ಕೊಪ್ಪಳ ನಗರದಲ್ಲಿರುವ ಬ್ಲಾಕ್ ಸ್ಫಾಟ್‌ಗಳ ನಿರ್ಮೂಲನೆಗೆ ಸೂಚನೆ
: ಎಸ್.ಬಿ.ಎಂ ಯೋಜನೆಯ ದ್ಯೆಯೋದ್ದೇಶಗಳಂತೆ ಕೊಪ್ಪಳ ನಗರದಲ್ಲಿರುವ ಬ್ಲಾಕ್ ಸ್ಫಾಟ್‌ಗಳ ನಿರ್ಮೂಲನೆಗಾಗಿ ಕೊಪ್ಪಳ ನಗರಸಭೆಯಿಂದ ಸೂಚನೆ ನೀಡಲಾಗಿದೆ.ಆದಕಾರಣ ಕೊಪ್ಪಳ ನಗರದ ಯಾವುದೇ ರಸ್ತೆಯ ಪಕ್ಕದಲ್ಲಿ, ವೃತ್ತಗಳಲ್ಲಿ, ಖಾಲಿ ನಿವೇಶನಗಳಲ್ಲಿ ಹಾಗೂ ಇನ್ನತರೇ ಸ್ಥಳಗಳಲ್ಲಿ ಕಸ ತ್ಯಾಜ್ಯಗಳನ್ನು ಚಲ್ಲಿ ಬ್ಲಾಕ್ ಸ್ಫಾಟ್ ನಿರ್ಮಾಣವಾಗುವಂತೆ ಕಾರಣವಾಗುವಂತವರಿಗೆ ರಾಷ್ಟ್ರೀಯ ಹಸಿರು ನ್ಯಾಯ ಪೀಠದ ಎನ್.ಜಿ.ಟಿ ಆದೇಶಗಳಂತೆ ಮೊದಲ ಬಾರಿಗೆ ರೂ. 500 ಗಳನ್ನು ದಂಡವಾಗಿ ವಿಧಿಸಲಾಗುವುದು, ಮುಂದುವರೆದಲ್ಲಿ ಸೂಕ್ತ ಕಾನೂನು ಕ್ರಮಗಳನ್ನು ಜರುಗಿಸಲಾಗುವುದು ಕೊಪ್ಪಳ ನಗರಸಭೆ ಅಧ್ಯಕ್ಷರು ಹಾಗೂ ಪೌರಾಯುಕ್ತರು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments are closed.