ಡಂಬ್ರಳ್ಳಿಯಲ್ಲಿ ಶ್ರೀ ಶಂಕರಲಿಂಗಜ್ಜನ 41 ನೇ ಪುಣ್ಯತಿಥಿ ಪುರಾಣೋತ್ಸವ

Get real time updates directly on you device, subscribe now.

ಕೊಪ್ಪಳ

ತಾಲೂಕಿನ ಡಂಬ್ರಳ್ಳಿ ಗ್ರಾಮದಲ್ಲಿ ಶ್ರೀ ಶಂಕರಲಿಂಗಜ್ಜನ 41 ನೇ ಪುಣ್ಯತಿಥಿ ಪ್ರಯುಕ್ತ ಒಂಬತ್ತು ದಿನಗಳ ಧಾರ್ಮಿಕ ಪುರಾಣೋತ್ಸವ ಸೆ. 5 ರಂದು ಆರಂಭಗೊಂಡಿದ್ದು, ಸೆ. 13 ರಂದು ಮಹಾಮಂಗಲಗೊಳ್ಳಲಿದೆ.

ಸೆ. 12 ರಂದು ಮಹಾಮಂಗಲದ ಮುನ್ನಾದಿನ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ದಿವ್ಯಸಾನಿಧ್ಯಕ್ಕೆ ಮೈನಳ್ಳಿ–ಬಿಕನಳ್ಳಿಯ ಶ್ರೀ ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಕುಕನೂರಿನ ಶ್ರೀ ಅನ್ನದಾನೇಶ್ವರ ಶಾಖಾ ಮಠದ ಶ್ರೀ ಡಾ. ಮಹಾದೇವ ಮಹಾಸ್ವಾಮಿಗಳು ಸಂಜೆ 7.30ಕ್ಕೆ ಆಶೀರ್ವಚನ ನೀಡಲಿದ್ದಾರೆ.

ಪುರಾಣ ಪ್ರವಚನವನ್ನು ಶಿವಯೋಗಿ ಡಾ. ಪುಟ್ಟರಾಜ ಕವಿಗವಾಯಿಗಳವರ ಶಿಷ್ಯರಾದ ಶ್ರೀ ದೊಡ್ಡಬಸಯ್ಯ ಶಾಸ್ತ್ರಿಗಳು ಹಾಗೂ ತಂಡ ನಿರ್ವಹಿಸಿದ್ದಾರೆ. ಸಂಗೀತ ಸೇವೆಯನ್ನು  ಶರಣಯ್ಯ ಹಿರೇಮಠ, ತಬಲಾ ಸಾಥ್  ವೀರೇಶಕುಮಾರ ನವಲಿ ನೀಡಿದ್ದಾರೆ.

ಮೂರ್ತಿ ಮೆರವಣಿಗೆ

ಸೆ.  13 ರಂದು ಬೆಳಿಗ್ಗೆ 6 ಗಂಟೆಗೆ ಶ್ರೀ ಗುರು ಶಂಕರಲಿಂಗಣ್ಣನ ಮೂರ್ತಿಗೆ ಮಹಾರುದ್ರಾಭಿಷೇಕ ನೆರವೇರಿಸಲಾಗುವುದು. ನಂತರ ಭಾವಚಿತ್ರ ಮೆರವಣಿಗೆ, ಪಂಚಲಿಂಗೇಶ್ವರ ಜಗ್ಗಲಗಿ ಮೇಳದಿಂದ ಸಕಲವಾದ್ಯಗಳೊಂದಿಗೆ ಸಾಂಸ್ಕೃತಿಕ ಮೆರವಣಿಗೆ, ಪತಾಕಿ ಸವಾಲ್ ಹಾಗೂ ಮಹಾಪ್ರಸಾದ ಏರ್ಪಡಿಸಲಾಗಿದೆ. ಸಂಜೆ ಪುರಾಣ ಮಹಾಮಂಗಳಗೊಳ್ಳಲಿದೆ.

———————–

Get real time updates directly on you device, subscribe now.

Comments are closed.

error: Content is protected !!