ಗಾಂಜಾ ಮಾರಾಟ : ನಾಲ್ವರ ಬಂಧನ

Get real time updates directly on you device, subscribe now.

ಕೊಪ್ಪಳ : ಜಿಲ್ಲೆಯ ವಿವಿಧಡೆ ಗಾಂಜಾ ಮಾರಾಟ ಮಾಡುತ್ತಿದ್ದವರು ಹಾಗೂ ಸೇವನೆ ಮಾಡುತ್ತಿದ್ದವರನ್ನು ಬಂಧಿಸುವಲ್ಲಿ ಕೊಪ್ಪಳ ಪೊಲೀಸರು ಯಶಸ್ವಿಯಾಗಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದವರ ಮೇಲೆ ದಾಳಿ ನಡೆಸಿ ನಾಲ್ವರು ಆರೋಪಿಗಳನ್ನು ಕೊಪ್ಪಳ ಗ್ರಾಮೀಣ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಕೊಪ್ಪಳ ಜಿಲ್ಲಾ ಪೊಲೀಸರು, ಗಾಂಜಾ ಮಾರಾಟಗಾರರ ಮೇಲೆ ದಾಳಿ ಮಾಡಿ ನಿಂಗಪ್ಪ ಗುರಿಕಾರ(50), ಮಾರುತಿ ಗುರಿಕಾರ (26), ರವಿ ಗುರಿಕಾರ (20), ನಾಗಪ್ಪ ಕುದುರಿಮೋತಿ (38) ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ದಾಳಿ ಮಾಡಿದ ಸಂದರ್ಭದಲ್ಲಿ ಇವರ ಬಳಿ ಇದ್ದ ಸುಮಾರು 25,200 ರೂ. ಬೆಲೆ ಬಾಳುವ 630 ಗ್ರಾಂ ಗಾಂಜಾ ಮತ್ತು 15 ಗಂಜಾ ಗಿಡದ ಸಸಿಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಕುರಿತು ಪೊಲೀಸರು ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಗುನ್ನೆ ಸಂಖ್ಯೆ: 149/2025 ថ໐: 20 [b] [ii] [A], NDPS Act ໖ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ថថ

ಪತ್ರಿಕಾ ಪ್ರಕಟಣೆ ವಿವರ ಹೀಗಿದೆ…

ದಿನಾಂಕ-22.08.2025 ರಂದು ಕೊಪ್ಪಳ ಜಿಲ್ಲೆ, ಕೊಪ್ಪಳ ಉಪವಿಭಾಗ, ಕೊಪ್ಪಳ ಗ್ರಾಮೀಣ ಠಾಣಾ ವ್ಯಾಪ್ತಿಯ ಇರಕಲ್ಲಗಡ ಹೊರವಲಯದ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ ಮಾಹಿತಿ ಮೇರೆಗೆ ದಾಳಿ ಮಾಡಿ

  1. ನಿಂಗಪ್ಪ ತಂದೆ ಮರಿಯಪ್ಪ ಗುರಿಕಾರ ವಯಾ-50 ವರ್ಷ ಉ-ಒಕ್ಕಲುತನ ಸಾ: 01 ನೇ ವಾರ್ಡ ಇರಕಲ್ಲಗಡ
  2. ಮಾರುತಿ ತಂದೆ ನಿಂಗಪ್ಪ ಗುರಿಕಾರ ವಯಾ 26 ವರ್ಷ ಉ-ಒಕ್ಕಲುತನ ಸಾ: 01 ನೇ ವಾರ್ಡ ಇರಕಲ್ಲಗಡ
  3. ರವಿ ತಂದೆ ನಿಂಗಪ್ಪ ಗುರಿಕಾರ ವಯಾ-20 ವರ್ಷ ಉ-ಒಕ್ಕಲುತನ ಸಾ; 01 ನೇ ವಾರ್ಡ ಇರಕಲ್ಲಗಡ
  4. ನಾಗಪ್ಪ ತಂದೆ ಸಣ್ಣ ಯಮನೂರಪ್ಪ ಕುದುರಿಮೋತಿ ವಯಾ-38 ವರ್ಷ ಉ-ಒಕ್ಕಲುತನ ಸಾ: 01 ನೇ ವಾರ್ಡ ಇರಕಲ್ಲಗಡ ಗ್ರಾಮ ತಾ.ಜಿ. ಕೊಪ್ಪಳ.

