ತಿರುಗಲ್ ತಿಮ್ಮಪ್ಪ ವಾರ್ಷಿಕ ಜಾತ್ರೆ ಸಂಪನ್ನ

Get real time updates directly on you device, subscribe now.

ಕೊಪ್ಪಳ: ಪ್ರತಿವರ್ಷದಂತೆ ಈ ವರ್ಷವೂ ಕೂಡ ಶ್ರಾವಣ ಮಾಸದ ನಾಲ್ಕನೇ ಶನಿವಾರದಂದು ಜಿಲ್ಲೆಯ ಐತಿಹಾಸಿಕ ದಿಂದಿರಿಗಿ ಪಟ್ಟಣವೆಂದು ಕರೆಯುವ ಕೆರೆಹಳ್ಳಿ ಬಳಿಯ ತಿರುಗಲ್ ತಿಮ್ಮಪ್ಪನ ವಾರ್ಷಿಕ ಜಾತ್ರಾ ಮಹೋತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು.

ಹಂಪಿ ಕಿಷ್ಕಿಂದೆ ಪಶ್ಚಿಮ ಭಾಗದ ಪ್ರಥಮ ಬಾಗಿಲು ಎಂದು ಕರೆಯುವ ದಿಂದಿರಿಗಿ ಪಟ್ಟಣ ಕಂಪಿಲರಾಯ ಮತ್ತು ಗಂಡುಗಲಿ ಕುಮಾರರಾಮನ ಕಾಲಾವಧಿಯಲ್ಲಿ ಆಡಳಿತಕ್ಕೊಳಪಟ್ಟಿತ್ತು. ಅಂದಿನಿAದ ಶೈವ-ವೈಷ್ಣವ ಸಂಗಮ ವೆನಿಸಿದ ತಿರುಗಲ್ ತಿಮ್ಮಪ್ಪ ದೇವಸ್ಥಾನದಲ್ಲಿ ಶ್ರಾವಣ ಮಾಸದ ಕೊನೆ ಶನಿವಾರದಂದು ಜಾತ್ರೆ ಆಚರಿಸುವುದು ವಾಡಿಕೆಯಾಗಿದೆ. ಈ ಬಾರಿ ಶ್ರಾವಣದಲ್ಲಿ ಐದು ಶನಿವಾರಗಳು ಬಂದಿದ್ದರಿAದ ನಾಲ್ಕನೇ ಶನಿವಾರದಂದು ತಿರುಗಲ್ ತಿಮ್ಮಪ್ಪ ಜಾತ್ರಾ ಮಹೋತ್ಸವ ಆಚರಿಸಲಾಯಿತು ಎಂದು ಭಕ್ತರು ತಿಳಿಸಿದ್ದಾರೆ.

ಕೆರೆಹಳ್ಳಿ ಗ್ರಾಮದ ಪೂಜಾರ ಮನೆತನದ ಭೀಮಪ್ಪ ಗಗ್ಗರಿ ಇವರ ನೇತೃತ್ವದಲ್ಲಿ ಬೆಳಿಗ್ಗೆ ಮಾರುತಿಯ ಮೂರ್ತಿಯನ್ನು ಡೊಳ್ಳು ವಾದ್ಯಗಳು, ಭಜನೆ ಮತ್ತು ಕುಂಭ ಕಳಶದೊಂದಿಗೆ ತೇರಿನ ಹನುಮಪ್ಪ ಬೆಟ್ಟಕ್ಕೆ ಉತ್ಸವದ ಮೂಲಕ ಕರೆ ತರಲಾಯಿತು. ಅಲ್ಲಿನ ಮಜ್ಜನ ಬಾವಿಯಲ್ಲಿ ಮಾರುತಿ ಮೂರ್ತಿಗೆ ಸ್ನಾನ ಮಾಡಿಸಿ ಮಂದಿರಕ್ಕೆ ಕರೆ ತರಲಾಯಿತು. ತೇರಿನ ಹನುಮಂತನಿಗೆ ಎಲೆ ಚೆಟ್ಟಿ ಅಲಂಕಾರ ಪೂಜೆ ಸಲ್ಲಿಸಲಾಯಿತು. ಹತ್ತಿರದಲ್ಲಿಯೇ ಇದ್ದ ನೈಸರ್ಗಿಕ ಪುಷ್ಕರಣಿಯ ಗಂಗೆಯಿAದ ತಿರುಗಲ್ ತಿಮ್ಮಪ್ಪ, ಲಕ್ಷಿö್ಮÃದೇವಿಯರ ಪಾಳು ಬಿದ್ದ ಮಂದಿರದಲ್ಲಿ ಅಭಿಷೇಕ, ಅಲಂಕಾರ, ಪೂಜೆ, ದೀಪ, ಧೂಪ ಮತ್ತು ಮಹಾಮಂಗಳಾರತಿ ಬೆಳಗಲಾಯಿತು. ಕೆಲಹೊತ್ತು ಭಜನೆ ಕಾರ್ಯಕ್ರಮ ಆಯೋಜಿಸಿ ಬಳಿಕ ಶ್ರೀ ತೇರಿನ ಹನುಮಂತದೇವರ ಮಂದಿರಕ್ಕೆ ಪಲ್ಲಕ್ಕಿಯನ್ನು ತರಲಾಯಿತು. ಮಹಾಮಂಗಳಾರತಿಯಾದ ಬಳಿಕ ಗುಡ್ಡದಲ್ಲಿ ತಯಾರಿಸಿದ ಭಕ್ಷö್ಯವನ್ನು ದೇವರುಗಳಿಗೆ ನೈವೇದ್ಯ ನೀಡಲಾಯಿತು.

