕೊಡುಗೆಯನ್ನು ನೀಡಿದ್ದಾರೆ, ಅವರು ಅತ್ಯಂತ ಸರಳ ಸ್ನೇಹಜೀವಿಯಾಗಿದ್ದರು ಮತ್ತು ಅವರು ಹಠವಾದಿಗಳು ಏನಾದರೂ ಮಾಡಬೇಕೆಂದರೆ ಅದನ್ನು ಮಾಡೇ ಮಾಡುತ್ತಿದ್ದರು ಅಂತ ವ್ಯಕ್ತಿತ್ವವನ್ನು ಹೊಂದಿದವರು ರಾಜಕಾರಣದಲ್ಲಿ ಸಹ ಅತ್ಯಂತ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದಾರೆ ಅವರನ್ನು ನಾವು ಯಾವಾಗಲೂ ನೆನೆಯಬೇಕಾಗಿದೆ ಎಂದರು.
ಸನ್ಮಾನ : ಸಿದ್ದಣ್ಣ ನಾಲ್ವಡ್, ಗವಿಸಿದ್ದಪ್ಪ ಕಂದಾರಿ, ಚಂದ್ರಶೇಖರ್ ಸೊಪ್ಪಿಮಠ, ಬಸಯ್ಯ ಹಿರೇಮಠ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಪತ್ರಕರ್ತರಾದ ಶಿವರಾಜ್ ನುಗಡೋಣಿ ಮಾತನಾಡಿದರು.
ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಭಾರತಿ ಎಂ.ಎಸ್.ಮಹಾಂತಯ್ಯಮಠ ವಹಿಸಿದ್ದರು.
ವೇದಿಕೆ ಮೇಲೆ ಸಂಸ್ಥೆಯ ವೀರೇಶ್ ಮಹಾಂತಯ್ಯನಮಠ, ಡಾ.ಕೆ.ಬಿ. ಹಿರೇಮಠ್, ಪ್ರಾಧ್ಯಾಪಕ ಚಂದ್ರಶೇಖರ್ ಜಂಗಿನ್, ಶ್ರೀಮತಿ ಮಧು ಮುರುಗೇಶ್ ಜಂಗಿನ್, ವಿಜಯಲಕ್ಷ್ಮಿ ಕುಮಾರಸ್ವಾಮಿ ಹಿರೇಮಠ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಬಸಯ್ಯ ಹಿರೇಮಠ, ಬ್ಯಾಂಕಿನ ನಿವೃತ್ತ ಅಧಿಕಾರಿ ಚಂದ್ರಶೇಖರ್ ಸೊಪ್ಪಿಮಠ, ಮುಖಂಡರಾದ ಹಂಪಯ್ಯ ಸ್ವಾಮಿ ಮೆತ್ತಗಲ್, ವಿಶ್ವನಾಥ್ ಮಹಾಂತಯ್ಯನಮಠ, ಶಿವಾನಂದಯ್ಯ ಉತ್ತಂಗಿಮಠ, ಅಜ್ಜು ಮಹಾಂತಯ್ಯನ ಮಠ, ಮುಖ್ಯ ಶಿಕ್ಷಕ ಮಹೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!