ಇವರನ್ನು ದಸ್ತಗಿರಿ ಮಾಡಿ ಇವರಿಂದ ಅಂ.ಕಿಮ್ಮತ್ತು 25,200/- ರೂ ಬೆಲೆ ಬಾಳುವ 630 ಗ್ರಾಂ ಗಾಂಜಾ ಮತ್ತು 15 ಗಂಜಾ ಗಿಡ ಸಸಿಗಳನ್ನು ಜಪ್ತಿಪಡಿಸಿಕೊಂಡಿದ್ದು, ಈ ಕುರಿತು ಕೊಪ್ಪಳ ಗ್ರಾಮೀಣ ಠಾಣೆ ಗುನ್ನೆ ನಂ: 149/2025 ಕಲಂ: 20 [b] [i] [A], NDPS Act ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

  1. ದಿನಾಂಕ-22.08.2025 ರಾತ್ರಿ 09.00 ಗಂಟೆ ಸುಮಾರಿಗೆ ಗಂಗಾವತಿ ಗ್ರಾಮೀಣ ಠಾಣಾ ವ್ಯಾಪ್ತಿಯ ಸಂಗಾಪುರ-ಮಲ್ಲಾಪುರ ರಸ್ತೆಯ ಸಂಗಾಪುರ ಟವರ್ ಹತ್ತಿರ ಗಾಂಜಾ ಸೇದುತ್ತಾ ನಿಂತಿದ್ದ ಇಬ್ಬರು ವ್ಯಕ್ತಿಗಳಿಗೆ ವಶಕ್ಕೆ ಪಡೆದುಕೊಂಡು ವಿಚಾರಿಸಲಾಗಿ ಅವರು ತಮ್ಮ ಹೆಸರು
  2. ಮಂಜುನಾಥ ತಂದೆ ಯಲ್ಲಪ್ಪ ಮಲ್ಲಿನಕೇರಿ ವಯಾ: 23 ವರ್ಷ ಉ: ಎಳನೀರು ವ್ಯಾಪಾರ ಸಾ: ತಳವಾರಗಟ್ಟರಸ್ತೆ ಆನೆಗೊಂದಿ
  3. ದುರಗೇಶ ತಂದೆ ಬಾಲಪ್ಪ ಹೊಟೇಲ್ ವಯಾ:20 ವರ್ಷ, ಉ:ಕೂಲಿ ಸಾ: ಸಂಗಾಪೂರ ತಾ:ಗಂಗಾವತಿ

ಅಂತಾ ತಿಳಿಸಿದ್ದು, ಇವರನ್ನು ಗಂಗಾವತಿ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಮಾಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ಖಚಿತವಾಗಿದ್ದು, ಈ ಕುರಿತು ದಿನಾಂಕ-22.08.2025 ರಂದು ಗಂಗಾವತಿ ಗ್ರಾಮೀಣ ಠಾಣೆ ಗುನ್ನೆ ನಂ:243/2025 ಕಲಂ:27(b) NDPS Act-1985 ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

  1. ದಿನಾಂಕ-22.08.2025 ರಾತ್ರಿ 09.15 ಗಂಟೆ ಸುಮಾರಿಗೆ ಗಂಗಾವತಿ ಗ್ರಾಮೀಣ ಠಾಣಾ ವ್ಯಾಪ್ತಿಯ ಶರಣಬಸವೇಶ್ವರ ಕ್ಯಾಂಪ್ ಉಪಕಾಲುವೆ ದಂಡೆಯ ಮೇಲೆ ಗಾಂಜಾ ಸೇದುತ್ತಾ ನಿಂತಿದ್ದ ಇಬ್ಬರು ವ್ಯಕ್ತಿಗಳಿಗೆ ವಶಕ್ಕೆ ಪಡೆದುಕೊಂಡು ವಿಚಾರಿಸಲಾಗಿ ಅವರು ತಮ್ಮ ಹೆಸರು
  2. ಸೋಹೇಬ್ ತಂದೆ ಶರ್ಮುದ್ದೀನ್ ವಯಾ: 20 ವರ್ಷ ಉ: ಸೆಂಟ್ರಿಂಗ್ ಕೆಲಸ ಸಾ: ಲಿಂಗರಾಜ ಕ್ಯಾಂಪ್, ಗಂಗಾವತಿ
  3. ದಾವಲಸಾಬ ತಂದೆ ಚಂದುಸಾಬ ವಯಾ: 22 ವರ್ಷ ಉ: ಸೆಂಟ್ರಿಂಗ್ ಕೆಲಸ ಸಾ: ಲಿಂಗರಾಜ ಕ್ಯಾಂಪ್, ಗಂಗಾವತಿ