ಒಂದು ದಿನ ಮೊದಲೇ ಗುಡ್ಡಕ್ಕೆ ತೆರಳುವ ಭಕ್ತರು ಜಾತ್ರೆಯ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿರುತ್ತಾರೆ. ಕುಡಿಯುವ ನೀರು ಇತ್ಯಾದಿ ಸೌಲಭ್ಯಗಳನ್ನು ಹೊಂದಿಕೆ ಮಾಡಿಕೊಳ್ಳಲಾಗುತ್ತದೆ. ರಾತ್ರಿಯಿಡೀ ಭಜನಾ ಕಾರ್ಯಕ್ರಮ ಜರುಗುತ್ತದೆ. ಜಾತ್ರೆಯ ದಿನ ರಾತ್ರಿ ಕೆರೆಹಳ್ಳಿ ಗ್ರಾಮದಲ್ಲಿ ತೇರಿನ ಹನುಮಪ್ಪನ ಪಾಲಕಿ ಉತ್ಸವದ ಮೆರವಣಿಗೆ ನಡೆಯುತ್ತದೆ. ಮಾರನೆ ದಿನ ಭಾನುವಾರ ಭಜನಾ ಕಾರ್ಯಕ್ರಮದ ಜೊತೆಗೆ ವಾರ್ಷಿಕ ಜಾತ್ರೋತ್ಸವವನ್ನ ಸಂಪನ್ನಗೊಳಿಸಲಾಗುತ್ತದೆ ಎಂದು ಭಕ್ತರು ತಿಳಿಸಿದ್ದಾರೆ.

ಗುಡ್ಡಗಾಡು ಪ್ರದೇಶದಲ್ಲಿರುವ ನಾಗೇಶನಹಳ್ಳಿ, ಬಿಳೇಬಾವಿ, ಚಂದ್ರಗಿರಿ, ಯಡ್ರಹಳ್ಳಿ ಸೇರಿದಂತೆ ಬೂದುಗುಂಪ, ಗುಡ್ಡದಹಳ್ಳಿ, ಇಂದರಗಿ, ಶಹಪುರ ಸೇರಿದಂತೆ ಸುತ್ತಮುತ್ತಲಿನ ನಾನಾ ಗ್ರಾಮಗಳ ಭಕ್ತರು ತೇರಿನ ಹನುಮಂತ ದೇವರ ಜಾತ್ರೆಯಲ್ಲಿ ಪಾಲ್ಗೊಂಡು ಧನ್ಯತೆ ಹೊಂದಿದರು. ಈ ಜಾತ್ರೆ ಶತಮಾÀಳಿಂದಲೂ ಆಚರಣೆಯಲ್ಲಿದ್ದು ಕೆರೆಹಳ್ಳಿ ಗ್ರಾಮದ ಹಿರಿಯರಾದ ಸಿದ್ರಾಮಪ್ಪ ಭಟ್ಟರ್, ಮಲ್ಲಯ್ಯ ಉಡುಮಕಲ್, ಲಕ್ಕಪ್ಪ ಶಿಳ್ಳೆಕ್ಯಾತರ್, ಗವಿಸಿದ್ದಪ್ಪ ಡೊಳ್ಳಿನ್, ಗುರುರಾಜ ಬೋವಿ, ಹನುಮಂತಪ್ಪ ಉಪ್ಪಾರ, ರಾಮಣ್ಣ ದನಗರ, ಕಲ್ಲಪ್ಪ ತಳವಾರ, ಈರಪ್ಪ ಗುರಿಕಾರ, ವೀರೇಶ ಹಿರೇಮಠ ಸೇರಿದಂತೆ ಇತರೆ ಧುರೀಣರು ಸಂಪ್ರದಾಯವನ್ನು ಮುಂದುವರಿಸಿಕೊAಡು ಬರುತ್ತಿದ್ದಾರೆ.

ಕೊಪ್ಪಳ ಜಿಲ್ಲಾಡಳಿತ ದೇವಸ್ಥಾನಕ್ಕೆ ತೆರಳಲು ರಸ್ತೆ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಿದಲ್ಲಿ ಭಕ್ತರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಬರಲು ಸಾಧ್ಯವಾಗುತ್ತದೆ. ರಾಜ್ಯ ಸರ್ಕಾರ ಈ ತಿರುಗಲ್ ತಿಮ್ಮಪ್ಪ ಬೆಟ್ಟವನ್ನು ಪ್ರವಾಸಿ ಮತ್ತು ಧಾರ್ಮಿಕ ತಾಣವನ್ನಾಗಿ ಪರಿವರ್ತಿಸಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿದರೆ ಮುಂದಿನ ಪೀಳಿಗೆಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ತಿಮ್ಮಪ್ಪನ ಭಕ್ತರು ಮತ್ತು ಸ್ಥಳೀಯರು ಹೇಳುತ್ತಿದ್ದಾರೆ.

Get real time updates directly on you device, subscribe now.

Comments are closed.

error: Content is protected !!