ಮಾನವೀಯ ಕಳಕಳಿಯಿಂದ ಜಗತ್ತಿನಲ್ಲಿ ಶ್ರೇಷ್ಠತೆ : ಸೋಮರಡ್ಡಿ ಅಳವಂಡಿ

Get real time updates directly on you device, subscribe now.

ಜಗತ್ತಿನಲ್ಲಿ ಶ್ರೇಷ್ಠತೆಯು ಮಾನವೀಯ ಕಳಕಳಿಯಿಂದ ಬರುತ್ತದೆ ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕೊಪ್ಪಳ ಜಿಲ್ಲಾ ಶಾಖೆಯ ಸಭಾಪತಿ ಸೋಮರಡ್ಡಿ ಅಳವಂಡಿ ಅವರು ಹೇಳಿದರು.

 ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಶನಿವಾರ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ, ಕೊಪ್ಪಳ ಮತ್ತು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕ ಸಹಯೋಗದಲ್ಲಿ ಹಮ್ಮಿಕೊಂಡಿದ್ದವಿಶ್ವ ಪ್ರಥಮ ಚಿಕಿತ್ಸೆ ದಿನಾಚರಣೆ-2025 ಕಾರ್ಯಕ್ರಮ ವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.

ಎಲ್ಲರೂ ಮಾನವೀಯ ಸೇವೆಯನ್ನು ಮಾಡಬೇಕು. ನಮ್ಮ ಅಕ್ಕ ಪಕ್ಕ ದವರು ಸಂಕಷ್ಟಕ್ಕೆ ಒಳಪಟ್ಟಾಗ ಅವರ ನೆರವಿಗೆ ದಾವಿಸಬೇಕು. ಎಲ್ಲರಲ್ಲಿ ಮಾನವೀಯತೆ, ಸಮಾಜದ ಪರ ಕಾಳಜಿ ಇರಬೇಕು. ನೀವು ಅಕ್ಕ್ಕ ಪಕ್ಕ ದ ಸಮಸ್ಯೆಗಳಿಗೆ ಪರಿಹಾರ ಹುಡುಕಿದರೆ  ಜೀವನದಾರಿ ಸುಗಮವಾಗುತ್ತದೆ. ಉತ್ತಮವಾದ ಅವಕಾಶಗಳು  ದೊರೆಯುತ್ತವೆ. ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಿ. ವಿದ್ಯಾರ್ಥಿಗಳು ಪ್ರಶ್ನೆ ಮಾಡುವ ಮನಸ್ಥಿತಿಯನ್ನು ಬೆಳಿಸಿಕೊಳ್ಳಬೇಕು. ನಮ್ಮ ಚಿಂತನೆಗಳು ಸಮಾಜ ಮುಖಿಯಾಗಿರಬೇಕು. ಕೊಪ್ಪಳದ ರೆಡ್ ಕ್ರಾಸ್ ವತಿಯಿಂದ ಒಂದು ಲಕ್ಷ ಇಪ್ಪತ್ತು ಸಾವಿರ ಜನರಿಗೆ ರಕ್ತ ಕೊಟ್ಟಿದೆ. ರೆಡ್ ಕ್ರಾಸ್ ಘಟಕವು ಅನೇಕ ಜನಪರ ಉಪಯೋಗ ಕೆಲಸಗಳನ್ನು ಮಾಡಿದೆ.

ಕಾರ್ಯಕ್ರದಲ್ಲಿ  ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕೊಪ್ಪಳ ಜಿಲ್ಲಾ ಶಾಖೆಯ ನಿರ್ದೇಶಕರಾದ ಡಾ. ಶಿವನಗೌಡ ಪಾಟೀಲ್ ಕಾಮನೂರಿನ ಆಯುರ್ವೇದ ಚಿಕಿತ್ಸಾಲಯದ ವೈದ್ಯಧಿಕಾರಿ ಡಾ ಕವಿತಾ ಹ್ಯಾಟಿ  ಅವರು ವಿಶೇಷ ಉಪನ್ಯಾಸ ನೀಡಿದರು.

ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಗಣಪತಿ ಲಮಾಣಿ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕೊಪ್ಪಳ ಜಿಲ್ಲಾ ಶಾಖೆಯ ನಿರ್ದೇಶಕರು ಮತ್ತು ಸಂಯೋಜಕರಾದ ರಾಜೇಶ್ ಯಾವಗಲ್ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ರೆಡ್ ಕ್ರಾಸ್ ಘಟಕದ ಸಂಚಾಲಕರಾದ ಡಾ. ಅಶೋಕ ಕುಮಾರ,  ಶಿಕ್ಷಣ ಪ್ರೇಮಿ ಬಿ. ಜಿ. ಕರಿಗಾರ, ಕಾಲೇಜಿನ ಹಿರಿಯ ಪ್ರಾಧ್ಯಾಪಕರಾದ ಡಾ. ಪ್ರದೀಪ್ ಕುಮಾರ, ಪ್ರೊ. ವಿಠೋಬ, ಡಾ. ನರಸಿಂಹ ಉಪಸ್ಥಿತರಿದ್ದರು. ಪ್ರಸ್ತವಿಕವಾಗಿ ಕೊಪ್ಪಳ  ರೆಡ್  ಕ್ರಾಸ್ ಸಂಸ್ಥೆ ಯ ದೇವೇಂದ್ರಪ್ಪ ಅವರು ಮಾತಾನಾಡಿದರು. ಕಾರ್ಯಕ್ರಮವನ್ನು ಡಾ. ಅಶೋಕ ಕುಮಾರ ನಿರೂಪಿಸಿ, ಸ್ವಾಗತಿಸಿದರು. ಅಕ್ಕಮ್ಮ ಪ್ರಾರ್ಥನೆ ಗೀತೆ ಹಾಡಿದರು. ಡಾ. ಪ್ರದೀಪ್ ಕುಮಾರ ವಂದಿಸಿದರು.

Get real time updates directly on you device, subscribe now.

Comments are closed.

error: Content is protected !!