ಅಂತಾ ತಿಳಿಸಿದ್ದು, ಇವರನ್ನು ಗಂಗಾವತಿ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಮಾಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ಖಚಿತವಾಗಿದ್ದು, ಈ ಕುರಿತು ದಿನಾಂಕ-22.08.2025 ರಂದು ಗಂಗಾವತಿ ಗ್ರಾಮೀಣ ಠಾಣೆ ಗುನ್ನೆ ನಂ:244/2025 ಕಲಂ:27(b) NDPS Act-1985 ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

ಪ್ರಕರಣಗಳ ಪತ್ತೆ ಕುರಿತು ಶ್ರಮಿಸಿ, ಉತ್ತಮ ಕರ್ತವ್ಯ ಮಾಡಿದ ಡಿಎಸ್‌ಪಿ ಕೊಪ್ಪಳ ಗಂಗಾವತಿ,  ಸುರೇಶ ಸಿಪಿಐ ಕೊಪ್ಪಳ ಗ್ರಾಮೀಣ ವೃತ್ತ,  ರಂಗಪ್ಪ ಪಿ.ಐ ಗಂಗಾವತಿ,  ವಿರೇಶ ಪಿ.ಎಸ್.ಐ ಕೊಪ್ಪಳ ಗ್ರಾಮೀಣ ಠಾಣೆ,  ವೆಂಕಟೇಶ ಚೌವ್ಹಾಣ ಪಿ.ಎಸ್‌ಐ ಗಂಗಾವತಿ ಗ್ರಾಮೀಣ ಠಾಣೆ,  ವೆಂಕಟೇಶ ಚೌವ್ಹಾಣ ಪಿ.ಎಸ್‌ಐ ಗಂಗಾವತಿ ಗ್ರಾಮೀಣ ಠಾಣೆ, ಹೆಚ್‌ಸಿ ರವರಾದ ಲಕ್ಕಪ್ಪ, ಶಿವಪುತ್ರಪ್ಪ, ಮಹೇಶ ಸಜ್ಜನ, ಪಿ.ಸಿ ರವರಾದ ತಾಜುದ್ದೀನ, ಅಂದಿಗಾಲಪ್ಪ, ಶರಣಪ್ಪ, ಕನಕರಾಯ, ಚಿದಾನಂದ, ಉಮೇಶ, ಶ್ರೀಕಾಂತ, ಮಪಿಸಿ ರವರಾದ ಕಾವೇರಿ, ಶ್ವೇತಾ ಜೀಪ್ ಚಾಲಕ ಮಹಿಬೂಬ ಮತ್ತು ಗಂಗಾವತಿ ಗ್ರಾಮೀಣ ಠಾಣೆ ಸಿಬ್ಬಂದಿ ನಾಗರಾಜ, ರಮೇಶ, ಮರಿಯಪ್ಪ, ಮುತ್ತುರಾಜ ಇವರಿಗೆ ಡಾ: ರಾಮ್ ಎಲ್. ಆರಸಿದ್ದಿ, ಐ.ಪಿ.ಎಸ್, ಪೊಲೀಸ್ ಅಧೀಕ್ಷಕರು ಕೊಪ್ಪಳ, ರವರು ಪ್ರಶಂಸನೆ ವ್ಯಕ್ತಪಡಿಸಿರುತ್ತಾರೆ.

지/-

Get real time updates directly on you device, subscribe now.

Comments are closed.

error: Content is protected !!