ಹ್ಯಾಟ್ರಿಕ್ ಅಧ್ಯಕ್ಷರಾಗಿ ರಾಜಶೇಖರ್ ಗೌಡ ಆಡೂರ, ಉಪಾಧ್ಯಕ್ಷರಾಗಿ ಕಣ್ಣಿಪೂಜಾ ಅವಿರೋಧ ಆಯ್ಕೆ

Get real time updates directly on you device, subscribe now.

ಶ್ರೀಗವಿಸಿದ್ದೇಶ್ವರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ :
ಕೊಪ್ಪಳ : ನಗರದ ಶ್ರೀಗವಿಸಿದ್ದೇಶ್ವರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಗೆ ಸತತವಾಗಿ ಮೂರನೇ ಬಾರಿಗೆ ಹ್ಯಾಟ್ರಿಕ್  ಅಧ್ಯಕ್ಷರಾಗಿ  ರಾಜಶೇಖರಗೌಡ ಆಡೂರ ಉಪಾಧ್ಯಕ್ಷರಾಗಿ
ಕಣ್ಣಿಪೂಜಾ ಗಣೇಶಕುಮಾರ  ಅವರು ಗುರುವಾರದಂದು  ಅವಿರೋಧವಾಗಿ ಆಯ್ಕೆಗೊಂಡರು.
ನಂತರ ನೂತನ ಅಧ್ಯಕ್ಷ ರಾಜಶೇಖರ ಗೌಡ ಆಡೂರ ಮಾತನಾಡಿ ಮೂರನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಲು ಕಾರಣೀಭೂತರಾದ ಆಡಳಿತ ಮಂಡಳಿಯ ಎಲ್ಲಾ ನಿರ್ದೇಶಕರನ್ನು ಅಭಿನಂದಿಸುವೆ ಎಲ್ಲಾರ  ಸಲಹೆ ಸೂಚನೆ ಪಡೆದು ಬ್ಯಾಂಕಿನ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.
ನೂತನವಾಗಿ ಆಯ್ಕೆಗೊಂಡ ಅಧ್ಯಕ್ಷ ರಾಜಶೇಖರಗೌಡ ಆಡೂರ ಉಪಾಧ್ಯಕ್ಷರಾದ ಕಣ್ಣಿಪೂಜಾ ಗಣೇಶಕುಮಾರ  ಅವರನ್ನು ನಿರ್ದೇಶಕರಾದ ಗವಿಸಿದ್ದಪ್ಪ  ತಳಕಲ್ , ಮಲ್ಲಿಕಾರ್ಜುನ ಪಾಟೀಲ್ , ವಿಶ್ವನಾಥ ಅಗಡಿ, ಬಾಬಾ ಅರಗಂಜಿ,ರಮೇಶ ಕವಲೂರ,ಶ್ರೀಶೈಲಪ್ಪ ಅಂಗಡಿ,ಬಸಯ್ಯ ಹಿರೇಮಠ,ನಾಗರಾಜ  ಅರಕೇರಿ, ಬಸವರಾಜ  ಶಹಪೂರ,ರಾಜೇಂದ್ರಕುಮಾರ   ಶೆಟ್ಟರ್, ಸೈಯದ್ ಶಹನಾಜ ಬೇಗಮ್, ಬ್ಯಾಂಕಿನ
ಪ್ರಧಾನ ವ್ಯವಸ್ಥಾಪಕ ಪ್ರಭಾಕರ್ ಜೋಶಿ, ವ್ಯವಸ್ಥಾಪಕ ಮಲ್ಲಿಕಾರ್ಜುನ ಸಿದ್ದೆಕೊಪ್ಪ, ಸಹಾಯಕ ವ್ಯವಸ್ಥಾಪಕರಾದ ವೀರಮ್ಮ ನರಗುಂದ, ಹಿರಿಯ ಸಹಾಯಕ ಐ.ಜೆ. ನದೀಮುಲ್ಲಾ ಸೇರಿದಂತೆ ಬ್ಯಾಂಕಿನ ಸಿಬ್ಬಂದಿ ವರ್ಗದವರು ಅಭಿನಂದಿಸಿದರು.
gavisiddeshwar urban co op bank koppal
rajashekar adur

Get real time updates directly on you device, subscribe now.

Comments are closed.

error: Content is protected !!