ಇನ್ನರ್ ವೀಲ್ ಸಂಸ್ಥೆ:   ಉಚಿತ ಹೃದಯ ತಪಾಸಣಾ ಶಿಬಿರ

Get real time updates directly on you device, subscribe now.

ಕೊಪ್ಪಳ : ನಗರದ ಗೌರಿ ಅಂಗಳದಲ್ಲಿರುವ ಬ್ರಹ್ಮನವಾಡಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಇನ್ನರ್ ವೀಲ್ ಸಂಸ್ಥೆಯಿಂದ ಉಚಿತ ಹೃದಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಇನ್ನರ್ ವೀಲ್ ಸಂಸ್ಥೆಯ ಅಧ್ಯಕ್ಷರಾದ ಮಧು ಶೆಟ್ಟರ್ ಮಾತನಾಡಿ ಉಚಿತ ಹೃದಯ ತಪಾಸಣೆ ಶಿಬಿರದಲ್ಲಿ ಧಾರವಾಡದ ಎಸ್ ಡಿ ಎಂ ವೈದ್ಯರಾದ ಡಾ. ಮಹಾಂತೇಶ್ ಉಳ್ಳಾಗಡ್ಡಿ ಅವರು ಹೃದಯ ತಪಾಸಣೆಯನ್ನು ನಡೆಸಿದರು ಸುಮಾರು 250 ಕ್ಕೂ ಹೆಚ್ಚು ಜನರು ಇದರ ಸದುಪಯೋಗವನ್ನು ಪಡೆದುಕೊಂಡರು. ಚಿಕ್ಕ ಮಕ್ಕಳಿಂದ ಎಲ್ಲರಿಗೂ ಹೃದಯದ ತೊಂದರೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿವೆ. ವೈದ್ಯರು ಹೇಳುವ ಒಳ್ಳೆಯ ಸಲಹೆಗಳನ್ನು ಅಳವಡಿಸಿಕೊಂಡು ಸದೃಢವಾದ, ಆರೋಗ್ಯವಾದ ಜೀವನ ನಡೆಸಿ ಉಚಿತವಾಗಿ ಬಿ, ಪಿ, ಶುಗರ್, ಈ ಸಿಜಿ, ಎಕೋ ಟೆಸ್ಟ್ ಗಳನ್ನು ನಡೆಸಿ ಹೆಚ್ಚಿನ ವೈದ್ಯಕೀಯ ಪರೀಕ್ಷೆಗೆ ಒಳಪಟ್ಟವರನ್ನು  SDM ಹಾಸ್ಪಿಟಲ್ ನಲ್ಲಿ ತೋರಿಸಲು ಅನುಕೂಲತೆ ಮಾಡಿಕೊಡುವರು ಎಂದು  ತಿಳಿಸಿದರು.
ಇನ್ನರ್ ವಿಲ್ ಸಂಸ್ಥೆಯವರು ತುಂಬಾ ಸಾಮಾಜಿಕ ಕಾರ್ಯಕ್ರಮಗಳನ್ನ ಮಾಡುತ್ತ ಇವರ ಒಳ್ಳೆ ಪ್ರಯತ್ನಕ್ಕೆ ಯಾವಾಗಲೂ ಜಯ ಸಿಗಲಿ ಎಂದು ಡಾ. ಮಹಾಂತೇಶ್ ಉಳ್ಳಾಗಡ್ಡಿ ಹೇಳಿದರು .
ಹಿರಿಯರಾದ ಡಾ. ರಾಧಾ ಕುಲಕರ್ಣಿ, ಡಾ. ಕಸ್ತೂರಿ ಕರಮುಡಿ, ಡಾ. ಕವಿತಾ ಹ್ಯಾಟಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸಂಸ್ಥೆಯ ಪದಾಧಿಕಾರಿಗಳಾದ  ರೇಖಾ, ಮೀನಾಕ್ಷಿ, ಸುವರ್ಣ, ಹೇಮಾ, ಸುಧಾ ಡಿಸ್ಟಿಕ್ ISO ಶರಣಮ್ಮ, ಹಾಗೂ ಸುಮಾರು 40 ಜನ ಸದಸ್ಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು,ಕಾರ್ಯಕ್ರಮದ ನಿರೂಪಣೆಯನ್ನು ಮಾಜಿ ಅಧ್ಯಕ್ಷರಾದ ಮಮತಾ ಶೆಟ್ಟರ್ ನೆರವೇರಿಸಿದರು.
koppal news
koppal innerweel

Get real time updates directly on you device, subscribe now.

Comments are closed.

error: Content is protected !!